ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಐಸಿಎಸ್ಐ ಸುವರ್ಣ ಮಹೋತ್ಸವ ವರ್ಷದ ಉದ್ಘಾಟನೆ ವೇಳೆ ಕಂಪನಿ ಕಾರ್ಯದರ್ಶಿಗಳನ್ನುದ್ದೇಶಿಸಿ ಪ್ರಧಾನಿ ಭಾಷಣ

ಐಸಿಎಸ್ಐ ಸುವರ್ಣ ಮಹೋತ್ಸವ ವರ್ಷದ ಉದ್ಘಾಟನೆ ವೇಳೆ ಕಂಪನಿ ಕಾರ್ಯದರ್ಶಿಗಳನ್ನುದ್ದೇಶಿಸಿ ಪ್ರಧಾನಿ ಭಾಷಣ

ಐಸಿಎಸ್ಐ ಸುವರ್ಣ ಮಹೋತ್ಸವ ವರ್ಷದ ಉದ್ಘಾಟನೆ ವೇಳೆ ಕಂಪನಿ ಕಾರ್ಯದರ್ಶಿಗಳನ್ನುದ್ದೇಶಿಸಿ ಪ್ರಧಾನಿ ಭಾಷಣ

ಐಸಿಎಸ್ಐ ಸುವರ್ಣ ಮಹೋತ್ಸವ ವರ್ಷದ ಉದ್ಘಾಟನೆ ವೇಳೆ ಕಂಪನಿ ಕಾರ್ಯದರ್ಶಿಗಳನ್ನುದ್ದೇಶಿಸಿ ಪ್ರಧಾನಿ ಭಾಷಣ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ- ಐಸಿಎಸ್ಐ ಸುವರ್ಣ ಮಹೋತ್ಸವ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ಕಂಪನಿ ಕಾರ್ಯದರ್ಶಿಗಳನ್ನುದ್ದೇಶಿಸಿ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಐಸಿಎಸ್ಐನೊಂದಿಗೆ ತೊಡಗಿಕೊಂಡಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಕಂಪನಿಗಳು ಕಾನೂನು ಪಾಲಿಸುವಂತೆ ಮತ್ತು ಅದರ ಲೆಕ್ಕ ಪತ್ರ ಸೂಕ್ತವಾಗಿರುವಂತೆ ಖಾತ್ರಿ ಪಡಿಸುವವರೊಂದಿಗೆ ತಾವಿರುವುದು ತಮಗೆ ಸಂತಸ ತಂದಿದೆ ಎಂದರು. ದೇಶದ ಸಾಂಸ್ಥಿಕ ಸಂಸ್ಕೃತಿಯ ಸ್ಥಾಪನೆಗೆ ಅವರ ಕಾರ್ಯ ನೆರವಾಗಿದೆ ಎಂದರು. ಅವರ ಸಲಹೆ, ದೇಶದ ಸಾಂಸ್ಥಿಕ ಆಡಳಿತದ ಮೇಲೆ ಪ್ರಭಾವ ಬೀರಿದೆ ಎಂದೂ ಅವರು ಹೇಳಿದರು. ಈ ದೇಶದಲ್ಲಿ ಕೆಲವರು ಸಾಮಾಜಿಕ ಸ್ವರೂಪದಲ್ಲಿನ ಪ್ರಾಮಾಣಿಕತೆಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ ಮತ್ತು ದೇಶದ ಘನತೆಗೆ ಕುಂದು ತರುವ ಕಾರ್ಯ ಮಾಡುತ್ತಿರುತ್ತಾರೆ ಎಂದು ಪ್ರಧಾನಿ ಹೇಳಿದರು. ಇಂಥ ವ್ಯಕ್ತಿಗಳಿಂದ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.

ಸರ್ಕಾರದ ಪ್ರಯತ್ನದ ಫಲವಾಗಿ ಇಂದು ಆರ್ಥಿಕತೆ ಕಡಿಮೆ ನಗದಿನೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ದೇಶೀಯ ಒಟ್ಟು ಉತ್ಪನ್ನದ ನಗದು ಅನುಪಾತವು ನೋಟುಗಳ ಅಮಾನ್ಯೀಕರಣಕ್ಕೆ ಮೊದಲಿದ್ದ ಶೇಕಡ 12ರಿಂದ ಶೇಕಡ 9ಕ್ಕೆ ಇಳಿದಿದೆ ಎಂದು ತಿಳಿಸಿದರು. ನಿರಾಶೆಯ ಭಾವನೆ ಬಿತ್ತರಿಸಲು ಬಯಸುವ ಜನರ ವಿರುದ್ಧ ಎಚ್ಚರಿಕೆಯಿಂದ ಇರುವಂತೆ ಪ್ರಧಾನಿ ತಿಳಿಸಿದರು. ಹಿಂದಿನ ಉದಾಹರಣೆಗಳನ್ನು ನೀಡಿದ ಪ್ರಧಾನಿ, ಕಳೆದ ತ್ರೈಮಾಸಿಕದಂತೆ ವೃದ್ಧಿ ದರ ಹಿಂದೆಯೂ ಶೇಕಡ 5.7ಕ್ಕಿಂತ ಕುಸಿದಿತ್ತು ಎಂದರು. ಅಲ್ಪ ವೃದ್ಧಿ ದರದೊಂದಿಗೆ ಆ ಸಂದರ್ಭದಲ್ಲಿ ಹಣದುಬ್ಬರದ ಹೆಚ್ಚಳ, ಹೆಚ್ಚಿನ ಚಾಲ್ತಿ ಖಾತೆ ಕೊರತೆ ಮತ್ತು ಹೆಚ್ಚಿನ ವಿತ್ತೀಯ ಕೊರತೆಯೂ ಇತ್ತೆಂದರು. ಭಾರತವನ್ನು ಐದು ದುರ್ಬಲವಾದ ಆರ್ಥಿಕತೆಗಳ ಭಾಗವೆಂದು ಹಿಂದೆ ಪರಿಗಣಿಸಲಾಗಿತ್ತು, ಅದು ಜಾಗತಿಕ ಚೇತರಿಕೆಗೆ ಮರಳಿದೆ ಎಂದು ಪ್ರಧಾನಿ ಹೇಳಿದರು.

ಕಳೆದ ತ್ರೈಮಾಸಿಕದಲ್ಲಿ ವೃದ್ಧಿದರ ಇಳಿಕೆಯಾಗಿರುವುದನ್ನು ಒಪ್ಪಿಕೊಂಡ ಪ್ರಧಾನಿ, ಈ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಹಲವು ಸುಧಾರಣೆ ಸಂಬಂಧಿತ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದರು. ದೇಶದ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದಾಗಿ ತಿಳಿಸಿದರು. ಸರ್ಕಾರ ಕೈಗೊಂಡಿರುವ ಕ್ರಮಗಳ ಫಲವಾಗಿ ಮುಂಬರುವ ವರ್ಷಗಳಲ್ಲಿ ದೇಶವನ್ನು ಹೊಸ ಅಭಿವೃದ್ಧಿಯ ಹಂತಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಸಭಿಕರಿಗೆ ಪ್ರಧಾನಿ ಭರವಸೆ ನೀಡಿದರು. ಪ್ರಾಮಾಣಿಕತೆಯ ಮೇಲೆ ಕಂತನ್ನು ನೀಡಲಾಗುವುದು ಮತ್ತು ಪ್ರಾಮಾಣಿಕತೆಯ ಹಿತವನ್ನು ರಕ್ಷಿಸಲಾಗುವುದು ಎಂದು ಅವರು ಹೇಳಿದರು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೆಲವು ಪ್ರಮುಖ ವಲಯಗಳಲ್ಲಿ ಹೂಡಿಕೆ ಮತ್ತು ಹಣ ಹರಿವು ಬೃಹತ್ ಹೆಚ್ಚಳವಾಗಿರುವುದನ್ನು ಪ್ರಧಾನಿ ಒತ್ತಿ ಹೇಳಿದರು. ಈ ಅವಧಿಯಲ್ಲಿ 21 ವಲಯಗಳಲ್ಲಿ 87 ಸುಧಾರಣೆಗಳನ್ನು ಮಾಡಲಾಗಿದೆ ಎಂದರು. ಹೂಡಿಕೆಯಲ್ಲಿ ಗಣನೀಯ ಏರಿಕೆ ಆಗಿರುವುದನ್ನು ತೋರಿಸಲು ಅಂಕಿ ಅಂಶ ನೀಡಿದರು.

ಬಡವರು ಮತ್ತು ಮಧ್ಯಮವರ್ಗದವರ ಬದುಕು ಉತ್ತಮವಾಗಿ ಬದಲಾಗಿದ್ದರೂ, ಸರ್ಕಾರದ ನೀತಿ ಮತ್ತು ಯೋಜನೆಗಳಲ್ಲಿ ಅವರ ಉಳಿತಾಯದ ರಕ್ಷಣೆಯ ಖಾತ್ರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೆಲವು ಸಂದರ್ಭಗಳಲ್ಲಿ ತಾವು ಟೀಕೆಯನ್ನು ಎದುರಿಸಿದರೂ, ತಾವು ದೇಶ ಮತ್ತು ಜನತೆಯ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿರುವುದಾಗಿ ಪ್ರಧಾನಿ ಹೇಳಿದರು. ತಮ್ಮ ಅಸ್ತಿತ್ವಕ್ಕಾಗಿ ದೇಶದ ಭವಿಷ್ಯವನ್ನು ಅಡವಿಡುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.  

***

ಐಸಿಎಸ್ಐನ ಸುವರ್ಣ ಮಹೋತ್ಸವದ ಉದ್ಘಾಟನೆ ವೇಳೆ ತೋರಿಸಲಾದ ಪ್ರಾತ್ಯಕ್ಷಿಕೆ