ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೆಂಪುಕೋಟೆಯ ಮಾಧವ ದಾಸ್ ಉದ್ಯಾನದಲ್ಲಿ ದಸರಾ ಆಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ; ದೇಶಕ್ಕೆ ಧನಾತ್ಮಕವಾಗಿ ಕೊಡುಗೆ ನೀಡಲು ‘ಸಂಕಲ್ಪ’ ಮಾಡುವಂತೆ ಜನತೆಗೆ ಪ್ರೋತ್ಸಾಹ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕೆಂಪುಕೋಟೆಯ ಬಳಿಯ ಮಾಧವ ದಾಸ್ ಉದ್ಯಾನದಲ್ಲಿ ದಸರಾ ಆಚರಣೆಯಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ 2022ರ ಹೊತ್ತಿಗೆ ದೇಶಕ್ಕೆ ಧನಾತ್ಮಕವಾಗಿ ಕೊಡುಗೆ ನೀಡಲು “ಸಂಕಲ್ಪ” ಮಾಡುವಂತೆ ಉತ್ತೇಜಿಸಿದರು.

“ಭಾರತೀಯ ಹಬ್ಬಗಳು ಕೇವಲ ಹಬ್ಬದ ಕಾರ್ಯಕ್ರಮಗಳಷ್ಟೇ ಅಲ್ಲ, ಅವು ಸಮಾಜಕ್ಕೆ ಅರಿವು ಮೂಡಿಸುವ ಮಾಧ್ಯಮಗಳಾಗಿವೆ, ಹಬ್ಬಗಳು ನಮಗೆ ಸಮಾಜದಲ್ಲಿನ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತವೆ, ಅವು ನಮಗೆ ಸಮುದಾಯವಾಗಿ ಒಗ್ಗೂಡಿ ಬದುಕುವುದನ್ನು ಕಲಿಸುತ್ತವೆ” ಎಂದು ಪ್ರಧಾನಿ ಹೇಳಿದರು.

ಹಬ್ಬಗಳು ನಮ್ಮ ಸಂಘಟಿತ ಶಕ್ತಿಯ, ಸಾಮಾಜಿಕ ಸಂಸ್ಕೃತಿಯ ಮೌಲ್ಯಗಳ ಮತ್ತು ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳ ಪ್ರತಿಬಿಂಬವಾಗಿವೆ ಎಂದು ಪ್ರಧಾನಿ ಹೇಳಿದರು. ಇದರ ಜೊತೆಗೆ ಅವು ಬೇಸಾಯ, ನದಿ, ಬೆಟ್ಟ, ಪ್ರಕೃತಿ ಇತ್ಯಾದಿಯೊಂದಿಗೆ ಸಂಬಂಧ ಹೊಂದಿವೆ ಎಂದು ತಿಳಿಸಿದರು.

ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ರಾವಣ, ಕುಂಭಕರ್ಣ ಮತ್ತು ಮೇಘನಾದನ ಪ್ರತಿಕೃತಿಗಳನ್ನು ದಹಿಸುವ ಕಾರ್ಯಕ್ರಮವನ್ನು ವೀಕ್ಷಿಸಿದರು.

*****