ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಐಐಟಿ ಗಾಂಧಿನಗರ ಸಮುಚ್ಛಯವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐಐಟಿ ಗಾಂಧಿನಗರ ಕ್ಯಾಂಪಸ್ ಅನ್ನು ದೇಶಕ್ಕೆ ಸಮರ್ಪಿಸಿದರು.
ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನದಡಿ ತರಬೇತಿ ಪಡೆಯುತ್ತಿರುವವರನ್ನು ಅವರು ಪುರಸ್ಕರಿಸಿದರು.
ಗಾಂಧಿ ನಗರದಲ್ಲಿ ಪ್ರಧಾನಮಂತ್ರಿಯವರು ದೊಡ್ಡ ಸಂಖ್ಯೆಯಲ್ಲಿದ್ದ ಐಐಟಿ ವಿದ್ಯಾರ್ಥಿಗಳೂ ಸೇರಿದಂತೆ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಿದರು. “ನೀವು ಐಐಟಿಯನ್ಸ್, ನಾನು ಟಿ-ಯನ್. ನಾನು ಯುವಕನಾಗಿದ್ದಾಗ (ಚಹಾ ಮಾರುತ್ತಿದ್ದೆ). ಕೆಲವು ವರ್ಷಗಳ ಹಿಂದೆ ಇದೇ ದಿನ, ನಾನು ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸಿದೆ. ಅಲ್ಲಿಯವರೆಗೆ ನಾನು ಎಂ.ಎಲ್.ಎ. ಸಹ ಆಗಿರಲಿಲ್ಲ. ಏನೇ ಮಾಡಿದರೂ, ನಾನು ನನ್ನ ಗರಿಷ್ಠ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾಡುತ್ತೇನೆ ಎಂದು ಆಗ ನಾನು ನಿರ್ಧರಿಸಿದೆ” ಎಂದು ಪ್ರಧಾನಿ ತಿಳಿಸಿದರು.

ಭಾರತದ ಎಲ್ಲ ಭಾಗದಲ್ಲೂ, ಎಲ್ಲ ವಯೋಮಾನದವರಲ್ಲೂ ಮತ್ತು ಸಮಾಜದ ಎಲ್ಲ ವರ್ಗದಲ್ಲೂ ಡಿಜಿಟಲ್ ಸಾಕ್ಷರತೆಯನ್ನು ಪಸರಿಸುವ ಕಾರ್ಯ ನಡೆಯುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ತಿಳಿಸಿದರು.

ಈ ದಿನ ಮತ್ತು ಯುಗದಲ್ಲಿ ನಾವು ಡಿಜಿಟಲ್ ವಿಭಜನೆಯನ್ನು ಹೊಂದಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಡಿಜಿಟಲ್ ಇಂಡಿಯಾ ಪಾದರ್ಶಕತೆ ಮತ್ತು ಉತ್ತಮ ಆಡಳಿತ ಮತ್ತು ಸಮರ್ಥ ಸೇವೆ ಒದಗಿಸುವುದನ್ನು ಖಾತ್ರಿ ಪಡೆಸಿತ್ತದೆ ಎಂದರು.
ನಮ್ಮ ಶೈಕ್ಷಣಿಕತೆ ಪರೀಕ್ಷಾ ಚಾಲಿತವಾಗಿರಬಾರದು; ಅದರ ಗಮನ ನಾವಿನ್ಯತೆಯಿಂದ ಕೂಡಿರಬೇಕು ಎಂದು ಪ್ರಧಾನಿ ಹೇಳಿದರು.

***

Your Comment

ನಿಮ್ಮ –ಮೇಲ್ ವಿಳಾಸ ಬಹಿರಂಗಗೊಳಿಸುವುದಿಲ್ಲ. Required fields are marked *

CAPTCHA Image

*