ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೃಷಿ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಭಾರತ ಮತ್ತು ಪಿಲಿಪ್ಪೀನ್ಸ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಪಿಲಿಪ್ಪೀನ್ಸ್ ಮತ್ತು ಭಾರತ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು, ಕೃಷಿ ಕ್ಷೇತ್ರದ ದ್ವಿಪಕ್ಷೀಯ ಸಹಕಾರವನ್ನು ಸುಧಾರಿಸಲಿದೆ ಮತ್ತು ಎರಡೂ ದೇಶಗಳಿಗೆ ಪರಸ್ಪರ ಲಾಭದಾಯಕವಾಗಿದೆ.

ಎರಡೂ ದೇಶಗಳಲ್ಲಿನ ಉತ್ತಮ ಕೃಷಿ ಪದ್ಧತಿಗಳನ್ನು ಅರಿಯಲು ಇದು ಉತ್ತೇಜಿಸುತ್ತದೆ ಮತ್ತು ಉತ್ತಮ ಉತ್ಪಾದನೆಗೆ ನೆರವಾಗಲಿದೆ ಜೊತೆಗೆ ಜಾಗತಿಕ ಮಾರುಕಟ್ಟೆಯ ಪ್ರವೇಶ ಸುಧಾರಣೆ ಮಾಡಲಿದೆ.

ಈ ತಿಳಿವಳಿಕೆ ಒಪ್ಪಂದವು ಅಕ್ಕಿ ಉತ್ಪಾದನೆ ಮತ್ತು ಸಂಸ್ಕರಣೆ, ಬಹು ಬೇಸಾಯ ಪದ್ಧತಿ, ಒಣ ಭೂಮಿ ಬೇಸಾಯ ಪದ್ಧತಿ, ಜೈವಿಕ ಸಾವಯವ ಕೃಷಿ, ಘನ ಮತ್ತು ನೀರು ಸಂರಕ್ಷಣೆ ಹಾಗೂ ನಿರ್ವಹಣೆ, ಭೂಮಿಯ ಫಲವತ್ತತೆ, ರೇಷ್ಮೆ ಕೃಷಿ, ಕೃಷಿ ಅರಣ್ಯೀಕರಣ, ಜಾನುವಾರು ಸುಧಾರಣೆ ಇತ್ಯಾದಿ ಕ್ಷೇತ್ರಗಳಲ್ಲಿ ಸಹಕಾರ ಒದಗಿಸುತ್ತದೆ.

ಈ ತಿಳಿವಳಿಕೆ ಒಪ್ಪಂದವು ಸಮಾನ ಸಂಖ್ಯೆಯ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಕಾರ್ಯ ಪಡೆ ರಚನೆಗೂ ಅವಕಾಶ ಕಲ್ಪಿಸುತ್ತದೆ. ಈ ಜಂಟಿ ಕಾರ್ಯಪಡೆಯು ಪ್ರತಿ ಎರಡು ವರ್ಷಕ್ಕೊಮ್ಮೆ ಪರ್ಯಾಯವಾಗಿ ಪಿಲಿಪ್ಪೀನ್ಸ್ ಮತ್ತು ಭಾರತದಲ್ಲಿ ಸಭೆ ಸೇರಲಿದೆ.

*****