ಪಿಎಂಇಂಡಿಯಾ

ಹುಡುಕಿ
 • ಡಾ. ಮನಮೋಹನಸಿಂಗ್

  ಡಾ. ಮನಮೋಹನಸಿಂಗ್

  May 22, 2004 - May 26, 2014

  ಭಾರತದ ಹದಿನಾಲ್ಕನೇ ಪ್ರಧಾನಮಂತ್ರಿ ಡಾ. ಮನಮೋಹನಸಿಂಗ್ ಅವರನ್ನು ಚಿಂತಕರು ಮತ್ತು ವಿದ್ವಾಂಸರೆಂದು ಸರಿಯಾಗಿಯೇ ಕರೆಯಲಾಗಿದೆ. ನಿಗರ್ವಿಗಳಾದ ಇವರು ತಮ್ಮ ಶೈಕ್ಷಣಿಕ ಮತ್ತು ಕರ್ತವ್ಯ ಎರಡರಲ್ಲೂ ಶ್ರದ್ಧೆ ಹಾಗೂ ವಿನೀತಭಾವನೆಯಿಂದ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಧಾನಮಂತ್ರಿ ಮನಮೋಹನಸಿಂಗ್ ಅವರು 1932ರ ಸೆಪ್ಟೆಂಬರ್ 26ರಂದು ಅವಿಭಜಿತ ಭಾರತದಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದರು. ಡಾ. ಸಿಂಗ್ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು 1948ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದರು. ಅವರ ಶೈಕ್ಷಣಿಕ ಸಾಧನೆ ಅವರನ್ನು ಪಂಜಾಬ್ ನಿಂದ ಇಂಗ್ಲೆಂಡ್ ನ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ...

  ಹೆಚ್ಚಿನ ದಾಖಲೆ ಲಿಂಕ್
 • ಶ್ರೀ ಅಟಲ್ ಬಿಹಾರಿ ವಾಜಪೇಯಿ

  ಶ್ರೀ ಅಟಲ್ ಬಿಹಾರಿ ವಾಜಪೇಯಿ

  March 19, 1998 - May 22, 2004

  ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತಶತ್ರು, ತಮ್ಮ ರಾಜಕೀಯ ಚಿಂತನೆಗಳಿಗೆ ಕಟಿಬದ್ಧರಾದವರು. ಅಕ್ಟೋಬರ್ 13, 1999ರಲ್ಲಿ, ಹೊಸ ಸಮ್ಮಿಶ್ರ ಸರ್ಕಾರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಮುಖ್ಯಸ್ಥರಾಗಿ ಎರಡನೇ ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1996ರಲ್ಲಿ ಇವರು ಅಲ್ಪಾವಧಿಗೆ ಪ್ರಧಾನಮಂತ್ರಿಯಾಗಿದ್ದರು. ಪಂಡಿತ್ ಜವಾಹರ್ ಲಾಲ್ ನೆಹರು ಅವರ ನಂತರ ಭಾರತದ ಪ್ರಧಾನಮಂತ್ರಿಯಾಗಿ ಸತತ ಎರಡು ಬಾರಿ ಸೇವೆ ಸಲ್ಲಿಸಿದ ಪ್ರಥಮ ಪ್ರಧಾನಮಂತ್ರಿ ಎಂಬು ಹೆಗ್ಗಳಿಗೆ ಇವರು ಪಾತ್ರರಾಗಿದ್ದಾರೆ. ಹಿರಿಯ ಸಂಸದೀಯ ...

  ಹೆಚ್ಚಿನ ದಾಖಲೆ ಲಿಂಕ್
 • ಶ್ರೀ ಇಂದರ್ ಕುಮಾರ್ ಗುಜ್ರಾಲ್

  ಶ್ರೀ ಇಂದರ್ ಕುಮಾರ್ ಗುಜ್ರಾಲ್

  April 21, 1997 - March 19, 1998

  ಶ್ರೀ ಇಂದರ್ ಕುಮಾರ್ ಗುಜ್ರಾಲ್ ಅವರು 21ನೇ ಏಪ್ರಿಲ್ 1997ರಂದು, ಸೋಮವಾರ ಭಾರತದ 12ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದಿವಂಗತ ಶ್ರೀ ಅವತಾರ್ ನಾರಾಯಣ್ ಗುಜ್ರಾಲ್ ಮತ್ತು ದಿವಂಗತ ಶ್ರೀಮತಿ ಪುಪ್ಷಾ ಗುಜ್ರಾಲ್ ಅವರ ಪುತ್ರರಾದ ಶ್ರೀ ಗುಜ್ರಾಲ್ ಅವರು ಎಂ.ಎ., ಬಿ.ಕಾಂ., ಪಿಎಚ್.ಡಿ ಹಾಗೂ ಡಿ.ಲಿಟ್ (ಹಾನರ್ಸ್ ಕೌಸಾ) ಪದವಿಗಳನ್ನು ಪಡೆದಿದ್ದಾರೆ. ಇವರು 4ನೇ ಡಿಸೆಂಬರ್ 1919ರಂದು ಜೆಲಮ್ (ಅವಿಭಜಿತ ಪಂಜಾಬ್) ಪಟ್ಟಣದಲ್ಲಿ ಜನಿಸಿದರು. ಅವರು ಮತ್ತು ಶ್ರೀಮತಿ ಶೈಲಾ ಗುಜ್ರಾಲ್ ...

  ಹೆಚ್ಚಿನ ದಾಖಲೆ ಲಿಂಕ್
 • ಶ್ರೀ ಹೆಚ್.ಡಿ.ದೇವೇಗೌಡ

  ಶ್ರೀ ಹೆಚ್.ಡಿ.ದೇವೇಗೌಡ

  June 1, 1996 - April 21, 1997

  ಶ್ರೀ ಹೆಚ್.ಡಿ.ದೇವೇಗೌಡರ ಅವರು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಸುಧಾರಕರು ಹಾಗೂ ಭಾರತದ ಭವ್ಯ ಸಂಸ್ಕøತಿ ಪರಂಪರೆಯ ಪ್ರಶಂಸಕರು. ಇವರು ಮೇ 18, 1933ರಂದು ಕರ್ನಾಟಕದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂದ ಡಿಪ್ಲೊಮಾ ಪಡೆದಿರುವ ಶ್ರೀದೇವೇಗೌಡರು 20 ವರ್ಷದ ಯುವಕನಾಗಿದ್ದಾಗಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. ಶಿಕ್ಷಣ ಪೂರೈಸಿದ ನಂತರ 1953ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ 1962ರ ತನಕ ಆ ಪಕ್ಷದಲ್ಲೇ ಸದಸ್ಯರಾಗಿ ಉಳಿದಿದ್ದರು. ಮಧ್ಯಮ ವರ್ಗದ ಕೃಷಿ ಕುಟುಂಬದ ಹಿನ್ನೆಲೆಯಿಂದ ...

  ಹೆಚ್ಚಿನ ದಾಖಲೆ ಲಿಂಕ್
 • ಶ್ರೀ ಅಟಲ್ ಬಿಹಾರಿ ವಾಜಪೇಯಿ

  ಶ್ರೀ ಅಟಲ್ ಬಿಹಾರಿ ವಾಜಪೇಯಿ

  May 16, 1996 - June 1, 1996

  ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತಶತ್ರು, ತಮ್ಮ ರಾಜಕೀಯ ಚಿಂತನೆಗಳಿಗೆ ಕಟಿಬದ್ಧರಾದವರು. ಅಕ್ಟೋಬರ್ 13, 1999ರಲ್ಲಿ, ಹೊಸ ಸಮ್ಮಿಶ್ರ ಸರ್ಕಾರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಮುಖ್ಯಸ್ಥರಾಗಿ ಎರಡನೇ ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1996ರಲ್ಲಿ ಇವರು ಅಲ್ಪಾವಧಿಗೆ ಪ್ರಧಾನಮಂತ್ರಿಯಾಗಿದ್ದರು. ಪಂಡಿತ್ ಜವಾಹರ್ ಲಾಲ್ ನೆಹರು ಅವರ ನಂತರ ಭಾರತದ ಪ್ರಧಾನಮಂತ್ರಿಯಾಗಿ ಸತತ ಎರಡು ಬಾರಿ ಸೇವೆ ಸಲ್ಲಿಸಿದ ಪ್ರಥಮ ಪ್ರಧಾನಮಂತ್ರಿ ಎಂಬು ಹೆಗ್ಗಳಿಗೆ ಇವರು ಪಾತ್ರರಾಗಿದ್ದಾರೆ. ಹಿರಿಯ ಸಂಸದೀಯ ...

  ಹೆಚ್ಚಿನ ದಾಖಲೆ ಲಿಂಕ್
 • ಶ್ರೀ ಪಿ.ವಿ.ನರಸಿಂಹರಾವ್

  ಶ್ರೀ ಪಿ.ವಿ.ನರಸಿಂಹರಾವ್

  June 21, 1991- May 16, 1996

  ಶ್ರೀ ಪಿ.ರಂಗರಾವ್ ಅವರ ಪುತ್ರರಾದ ಶ್ರೀ ಪಿ.ವಿ.ನರಸಿಂಹ ರಾವ್ ಅವರು ಜೂನ್ 28, 1921ರಲ್ಲಿ ಕರೀಂನಗರದಲ್ಲಿ ಜನಿಸಿದರು. ಅವರು ಹೈದರಾಬಾದ್ನ ಓಸ್ಮಾನಿಯಾ ವಿಶ್ವವಿದ್ಯಾಲಯ, ಬಾಂಬೆ ವಿಶ್ವವಿದ್ಯಾಲಯ ಮತ್ತು ನಾಗ್ಪುರ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಶ್ರೀ ಪಿ.ವಿ.ನರಸಿಂಹ ರಾವ್ ಅವರಿಗೆ ಮೂವರು ಪುತ್ರರು ಮತ್ತು ಐವರು ಪುತ್ರಿಯರಿದ್ದಾರೆ. ಕೃಷಿ ಮತ್ತು ಓರ್ವ ವಕೀಲರಾದ ಅವರು ರಾಜಕೀಯ ಪ್ರವೇಶಿಸಿ ಕೆಲವು ಮುಖ್ಯ ಖಾತೆಗಳನ್ನು ನಿರ್ವಹಿಸಿದರು. ಅವರು ಆಂಧ್ರಪ್ರದೇಶ ಸರ್ಕಾರದಲ್ಲಿ 1962-64ರವರೆಗೆ ಕಾನೂನು ಮತ್ತು ವಾರ್ತಾ ಸಚಿವರು ...

  ಹೆಚ್ಚಿನ ದಾಖಲೆ ಲಿಂಕ್
 • ಶ್ರೀ ಚಂದ್ರಶೇಖರ್

  ಶ್ರೀ ಚಂದ್ರಶೇಖರ್

  November 10, 1990 - June 21, 1991

  ಶ್ರೀಚಂದ್ರಶೇಖರ್ ಅವರು ಜುಲೈ 1, 1927ರಂದು ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಇಬ್ರಾಹಿಂಪಟ್ಟಿ ಗ್ರಾಮದ ಕೃಷಿ ಕುಟುಂಬವೊಂದರಲ್ಲಿ ಜನಿಸಿದರು. ಅವರು 1977 ರಿಂದ 1988ರ ತನಕ ಜನತಾ ಪಕ್ಷದ ಅಧ್ಯಕ್ಷರಾಗಿದ್ದರು. ಶ್ರೀಚಂದ್ರಶೇಖರ್ ಅವರು ವಿದ್ಯಾರ್ಥಿ ದಿನಗಳಿಂದಲೇ ರಾಜಕೀಯದತ್ತ ಆಕರ್ಷಿತರಾಗಿದ್ದರು ಹಾಗೂ ಕ್ರಾಂತಿಕಾರಿ ಬೇಗೆಯೊಂದಿಗೆ ಬೆಂಕಿ ಚೆಂಡಿನಂಥ ಯುವ ನಾಯಕರಾಗಿ ಗುರುತಿಸಿಕೊಂಡಿದ್ದರು. ಅಲಹಾಬಾದ್ ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ನಂತರ (1950-51) ಅವರು ಸಮಾಜವಾದಿ ಚಳವಳಿಗೆ ಧುಮುಕಿದರು. ಅವರು ಆಚಾರ್ಯ ನರೇಂದ್ರ ದೇವ್ ಅವರ ...

  ಹೆಚ್ಚಿನ ದಾಖಲೆ ಲಿಂಕ್
 • ಶ್ರೀ ವಿಶ್ವನಾಥ್ ಪ್ರತಾಪ್ ಸಿಂಗ್

  ಶ್ರೀ ವಿಶ್ವನಾಥ್ ಪ್ರತಾಪ್ ಸಿಂಗ್

  December 2, 1989 - November 10, 1990

  ಶ್ರೀ ವಿ.ಪಿ.ಸಿಂಗ್ ಅವರು ಜೂನ್ 25, 1931ರಂದು ಅಲಹಾಬಾದ್ನಲ್ಲಿ ರಾಜಾ ಬಹದ್ದೂರ್ ರಾಮ್ ಗೋಪಾಲ್ ಸಿಂಗ್ ಅವರ ಪುತ್ರರಾಗಿ ಜನಿಸಿದರು. ಅವರು ಅಲಹಾಬಾದ್ ಮತ್ತು ಪೂನಾ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದರು. ಅವರು ಜೂನ್ 25, 1955ರಲ್ಲಿ ಶ್ರೀಮತಿ ಸೀತಾ ಕುಮಾರಿ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಪುತ್ರರಿದ್ದಾರೆ. ವಿಧ್ವಾಂಸರಾಗಿದ್ದ ಅವರು ಅಲಹಾಬಾದ್ನ ಕೊರೊಅನ್ ಇಂಟರ್ಮಿಡಿಯೇಟ್ ಕಾಲೇಜು ಆದ ಗೋಪಾಲ ವಿದ್ಯಾಲಯದ ಹೆಮ್ಮೆಯ ಸಂಸ್ಥಾಪಕರು. 1947-48ರಲ್ಲಿ ಅವರು ವಾರಾಣಾಸಿಯ ಉದಯ್ ಪ್ರತಾಪ್ ಕಾಲೇಜಿನಲ್ಲಿ ವಿದ್ಯಾರ್ಥಿ ...

  ಹೆಚ್ಚಿನ ದಾಖಲೆ ಲಿಂಕ್
 • ಶ್ರೀ ರಾಜೀವ್ ಗಾಂಧಿ

  ಶ್ರೀ ರಾಜೀವ್ ಗಾಂಧಿ

  October 31, 1984 - December 2, 1989

  ಶ್ರೀ ರಾಜೀವ್ ಗಾಂಧಿ ಅವರು 40ನೇ ವಯಸ್ಸಿಗೆ ಭಾರತದ ಯುವ ಪ್ರಧಾನಮಂತ್ರಿಯಾದರು. ಅಷ್ಟೇ ಏಕೆ ಅವರು ವಿಶ್ವದ ಸರ್ಕಾರದ ಅತ್ಯಂತ ಕಿರಿಯ ಮುಖ್ಯಸ್ಥರೆಂಬ ಹೆಗ್ಗಳಿಕೆ ಪಡೆದರು. ಅವರ ತಾಯಿ ಶ್ರೀಮತಿ ಇಂದಿರಾ ಗಾಂಧಿಯವರು 1966ರಲ್ಲಿ 48ನೇ ವಯಸ್ಸಿನಲ್ಲಿ ಪ್ರಧಾನಮಂತ್ರಿಯಾದರು. ಇವರ ತಾತ ಪಂಡಿತ್ ಜವಾಹರ್ಲಾಲ್ ನೆಹರು ಅವರು 58ನೇ ವಯಸ್ಸಿನಲ್ಲಿಯೇ ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿಯಾಗಿ 17 ವರ್ಷಗಳ ಸುದೀರ್ಘ ಕಾಲ ಆಳಿದರು. ರಾಷ್ಟ್ರದಲ್ಲಿ ಹೊಸ ಪೀಳಿಗೆ ಪರಿವರ್ತನೆಯ ಮುನ್ಸೂಚಕರಾದ ಶ್ರೀ ರಾಜೀವ್ ...

  ಹೆಚ್ಚಿನ ದಾಖಲೆ ಲಿಂಕ್
 • ಶ್ರೀಮತಿ. ಇಂದಿರಾ ಗಾಂಧಿ

  ಶ್ರೀಮತಿ. ಇಂದಿರಾ ಗಾಂಧಿ

  January 14, 1980 - October 31, 1984

  ನವೆಂಬರ್ 19, 1917ರಂದು ಸುಪ್ರಸಿದ್ಧ ಕುಟುಂಬವೊಂದರಲ್ಲಿ ಜನಿಸಿದ ಶ್ರೀಮತಿ ಇಂದಿರಾ ಗಾಂಧಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಪುತ್ರಿ . ಅವರು ಸ್ವಿಟ್ಜಲ್ಯಾಂಡ್ನ ಎಕೊಲೆ ನವೊಲೆ, ಬೆಕ್ಸ್, ಜಿನೆವಾದ ಎಕೊಲೆ ಇಂಟರ್ನ್ಯಾಷನಲ್, ಪೂನಾ ಮತ್ತು ಮುಂಬಯಿಯ ಪ್ಯೂಪಿಲ್ಸ್ ಓನ್ ಸ್ಕೂಲ್, ಬ್ರಿಸ್ಟ್ಟಾಲ್ನ ಬ್ಯಾಡ್ಮಿಂಟನ್ ಸ್ಕೂಲ್, ಶಾಂತಿನಿಕೇತನದ ವಿಶ್ವಭಾರತಿ, ಆಕ್ಸ್ಫರ್ಡ್ನ ಸೊಮರ್ವಿಲ್ಲೆ ಕಾಲೇಜ್ ಮುಂತಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವಿಧ್ಯಾಭ್ಯಾಸ ಪೂರೈಸಿದರು. ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನೂ ನೀಡಿ ಗೌರವಿಸಿದವು. ...

  ಹೆಚ್ಚಿನ ದಾಖಲೆ ಲಿಂಕ್
 • ಶ್ರೀ ಚರಣ್ ಸಿಂಗ್

  ಶ್ರೀ ಚರಣ್ ಸಿಂಗ್

  July 28, 1979 - January 14, 1980

  ಶ್ರೀ ಚರಣ್ ಸಿಂಗ್ ಅವರು ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಮಧ್ಯಮ ವರ್ಗದ ರೈತಾಪಿ ಕುಟುಂಬವೊಂದರಲ್ಲಿ 1902ರಲ್ಲಿ ಜನಿಸಿದರು. ಅವರು 1923ರಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದರು. 1925ರಲ್ಲಿ ಆಗ್ರಾ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. ಕಾನೂನು ಶಿಕ್ಷಣವನ್ನು ಪಡೆದ ಅವರು ಗಾಝಿಯಾಬಾದ್ನಲ್ಲಿ ತಮ್ಮ ಅಭ್ಯಾಸ ಪ್ರಾರಂಭಿಸಿದರು. ಬಳಿಕ 1929ರಲ್ಲಿ ಮೀರತ್ಗೆ ತೆರಳಿ ಅಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಶ್ರೀ ಚರಣ್ ಸಿಂಗ್ ಅವರು 1937ರಲ್ಲಿ ಉತ್ತರ ಪ್ರದೇಶದ ಛಪ್ರೌಲಿ ...

  ಹೆಚ್ಚಿನ ದಾಖಲೆ ಲಿಂಕ್
 • ಶ್ರೀ ಮೊರಾರ್ಜಿ ದೇಸಾಯಿ

  ಶ್ರೀ ಮೊರಾರ್ಜಿ ದೇಸಾಯಿ

  March 24, 1977 - July 28, 1979

  ಶ್ರೀ ಮೊರಾರ್ಜಿ ದೇಸಾಯಿ ಅವರು ಫೆಬ್ರವರಿ 29, 1896ರಲ್ಲಿ ಗುಜರಾತ್ನ ಈಗಿನ ಬಲ್ಸುರ್ ಜಿಲ್ಲೆಯ ಭೆದೆಲಿ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಶಾಲಾ ಶಿಕ್ಷಕರು ಹಾಗೂ ಕಟ್ಟುನಿಟ್ಟಿನ ಮನುಷ್ಯರಾಗಿದ್ದರು. ಬಾಲ್ಯದಿಂದಲೂ ಮೊರಾರ್ಜಿ ದೇಸಾಯಿ ಅವರು ತಮ್ಮ ತಂದೆಯಿಂದ ಪರಿಶ್ರಮ ಮತ್ತು ಎಲ್ಲ ಸನ್ನಿವೇಶದಲ್ಲೂ ಸತ್ಯಸಂದತೆಯ ಮೌಲ್ಯಗಳನ್ನು ಕಲಿತರು. ಸೇಂಟ್ ಬುಸರ್ ಹೈಸ್ಕೂಲ್ನಲ್ಲಿ ಶಾಲಾ ಶಿಕ್ಷಣ ಪಡೆದ ಅವರು ತಮ್ಮ ಮೆಟ್ರಿಕ್ಯೂಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ನಂತರ 1918ರಲ್ಲಿ ಆಗಿನ ಬಾಂಬೆ ಪ್ರಾಂತ್ಯದ ವಿಲ್ಸನ್ ಸಿವಿಲ್ ...

  ಹೆಚ್ಚಿನ ದಾಖಲೆ ಲಿಂಕ್
 • ಶ್ರೀಮತಿ. ಇಂದಿರಾ ಗಾಂಧಿ

  ಶ್ರೀಮತಿ. ಇಂದಿರಾ ಗಾಂಧಿ

  January 24, 1966 - March 24, 1977

  ನವೆಂಬರ್ 19, 1917ರಂದು ಸುಪ್ರಸಿದ್ಧ ಕುಟುಂಬವೊಂದರಲ್ಲಿ ಜನಿಸಿದ ಶ್ರೀಮತಿ ಇಂದಿರಾ ಗಾಂಧಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಪುತ್ರಿ . ಅವರು ಸ್ವಿಟ್ಜಲ್ಯಾಂಡ್ನ ಎಕೊಲೆ ನವೊಲೆ, ಬೆಕ್ಸ್, ಜಿನೆವಾದ ಎಕೊಲೆ ಇಂಟರ್ನ್ಯಾಷನಲ್, ಪೂನಾ ಮತ್ತು ಮುಂಬಯಿಯ ಪ್ಯೂಪಿಲ್ಸ್ ಓನ್ ಸ್ಕೂಲ್, ಬ್ರಿಸ್ಟ್ಟಾಲ್ನ ಬ್ಯಾಡ್ಮಿಂಟನ್ ಸ್ಕೂಲ್, ಶಾಂತಿನಿಕೇತನದ ವಿಶ್ವಭಾರತಿ, ಆಕ್ಸ್ಫರ್ಡ್ನ ಸೊಮರ್ವಿಲ್ಲೆ ಕಾಲೇಜ್ ಮುಂತಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವಿಧ್ಯಾಭ್ಯಾಸ ಪೂರೈಸಿದರು. ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನೂ ನೀಡಿ ಗೌರವಿಸಿದವು. ...

  ಹೆಚ್ಚಿನ ದಾಖಲೆ ಲಿಂಕ್
 • ಶ್ರೀ ಗುಲ್ಜಾರಿ ಲಾಲ್ ನಂದಾ

  ಶ್ರೀ ಗುಲ್ಜಾರಿ ಲಾಲ್ ನಂದಾ

  January 11, 1966 - January 24, 1966

  ಜುಲೈ 4, 1898ರಲ್ಲಿ ಪಂಜಾಬ್ನ ಸಿಯಾಲ್ಕೋಟ್ನಲ್ಲಿ ಜನಿಸಿದ ಶ್ರೀ ಗುಲ್ಜಾರಿ ಲಾಲ್ ನಂದಾ ಅವರು ಲಾಹೋರ್, ಆಗ್ರಾ ಮತ್ತು ಅಲಹಾಬಾದ್ನಲ್ಲಿ ಶಿಕ್ಷಣವನ್ನು ಪಡೆದರು. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ 1920ರಿಂದ 21ರವರಗೆ ಕಾರ್ಮಿಕ ಸಮಸ್ಯೆಗಳ ಕುರಿತು ಸಂಶೋಧನಾ ವಿದ್ಯಾಥಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ. ನಂದಾ ಬಳಿಕ 1921ರಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಮುಂಬಯಿಯ ನ್ಯಾಷನಲ್ ಕಾಲೇಜನ್ನು ಸೇರಿದರು. ಅದೇ ವರುಷ ಅವರು ಅಸಹಕಾರ ಚಳುವಳಿಯನ್ನು ಸೇರಿದರು. 1922ರಲ್ಲಿ ಅಹಮದಾಬಾದ್ ಜವುಳಿ ಕಾರ್ಮಿಕರ ಸಂಘದ ಕಾರ್ಯದರ್ಶಿಯಾದರು. 1946ರವರಗೆ ...

  ಹೆಚ್ಚಿನ ದಾಖಲೆ ಲಿಂಕ್
 • ಶ್ರೀ. ಲಾಲ್ ಬಹಾದ್ದೂರ್ ಶಾಸ್ತ್ರಿ

  ಶ್ರೀ. ಲಾಲ್ ಬಹಾದ್ದೂರ್ ಶಾಸ್ತ್ರಿ

  June 9, 1964 - January 11, 1966

  ಉತ್ತರ ಪ್ರದೇಶದ ವಾರಾಣಸಿಯಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಪುಟ್ಟ ಹಳ್ಳಿ ಮುಗಲ್ಸರಾಯಿಯಲ್ಲಿ ಅಕ್ಟೋಬರ್ 2, 1904ರಂದು ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿ ಜನಿಸಿದರು. ಲಾಲ್ ಬಹಾದ್ದೂರ್ ಶಾಸ್ತ್ರಿಯವರ ತಂದೆ ಒಬ್ಬ ಶಾಲಾ ಶಿಕ್ಷಕರಾಗಿದ್ದರು ಮತ್ತು ಶಾಸ್ತ್ರಿಯವರು ಒಂದೂವರೆ ವರ್ಷದವರಾಗಿರುವಾಗಲೇ ಅವರು ತೀರಿಕೊಂಡರು. ಆಗ ಇಪ್ಪತ್ತು ವಯಸ್ಸಿನ ಅವರ ತಾಯಿ ತಮ್ಮ ಹದಿಮೂರು ಮಕ್ಕಳ ಜತೆ ತವರು ಮನೆ ಸೇರಿ ಅಲ್ಲೇ ಉಳಿದರು. ಲಾಲ್ ಬಹಾದ್ದೂರ್ ಅವರ ಪುಟ್ಟ ಹಳ್ಳಿಯ ಶಿಕ್ಷಣ ಯಾವ ರೀತಿಯಲ್ಲೂ ...

  ಹೆಚ್ಚಿನ ದಾಖಲೆ ಲಿಂಕ್
 • ಶ್ರೀ ಗುಲ್ಜಾರಿ ಲಾಲ್ ನಂದಾ

  ಶ್ರೀ ಗುಲ್ಜಾರಿ ಲಾಲ್ ನಂದಾ

  May 27, 1964 - June 9, 1964

  ಜುಲೈ 4, 1898ರಲ್ಲಿ ಪಂಜಾಬ್ನ ಸಿಯಾಲ್ಕೋಟ್ನಲ್ಲಿ ಜನಿಸಿದ ಶ್ರೀ ಗುಲ್ಜಾರಿ ಲಾಲ್ ನಂದಾ ಅವರು ಲಾಹೋರ್, ಆಗ್ರಾ ಮತ್ತು ಅಲಹಾಬಾದ್ನಲ್ಲಿ ಶಿಕ್ಷಣವನ್ನು ಪಡೆದರು. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ 1920ರಿಂದ 21ರವರಗೆ ಕಾರ್ಮಿಕ ಸಮಸ್ಯೆಗಳ ಕುರಿತು ಸಂಶೋಧನಾ ವಿದ್ಯಾಥಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ. ನಂದಾ ಬಳಿಕ 1921ರಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಮುಂಬಯಿಯ ನ್ಯಾಷನಲ್ ಕಾಲೇಜನ್ನು ಸೇರಿದರು. ಅದೇ ವರುಷ ಅವರು ಅಸಹಕಾರ ಚಳುವಳಿಯನ್ನು ಸೇರಿದರು. 1922ರಲ್ಲಿ ಅಹಮದಾಬಾದ್ ಜವುಳಿ ಕಾರ್ಮಿಕರ ಸಂಘದ ಕಾರ್ಯದರ್ಶಿಯಾದರು. 1946ರವರಗೆ ...

  ಹೆಚ್ಚಿನ ದಾಖಲೆ ಲಿಂಕ್
 • ಶ್ರೀ ಜವಾಹರ ಲಾಲ್ ನೆಹರು

  ಶ್ರೀ ಜವಾಹರ ಲಾಲ್ ನೆಹರು

  August 15, 1947 to May 27, 1964

  ಪಂಡಿತ್ ಜವಾಹರ ಲಾಲ್ ನೆಹರು ನವೆಂಬರ್ 14, 1889ರಂದು ಅಲಹಾಬಾದ್ನಲ್ಲಿ ಜನಿಸಿದರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಮನೆಯಲ್ಲೇ ಖಾಸಗಿ ಶಿಕ್ಷಕರಿಂದ ಪಡೆದರು. ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಅವರು ಇಂಗ್ಲೆಂಡಿಗೆ ತೆರಳಿದರು. ಎರಡು ವರ್ಷಗಳ ಬಳಿಕ ಅಲ್ಲಿಂದ ಹ್ಯಾರೊಗೆ ತೆರಳಿ ಕೇಂಬ್ರಿಡ್ಜ್ ವಿಶ್ವಿದ್ಯಾಲಯವನ್ನು ಸೇರಿದರು. ಅಲ್ಲಿ ಅವರು ನೈಸರ್ಗಿಕ ವಿಜ್ಞಾನದಲ್ಲಿ ಪದವಿ ಪಡೆದರು. ಅವರು 1912ರಲ್ಲಿ ಭಾರತಕ್ಕೆ ಮರಳಿ ನೇರವಾಗಿ ರಾಜಕೀಯಕ್ಕೆ ಧುಮುಕಿದರು. ವಿದೇಶಿಯರ ದಬ್ಬಾಳಿಕೆಗೆ ಒಳಗಾಗಿ ನಲುಗುತ್ತಿದ್ದ ಎಲ್ಲ ರಾಷ್ಟ್ರಗಳ ...

  ಹೆಚ್ಚಿನ ದಾಖಲೆ ಲಿಂಕ್