ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚೆನ್ನೈನಲ್ಲಿ ದಿನತಂತಿ ಪತ್ರಿಕೆಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರಧಾನಿ ಮಾಡಿದ ಭಾಷಣದ ಆಯ್ದ ಭಾಗ

ಚೆನ್ನೈನಲ್ಲಿ ದಿನತಂತಿ ಪತ್ರಿಕೆಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರಧಾನಿ ಮಾಡಿದ ಭಾಷಣದ ಆಯ್ದ ಭಾಗ

ಚೆನ್ನೈನಲ್ಲಿ ದಿನತಂತಿ ಪತ್ರಿಕೆಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರಧಾನಿ ಮಾಡಿದ ಭಾಷಣದ ಆಯ್ದ ಭಾಗ

ಚೆನ್ನೈನಲ್ಲಿ ದಿನತಂತಿ ಪತ್ರಿಕೆಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರಧಾನಿ ಮಾಡಿದ ಭಾಷಣದ ಆಯ್ದ ಭಾಗ

ತಮಿಳುನಾಡಿನ ಚೆನ್ನೈ ಮತ್ತು ಇತರ ಭಾಗಗಳಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ಸಂಕಷ್ಟ ಅನುಭವಿಸಿದ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನಾನು ಮೊದಲಿಗೆ ಸಾಂತ್ವನ ವ್ಯಕ್ತಪಡಿಸುತ್ತೇನೆ. ನಾನು ರಾಜ್ಯ ಸರ್ಕಾರಕ್ಕೆ ಎಲ್ಲ ಸಾಧ್ಯ ಬೆಂಬಲದ ಭರವಸೆ ನೀಡುತ್ತೇನೆ. ಹಿರಿಯ ಪತ್ರಕರ್ತ ತಿರು ಆರ್. ಮೋಹನ್ ನಿಧನಕ್ಕೆ ನಾನು ಸಂತಾಪ ಸೂಚಿಸುತ್ತೇನೆ.

ದಿನತಂತಿ ಪತ್ರಿಕೆ 75 ವರ್ಷಗಳನ್ನು ಪೂರೈಸಿದೆ. ನಾನು ತಿರು ಎಸ್.ಪಿ. ಆದಿಥನಾರ್, ತಿರು ಎಸ್.ಟಿ. ಅಧಿತನಾರ್ ಮತ್ತು ತಿರು ಬಾಲಸುಬ್ರಮಣಿಯನ್ ಅವರಿಗೆ ಅವರ ಯಶಸ್ವಿ ಪಯಣಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ. ಕಳೆದ ಏಳೂವರೆ ದಶಕಗಳಲ್ಲಿ ಅವರ ಅದ್ಭುತ ಪ್ರಯತ್ನ ತಂತಿಯನ್ನು ಕೇವಲ ತಮಿಳುನಾಡು ರಾಜ್ಯದಲ್ಲಿ ಮಾತ್ರವಷ್ಟೇ ಅಲ್ಲ, ಇಡೀ ದೇಶದಲ್ಲಿ ಒಂದು ದೊಡ್ಡ ಮಾಧ್ಯಮ ಬ್ರಾಂಡ್ ಆಗಿ ರೂಪಿಸಿದೆ. ನಾನು ತಂತಿ ಸಮೂಹದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗೆ ಈ ಯಶಸ್ಸಿಗಾಗಿ ಅಭಿನಂದನೆ ಸಲ್ಲಿಸುತ್ತೇನೆ.

ಪ್ರಸ್ತುತ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಸುದ್ದಿ ವಾಹಿನಿಗಳು ಲಕ್ಷಾಂತರ ಭಾರತೀಯರಿಗೆ ಲಭಿಸುತ್ತಿದೆ. ಆದಾಗ್ಯೂ ಕೆಲವರಿಗೆ ದಿನ ಆರಂಭವಾಗುವುದೇ ಒಂದು ಕೈಯಲ್ಲಿ ಒಂದು ಲೋಟ ಚಹಾ ಮತ್ತು ಮತ್ತೊಂದು ಕೈಯಲ್ಲಿ ಪತ್ರಿಕೆಯೊಂದಿಗೆ. ದಿನ ತಂತಿ ಈ ಆಯ್ಕೆಯನ್ನು ತಮಿಳುನಾಡಿನಲ್ಲಷ್ಟೇ ಅಲ್ಲ, ಬೆಂಗಳೂರು, ಮುಂಬೈ ಮತ್ತು ದುಬೈ ಸೇರಿ 17 ಅವೃತ್ತಿಗಳ ಮೂಲಕ ನೀಡಿದೆ ಎಂದು ನಾನು ಕೇಳಿದ್ದೇನೆ. ಕಳೆದ 75 ವರ್ಷಗಳಲ್ಲಿ ಈ ಗಣನೀಯ ವಿಸ್ತರಣೆ, ದೂರದರ್ಶಿತ್ವದ ನಾಯಕತ್ವ ಹೊಂದಿದ್ದ ಹಾಗೂ 1942ರಲ್ಲಿ ಈ ಪತ್ರಿಕೆ ಆರಂಭಿಸಿದ ತಿರು ಎಸ್.ಪಿ. ಆದಿಥನಾರ್ ಅವರಿಗೆ ಗೌರವವಾಗಿದೆ. ಮುದ್ರಣ ಕಾಗದ ಅಪರೂಪದ ವಸ್ತುವಾಗಿದ್ದ ಆ ಕಾಲದಲ್ಲಿ, ಹುಲ್ಲಿನಿಂದ ಕೈಯಿಂದ ತಯಾರಿಸಿದ ಕಾಗದದಲ್ಲಿ ಮುದ್ರಿಸುವ ಮೂಲಕ ಆರಂಭಿಸಿದ್ದರು.

ಆ ಪತ್ರಿಕೆಯ ಅಕ್ಷರದ ಗಾತ್ರ, ಸರಳ ಭಾಷೆಯ ಬಳಕೆ, ಸುಲಭವಾಗಿ ಅರ್ಥ ಮಾಡಿಕೊಳ್ಳುವಂಥ ನಿರೂಪಣೆ ದಿನತಂತಿಯನ್ನು ಜನರ ನಡುವೆ ಜನಪ್ರಿಯಗೊಳಿಸಿತು. ಆ ಕಾಲದಲ್ಲಿ, ಅದು ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸಿ, ಮಾಹಿತಿ ಪೂರೈಸಿದೆ. ಜನರು ಪತ್ರಿಕೆ ಓದಲು ಚಹಾ ಅಂಗಡಿಗಳಿಗೆ ಹೋಗುತ್ತಿದ್ದರು. ಆ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ದಿನತಂತಿಯ ಸಮತೋಲಿತ ಸುದ್ದಿ ಪ್ರಕಟಣೆ ಅದನ್ನು ದಿನಗೂಲಿ ನೌಕರರಿಂದ ಹಿಡಿದು ರಾಜ್ಯದ ಅತಿ ಉನ್ನತ ರಾಜಕಾರಣಿಗಳವರೆಗೆ ಜನಪ್ರಿಯಗೊಳಿಸಿದೆ.

ತಂತಿ ಎಂದರೆ ಟೆಲಿಗ್ರಾಂ ಎಂದು ನಾನು ಕೇಳಿ ತಿಳಿದುಕೊಂಡೆ. ದಿನ ತಂತಿ ಎಂದರೆ ಪ್ರತಿ ನಿತ್ಯದ ಟೆಲಿಗ್ರಾಂ. ಕಳೆದ 75 ವರ್ಷಗಳಲ್ಲಿ ಅಂಚೆ ಕಚೇರಿ ಪೂರೈಸುತ್ತಿದ್ದ ಸಾಂಪ್ರದಾಯಿಕ ಟೆಲಿಗ್ರಾಂ ಈಗ ಮರೆಯಾಗಿದೆ ಮತ್ತು ತನ್ನ ಅಸ್ತಿತ್ವ ಕಳೆದುಕೊಂಡಿದೆ. ಆದರೆ, ಈ ಟೆಲಿಗ್ರಾಂ ಪ್ರತಿನಿತ್ಯ ಬೆಳೆಯುತ್ತಿದೆ. ಇದು ಶ್ರಮ ಮತ್ತು ಬದ್ಧತೆ ಬೆಂಬಲಿತ ಉದಾತ್ತ ಕಲ್ಪನೆಯ ಶಕ್ತಿ.

ತಂತಿ ಸಮೂಹ ತಮಿಳು ಸಾಹಿತ್ಯ ಪ್ರೋತ್ಸಾಹಕ್ಕಾಗಿ ತನ್ನ ಸ್ಥಾಪಕ ತಿರು ಅದಿಥನಾರ್ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿದೆ ಎಂದು ಕೇಳಿ ಸಂತೋಷವಾಯಿತು. ನಾನು ಪ್ರಶಸ್ತಿ ವಿಜೇತರಾದ ತಿರು ತಮಿಳಂಬನ್, ಡಾ. ಇರಾಯಿ ಅನ್ಬು ಮತ್ತು ತಿರು ವಿ.ಜಿ. ಸಂತೋಷಮ್ ಅವರನ್ನು ಹೃತ್ಫೂರ್ವಕವಾಗಿ ಅಭಿನಂದಿಸುತ್ತೇನೆ. ಈ ಮಾನ್ಯತೆಯು ಬರವಣೆಗೆಯನ್ನು ಉದಾತ್ತ ವೃತ್ತಿಯಾಗಿ ತೆಗೆದುಕೊಂಡವರಿಗೆ ಉತ್ತೇಜನಕಾರಿ ಅಂಶವಾಗಿದೆ.

ಮಹಿಳೆಯರೇ ಮತ್ತು ಮಹನೀಯರೇ,

ಮಾನವನ ಜ್ಞಾನ ದಾಹ ನಮ್ಮ ಇತಿಹಾಸದಷ್ಟೇ ಪುರಾತನವಾದ್ದು. ಈ ಹಸಿವು ನೀಗಿಸಲು ಪತ್ರಿಕೋದ್ಯಮ ನೆರವಾಗಿದೆ. ಇಂದು ವಾರ್ತಾ ಪತ್ರಿಕೆಗಳು ಸುದ್ದಿಗಳನ್ನಷ್ಟೇ ನೀಡುತ್ತಿಲ್ಲ, ಅವು ನಮ್ಮ ಚಿಂತನೆಗಳನ್ನು ರೂಪಿಸುತ್ತಿವೆ ಮತ್ತು ವಿಶ್ವದ ಸಮ್ಯಕ್ ಸುದ್ದಿ ನೀಡುತ್ತಿವೆ. ವಿಸ್ತೃತ ಸ್ವರೂಪದಲ್ಲಿ ಹೇಳುವುದಾದರೆ, ಮಾಧ್ಯಮಗಳು ಸಮಾಜ ಪರಿವರ್ತನೆಯ ಸಾಧನಗಳಾಗಿವೆ. ಹೀಗಾಗಿಯೇ ನಾವು ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಹೇಳುತ್ತೇವೆ. ನಾನು ಇಂದು ಸಮಾಜದಲ್ಲಿ ಒಮ್ಮತ ಮೂಡಿಸಲು ಪ್ರಮುಖ ಜೀವ ಚೈತನ್ಯ ಆಗಿರುವ ಮತ್ತು ಲೇಖನಿಯ ಶಕ್ತಿಯನ್ನು ಪ್ರದರ್ಶಿಸುವವರ ಮಧ್ಯೆ ಇರುವುದುದಕ್ಕೆ ಸಂತೋಷ ಪಡುತ್ತೇನೆ.

ವಸಾಹತುಶಾಹಿಯ ಕಗ್ಗತ್ತಲ ದಿನಗಳಲ್ಲಿ, ರಾಜಾರಾಂ ಮೋಹನರಾಯ್ ಅವರ ಸಂವಾದ ಕೌಮುದಿ, ಲೋಕಮಾನ್ಯ ತಿಲಕರ ಕೇಸರಿ ಮತ್ತು ಮಹಾತ್ಮಾಗಾಂಧಿ ಅವರ ನವಜೀವನ ಪತ್ರಿಕೆಗಳು ಸ್ವಾತಂತ್ರ್ಯದ ಕಿಚ್ಚುಹಚ್ಚಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿ ತುಂಬಿದವು ಎಂದರು. ದೇಶದಾದ್ಯಂತ ಪತ್ರಿಕೋದ್ಯಮದ ಹಲವು ದಿಗ್ಗಜರು, ನಮಗೆ ಸದಾ ನೆಮ್ಮದಿಯ ಬದುಕು ನೀಡಿದ್ದಾರೆ. ಅವರು ತಮ್ಮ ಪತ್ರಿಕೆಯ ಮೂಲಕ ಸಾಮೂಹಿಕ ಒಮ್ಮತ ಮತ್ತು ಜಾಗೃತಿ ಮೂಡಿಸಿದ್ದಾರೆ. ಇದು ಆ ಸ್ಥಾಪಕ ದಿಗ್ಗಜಗಳ ಉನ್ನತ ಕಲ್ಪನೆಯ ಫಲವಾಗಿದೆ, ಹೀಗಾಗಿಯೇ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾದ ಹಲವು ಪತ್ರಿಕೆಗಳು ಇಂದಿಗೂ ತಮ್ಮ ಛಾಪು ಮೂಡಿಸುತ್ತಿವೆ.

ಸ್ನೇಹಿತರೆ,

ಪೀಳಿಗೆಗಳು ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಅಗತ್ಯವಿರುವ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ ಎಂಬುದನ್ನು ನಾವು ಎಂದಿಗೂ ಮರೆಯಬಾರದು. ಹೀಗಾಗಿಯೇ ನಾನು ಸ್ವಾತಂತ್ರ್ಯವನ್ನು ಪಡೆದಿದ್ದು. ಸ್ವಾತಂತ್ರ್ಯಾನಂತರ ನಾಗರಿಕರ ಹಕ್ಕುಗಳು ಸಾರ್ವಜನಿಕವಾಗಿ ಮಹತ್ವ ಪಡೆದವು. ಆದರೆ ಕಾಲಾನಂತರದಲ್ಲಿ ನಾವು ನಮ್ಮ ವೈಯಕ್ತಿಕ ಮತ್ತು ಸಂಘಟಿತ ಕರ್ತವ್ಯಗಳನ್ನು ಮರೆತಿರುವುದು ದೌರ್ಭಾಗ್ಯ. ಇದು ಇಂದು ನಮ್ಮ ಸಮಾಜದಲ್ಲಿ ಬೀಡುಬಿಟ್ಟಿರುವ ಹಲವು ಪಿಡುಗುಗಳಿಗೆ ಕಾರಣವಾಗಿದೆ. “ತೊಡಗಿಕೊಳ್ಳುವ, ಜವಾಬ್ದಾರಿ ಮತ್ತು ಜಾಗೃತ ನಾಗರಿಕರಿಗೆ” ಸಾಮೂಹಿಕ ಜಾಗೃತಿ ಮೂಡಿಸುವುದು ಈ ಹೊತ್ತಿನ ಅಗತ್ಯವಾಗಿದೆ. “ಅರ್ಹತೆ” ಯ ನಾಗರಿಕ ಅರ್ಥದಲ್ಲಿ “ಜವಾಬ್ದಾರಿಯುತ ಪಾಲ್ಗೊಳ್ಳುವಿಕೆ” ನಾಗರಿಕ ಅರ್ಥದಲ್ಲಿ ಸಮರ್ಪಕವಾಗಿ ಸಮತೋಲಿತವಾಗಿರಬೇಕು. ಇದು ನಮ್ಮ ಶೈಕ್ಷಣಿಕ ವ್ಯವಸ್ಥೆ ಮತ್ತು ನಮ್ಮ ರಾಜಕೀಯ ನಾಯಕರ ವರ್ತನೆಯ ಮೂಲಕ ಆಗಬೇಕು. ಆದರೆ ಮಾಧ್ಯಮಗಳು ಕೂಡ ಇದರಲ್ಲಿ ಮಹತ್ವದ ಪಾತ್ರ ನಿರ್ವಹಿಸಬೇಕಾಗಿದೆ.

ಮಹನೀಯರೇ ಮತ್ತು ಮಹಿಳೆಯರೇ

ಸ್ವಾತಂತ್ರ್ಯಕ್ಕೆ ರೂಪ ನೀಡಿದ ಹಲವು ವಾರ್ತಾ ಪತ್ರಿಕೆಗಳು, ಪ್ರಾದೇಶಿಕ ಭಾಷೆಯ ಪತ್ರಿಕೆಗಳಾಗಿವೆ. ಅಂದಿನ ಬ್ರಿಟಿಷ್ ಆಡಳಿತ ಭಾರತದ ಪ್ರಾದೇಶಿಕಾ ಭಾಷಾ ಪತ್ರಿಕೆಗಳಿಗೆ ಹೆದರುತ್ತಿತ್ತು. ಇದು ಪ್ರಾದೇಶಿಕ ಭಾಷೆಯ ಪತ್ರಿಕೆಗಳ ಬಲ. ಹೀಗಾಗಿಯೇ ಪ್ರಾದೇಶಿಕ ಭಾಷಾ ಪತ್ರಿಕೆಗಳ ಕಾಯಿದೆ 1878ರಲ್ಲಿ ಜಾರಿಗೆ ಬಂತು.

ನಮ್ಮ ವೈವಿಧ್ಯತೆಯ ದೇಶದಲ್ಲಿ, ಪ್ರಾದೇಶಿಕ ಭಾಷಾ ಪತ್ರಿಕೆಗಳು ಅಂದಿನಂತೆಯೇ ಇಂದಿಗೂ ಮಹತ್ವದ ಪಾತ್ರ ಉಳಿಸಿಕೊಂಡಿದೆ. ಅವು ಸ್ಥಳೀಯ ಜನರಿಗೆ ತಿಳಿಯುವ ಭಾಷೆಯಲ್ಲಿ ಸುದ್ದಿಯನ್ನು ಪ್ರಕಟಿಸುತ್ತವೆ. ಅವು ಶೋಷಿತ ಮತ್ತು ಸಾಮಾಜಿಕವಾಗಿ ವಂಚಿತರಾದ ವರ್ಗಗಳ ಪರ ಆಗಾಗ್ಗೆ ನಿಲ್ಲುತ್ತವೆ. ಅವುಗಳ ಶಕ್ತಿ, ಅದರ ಪರಿಣಾಮ ಮತ್ತು ಅವರ ಜವಾಬ್ದಾರಿಯನ್ನು ಎಂದಿಗೂ ಕಡೆಗಣಿಸಲು ಸಾಧ್ಯವಿಲ್ಲ. ಅವು ದೂರದೃಷ್ಟಿಯ ಪ್ರದೇಶಗಳಲ್ಲಿ ಸರ್ಕಾರದ ಉದ್ದೇಶ ಮತ್ತು ನೀತಿಗಳ ಸಂದೇಶವಾಹಕರಾಗಿವೆ. ಜೊತೆಗೆ ಅವು ಜನರ ಚಿಂತನೆಗಳು, ಭಾವನೆಗಳಿಗೆ ಕಿಡಿ ಹಚ್ಚುವವಾಗಿದೆ.

ಈ ನಿಟ್ಟಿನಲ್ಲಿ, ಇಂದು ನಮ್ಮ ಚಲನಶೀಲ ಮುದ್ರಣ ಮಾಧ್ಯಮದ ಪೈಕಿ, ಅತಿ ಹೆಚ್ಚು ಮಾರಾಟವಾಗುವ ಪತ್ರಿಕೆಗಳಲ್ಲಿ ಪ್ರಾದೇಶಿಕ ಭಾಷಾ ಪತ್ರಿಕೆಗಳು ಸೇರಿವೆ. ಇವುಗಳಲ್ಲಿ ದಿನ ತಂತಿಯೂ ಒಂದೆಂದು ಹೃದಯತುಂಬಿ ಹೇಳುತ್ತೇನೆ.

ಸ್ನೇಹಿತರೆ,

ಹೇಗೆ ಪತ್ರಿಕೆಗಳಿಗೆ ಹೊಂದುವಂತೆ ಪ್ರತಿ ದಿನ ವಿಶ್ವದಲ್ಲಿ ಸುದ್ದಿ ಹೇಗೆ ಘಟಿಸುತ್ತದೆ ಎಂದು ಜನ ಅಚ್ಚರಿ ಪಡುವುದನ್ನು ನಾನು ಕೇಳಿದ್ದೇನೆ. ಗಂಭೀರವಾದ ಟಿಪ್ಪಣಿಗಳಲ್ಲಿ, ಜಗತ್ತಿನಲ್ಲಿ ದಿನವೂ ಹೆಚ್ಚು ಹೆಚ್ಚು ಘಟನೆ ಘಟಿಸುತ್ತಿರುತ್ತದೆ ಎಂಬುದು ನಮಗೆ ತಿಳಿದಿದೆ. ಇದರಲ್ಲಿ ಯಾವುದು ಮುಖ್ಯ ಎಂದು ನಿರ್ಧರಿಸಿ ಆಯ್ಕೆ ಮಾಡುವುದು ಸಂಪಾದಕನ ಕಾರ್ಯವಾಗಿರುತ್ತದೆ. ಮೊದಲ ಪುಟದಲ್ಲಿ ಯಾವುದಕ್ಕೆ ಜಾಗ ನೀಡಬೇಕು, ಯಾವುದಕ್ಕೆ ಹೆಚ್ಚು ಜಾಗ ನೀಡಬೇಕು ಮತ್ತು ಯಾವುದನ್ನು ನಿರ್ಲಕ್ಷಿಸಬೇಕು ಎಂಬುದನ್ನು ಅವರು ನಿರ್ಧರಿಸುತ್ತಾರೆ.

ಇದು ಅವರ ಮೇಲೆ ದೊಡ್ಡ ಜವಾಬ್ದಾರಿ ಹೊರಿಸುತ್ತದೆ. ಸಂಪಾದಕೀಯದ ಸ್ವಾತಂತ್ರ್ಯವನ್ನು ಜನರ ಹಿತದೃಷ್ಟಿಯಿಂದ ವಿವೇಚನಾಯುಕ್ತವಾಗಿ ಬಳಸಬೇಕು. ಅದೇ ರೀತಿ, ಬರೆಯುವ ಸ್ವಾತಂತ್ರ್ಯ ಮತ್ತು ಏನನ್ನು ಬರೆಯಬೇಕು, ಏನನ್ನು ಸೇರಿಸಬಾರದು “ನಿಖರತೆಗಿಂತ ಕಡಿಮೆಯಾದ್ದು” ಅಥವಾ “ವಾಸ್ತವಿಕವಾಗಿ ತಪ್ಪಾಗಿರುವುದು.”ಎಂಬುದು ಸ್ವಾತಂತ್ರ್ಯದಲ್ಲಿ ಸೇರಿಲ್ಲ. ಮಹಾತ್ಮಾ ಗಾಂಧಿ ಅವರು ಹೇಳಿದಂತೆ “ಪತ್ರಿಕೆಗಳು ಸಮಾಜದ ನಾಲ್ಕನೇ ಅಂಗವಾಗಿವೆ, ಇದು ನಿಜಕ್ಕೂ ಒಂದು ಶಕ್ತಿ, ಆದರೆ ಅದರ ದುರ್ಬಳಕೆ ಅಪರಾಧ.”

ಮಾಧ್ಯಮಗಳು ಖಾಸಗಿಯವರ ಕೈಯಲ್ಲೇ ಇದ್ದರೂ, ಅದು ಸಾರ್ವಜನಿಕ ಉದ್ದೇಶಕ್ಕೆ ಶ್ರಮಿಸುತ್ತದೆ. ಪಂಡಿತರು ಹೇಳುವಂತೆ, ಕ್ರಾಂತಿಯ ಬದಲಾಗಿ ಶಾಂತಿಯ ಮೂಲಕ ಸುಧಾರಣೆ ತರುವ ಸಾಧನವಾಗಿದೆ. ಆದ್ದರಿಂದ, ಚುನಾಯಿತ ಸರ್ಕಾರ ಅಥವಾ ನ್ಯಾಯಾಂಗಕ್ಕೆ ಅದು ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿದೆ. ಮತ್ತು ಅದರ ವರ್ತನೆಯು ಸಮಾನವಾಗಿ, ಮಂಡಳಿಗಿಂತ ಮೇಲಿರಬೇಕು. ಶ್ರೇಷ್ಠ ಸಂತ ತಿರುವಳ್ಳುವರ್ ಮಾತುಗಳನ್ನು ಸ್ಮರಿಸುವುದಾದರೆ, “ಈ ಜಗತ್ತಿನಲ್ಲಿ ನೈತಿಕತೆಯನ್ನು ಹೊರತುಪಡಿಸಿ ಏನೂ ಇಲ್ಲ, ಅದು ಖ್ಯಾತಿಯನ್ನು ಮತ್ತು ಸಂಪತ್ತನ್ನು ಒಟ್ಟಿಗೆ ತರುತ್ತದೆ”.

ಸ್ನೇಹಿತರೆ,

ತಂತ್ರಜ್ಞಾನ ಮಾಧ್ಯಮದಲ್ಲಿ ದೊಡ್ಡ ಬದಲಾವಣೆ ತಂದಿದೆ. ಪ್ರಧಾನ ಶೀರ್ಷಿಕೆಗಳನ್ನು ಹಳ್ಳಿಗಳ ಕಪ್ಪು ಹಲಗೆಗಳ ಮೇಲೆ ಬರೆಯುವ ಕಾಲ ಒಂದಿತ್ತು, ಅದಕ್ಕೆ ಅದ್ಭುತ ವಿಶ್ವಾಸಾರ್ಹತೆ ಇತ್ತು. ಇಂದು, ನಮ್ಮ ಮಾಧ್ಯಮಗಳು ಹಳ್ಳಿಯ ಕಪ್ಪು ಹಲಗೆಯಿಂದ ಆನ್ ಲೈನ್ ಬುಲಿಟಿನ್ ಬೋರ್ಡ್ ವರೆಗೆ ಎಲ್ಲ ಶ್ರೇಣಿಯನ್ನು ಆವರಿಸಿವೆ.

ಶಿಕ್ಷಣ ಈಗ ಕಲಿಕೆಯ ಫಲಿತಾಂಶಗಳ ಮೇಲೆ ಹೆಚ್ಚಿನ ಗಮನಹರಿಸುತ್ತದೆ, ಅಂತೆಯೇ ವಿಷಯದ ಬಳಕೆಗೆ ಕುರಿತ ನಮ್ಮ ಮನೋಭಾವ ಬದಲಾಗಿದೆ. ಇಂದು ಪ್ರತಿಯೊಬ್ಬ ನಾಗರಿಕೂ ತಮಗೆ ಬರುವ ಸುದ್ದಿಯ ಬಗ್ಗೆ ಚರ್ಚಿಸುತ್ತಾರೆ, ವಿಶ್ಲೇಷಿಸುತ್ತಾರೆ ಮತ್ತು ನಿಖರತೆಯನ್ನು ಬಹು ಮೂಲಗಳ ಮೂಲಕ ತಾಳೆ ನೋಡುತ್ತಾರೆ. ಹೀಗಾಗಿ ಮಾಧ್ಯಮಗಳು ತಮ್ಮ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ಹೆಚ್ಚಿನ ಪ್ರಯತ್ನ ಮಾಡಬೇಕಾಗಿದೆ. ವಿಶ್ವಾಸಾರ್ಹ ಮಾಧ್ಯಮಗಳ ನಡುವಿನ ಆರೋಗ್ಯಪೂರ್ಣ ಸ್ಪರ್ಧೆ ನಮ್ಮ ಪ್ರಜಾಪ್ರಭುತ್ವದ ಆರೋಗ್ಯಕ್ಕೂ ಉತ್ತಮವಾದುದಾಗಿದೆ.

ನವೀಕರಿಸಿದ ವಿಶ್ವಾಸಾರ್ಹತೆಯ ಒತ್ತು, ನಮಗೆ ಆತ್ಮಾವಲೋಕನದ ವಿಷವಾಗಿದೆ. ಮಾಧ್ಯಮಗಳಲ್ಲಿನ ಸುಧಾರಣೆಗಳು ಯಾವಾಗ ಅಗತ್ಯವಿದೋ ಆಗ ಅದರೊಳಗೇ ಬಂದಿದೆ ಎಂದು ನಾನು ಬಲವಾಗಿ ನಂಬುತ್ತೇನೆ. ಹಲವು ಸಂದರ್ಭಗಳಲ್ಲಿ ಇಂಥ ಆತ್ಮಾವಲೋಕನ ಆಗಿರುವುದನ್ನು ನಾವು ನೋಡಿದ್ದೇವೆ. . 26/11 ರ ಮುಂಬೈ ಭಯೋತ್ಪಾದಕ ದಾಳಿಯ ವರದಿಯಲ್ಲಿ ಇದು ವೇದ್ಯವಾಗಿದೆ.

ಸ್ನೇಹಿತರೆ,

ನಾನು ನಮ್ಮ ಮೆಚ್ಚಿನ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಹೇಳಿಕೆಯನ್ನು ಉಲ್ಲೇಖಿಸಬಯಸುತ್ತೇನೆ. “ನಮ್ಮದು ಒಂದು ದೊಡ್ಡ ರಾಷ್ಟ್ರ. ನಮಗೆ ಹಲವು ಅದ್ಭುತ ಯಶೋಗಾಥೆಗಳಿವೆ, ಆದರೆ ನಾವು ಅವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತೇವೆ. ಏಕೆ?”
ನಾನು ನೋಡಿರುವಂತೆ, ಮಾಧ್ಯಮದ ಬಹಳಷ್ಟು ವಿಶ್ಲೇಷಣೆಗಳು ಇಂದು ರಾಜಕೀಯದ ಸುತ್ತ ಸುತ್ತುತ್ತಿವೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯದ ಬಗ್ಗೆ ಮಾತ್ರ ಚರ್ಚಿಸುವುದು ನ್ಯಾಯೋಚಿತವೆ. ಭಾರತವು ಕೇವಲ ರಾಜಕಾರಣಿಗಿಂತ ಮಿಗಿಲಾದ್ದು. ಇದು 125 ಕೋಟಿ ಭಾರತೀಯರಿಂದ ಆಗಿರುವುದು. ಮಾಧ್ಯಮಗಳು ಅವರ ಕಥೆಗಳು, ಮತ್ತು ಅವರ ಸಾಧನೆಗಳ ಮೇಲೆ ಹೆಚ್ಚು ಗಮನಹರಿಸುವುದನ್ನು ನೋಡಲು ಸಂತೋಷಪಡುತ್ತೇನೆ.

ಈ ಪ್ರಯತ್ನದಲ್ಲಿ, ಮೊಬೈಲ್ ಹೊಂದಿರುವ ಪ್ರತಿಯೊಬ್ಬ ನಾಗರಿರೂ ನಿಮ್ಮ ಮಿತ್ರರು. ಸಾರ್ವಜನಿಕರ ವರದಿಗಾರಿಕೆ ವ್ಯಕ್ತಿಗಥ ಯಶೋಗಾಥೆಯ ಪ್ರಸಾರ ಮತ್ತು ಹಂಚಿಕೆಯಲ್ಲಿ ಮಹತ್ವದ ಸಾಧನವಾಗುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ ಅಥವಾ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಪರಿಹಾರ ಮತ್ತು ಪರಿಹಾರ ಪ್ರಯತ್ನಗಳನ್ನು ನಿರ್ದೇಶಿಸಲು ಇದು ಅಪಾರ ಸಹಾಯ ಮಾಡುತ್ತದೆ.

ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ, ಮಾಧ್ಯಮವು ಸಾಮಾನ್ಯವಾಗಿ ಘಟನೆಯ ವಿವಿಧ ಅಂಶಗಳನ್ನು ಒಳಗೊಂಡಂತೆ ತಮ್ಮ ಅತ್ಯುತ್ತಮ ವರದಿ ಮಾಡುತ್ತವೆ. ನೈಸರ್ಗಿಕ ವಿಕೋಪಗಳು ಪ್ರಪಂಚದಾದ್ಯಂತ ಆಗಾಗ್ಗೆ ಮತ್ತು ತೀವ್ರತೆಯೊಂದಿಗೆ ಸಂಭವಿಸುತ್ತಿವೆ. ಹವಾಮಾನ ಬದಲಾವಣೆಯು ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ಸವಾಲಾಗಿದೆ. ಅದರ ವಿರುದ್ಧದ ಸಮರದಲ್ಲಿ ಮಾಧ್ಯಮಗಳು ಒಂದು ಮುನ್ನಡೆ ಸಾಧಿಸಬಹುದೇ? ಹವಾಮಾನ ಬದಲಾವಣೆಗೆ ಹೋರಾಡಲು ನಾವು ಏನು ಮಾಡಬಹುದೆಂಬ ಬಗ್ಗೆ ಜಾಗೃತಿ ಮೂಡಿಸಲು, ವರದಿ ಮಾಡಲು, ಚರ್ಚಿಸಲು, ಅಥವಾ ದಿನನಿತ್ಯದ ಸಮಯವನ್ನು ಮಾಧ್ಯಮವು ಸ್ವಲ್ಪ ಸಮಯವನ್ನು ವಿನಿಯೋಗಿಸಬಹುದೇ?

ನಾನು ಈ ಸಂದರ್ಭದಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ಮಾಧ್ಯಮಗಳ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಲು ಬಯಸುತ್ತೇನೆ. ನಾವು ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನದ ಹೊತ್ತಿಗೆ ಅಂದರೆ 2019ರ ಹೊತ್ತಿಗೆ ಸ್ವಚ್ಛ ಭಾರತ ಸಾಧಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಜನ ಜಾಗೃತಿ ಮೂಡಿಸುವಲ್ಲಿ ಮತ್ತು ಒಮ್ಮತ ಮೂಡಿಸುವಲ್ಲಿ ಮಾಡಿದ ರಚನಾತ್ಮಕವಾದ ಪಾತ್ರ ನನ್ನ ಹೃದಯ ತಟ್ಟಿದೆ. ನಾವು ನಮ್ಮ ಗುರಿ ಸಾಧಿಸಿದ್ದೇವೆ ಎಂದು ಹೇಳುವ ಮುನ್ನ ಮಾಧ್ಯಮಗಳು, ಬಾಕಿ ಇರುವ ಕೆಲಸ ಬಗ್ಗೆ ನಮಗೆ ಬೊಟ್ಟು ಮಾಡಿ ತೋರಿಸಲಿ ಎಂದು ಬಯಸುತ್ತೇನೆ.

ಮಹಿಳೆಯರೇ ಮತ್ತು ಮಹನೀಯರೇ,

ಮಾಧ್ಯಮಗಳು ಮಹತ್ವದ ಪಾತ್ರ ನಿರ್ವಹಿಸಬಲ್ಲ ಮತ್ತೂ ಒಂದು ಕ್ಷೇತ್ರವಿದೆ. ಇದು ಏಕ ಭಾರತ, ಶ್ರೇಷ್ಠ ಭಾರತ. ನಾನು ಇದನ್ನು ಒಂದು ಉದಾಹರಣೆಯೊಂದಿಗೆ ವಿವರಿಸಲು ಇಚ್ಛಿಸುತ್ತೇನೆ.

ಈ ಉದ್ದೇಶಕ್ಕಾಗಿ ಒಂದು ಪತ್ರಿಕೆ, ಒಂದು ವರ್ಷಗಳ ಕಾಲ ಪ್ರತಿ ನಿತ್ಯ ಕೆಲವು ಸಾಲುಗಳಲ್ಲಿ ಕೆಲ ಅಂಗುಲಗಳ ಜಾಗವನ್ನು ಇದಕ್ಕಾಗಿ ಮುಡಿಪಾಗಿಡಲು ಸಾಧ್ಯವೆ? ಅವು ಪ್ರತಿನಿತ್ಯ ಅವು ಒಂದು ಸರಳ ವಾಕ್ಯ ಬರೆದು ಅದನ್ನು ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಲ್ಲಿ ಭಾಷಾಂತರಿಸಿ ಮತ್ತು ಅನ್ಯ ಭಾಷೆಯಲ್ಲಿ ಯಥಾವತ್ ಅದನ್ನು ಹಾಕಬಹುದಲ್ಲವೇ

ಒಂದು ವರ್ಷದ ಕೊನೆಯ ಹೊತ್ತಿಗೆ, ಓದುಗಳು ಅಂಥ 365 ಸರಳ ವಾಕ್ಯಗಳನ್ನು ಎಲ್ಲ ಪ್ರಮುಖ ಭಾರತೀಯ ಭಾಷೆಗಳಲ್ಲಿ ನೋಡಿರುತ್ತಾರೆ. ಇದು ಉಂಟು ಮಾಡಬಹುದಾದ ಧನಾತ್ಮಕವಾದ ಪರಿಣಾಮವನ್ನು ಆಗ ನೀವೇ ನೋಡಿ. ಬಳಿಕ, ಇದರ ಬಗ್ಗೆ ಶಾಲೆಗಳ ಕೊಠಡಿಯಲ್ಲಿ ಕೆಲ ನಿಮಿಷಗಳ ಕಾಲ ಚರ್ಚಿಸಲು ಉತ್ತೇಜಿಸಿ, ಆಗ ಮಕ್ಕಳಿಗೆ ನಮ್ಮ ವೈವಿಧ್ಯತೆಯ ಶಕ್ತಿಯ ಪರಿಚಯವಾಗುತ್ತದೆ. ಈ ಪ್ರಯತ್ನ ಒಂದು ಉದಾತ್ತ ಉದ್ದೇಶವನ್ನಷ್ಟೇ ಈಡೇರಿಸುವುದಿಲ್ಲ ಜೊತೆಗೆ, ಇದು ಪತ್ರಿಕೆಯ ಬಲವನ್ನೂ ಹೆಚ್ಚಿಸುತ್ತದೆ.

ಮಹಿಳೆಯರೇ ಮತ್ತು ಮಹನೀಯರೇ,

75 ವರ್ಷ ಎನ್ನುವುದು ಮಾನವನ ಬದುಕಿನಲ್ಲಿ ಗಣನೀಯವಾದ ಸಮಯವಾಗಿದೆ. ದೇಶಕ್ಕೆ ಅಥವಾ ಸಂಸ್ಥೆಗೆ ಇದು ಒಂದು ಮೈಲಿಗಲ್ಲು ಮಾತ್ರ. ಮೂರು ತಿಂಗಳುಗಳ ಹಿಂದೆ ನಾವು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯ 75ನೇ ವರ್ಷ ಆಚರಿಸಿದೆವು. ದಿನತಂತಿಯ ಈ ಪಯಣದಲ್ಲಿ, ಭಾರತ ಯುವ ಚಲನಶೀಲ ರಾಷ್ಟ್ರವಾಗಿ ಹೊರಹೊಮ್ಮುವುದನ್ನು ಬಿಂಬಿಸಿದೆ.

ಆ ದಿನ ಸಂಸತ್ತಿನಲ್ಲಿ ಮಾತನಾಡುತ್ತಾ, ನಾನು 2022ರ ಹೊತ್ತಿಗೆ ನವ ಭಾರತ ನಿರ್ಮಾಣಕ್ಕೆ ಕರೆ ನೀಡಿದೆ. ಭ್ರಷ್ಟಾಚಾರದಿಂದ ಮುಕ್ತವಾದ, ಜಾತಿಯತೆ, ಕೋಮುವಾದ, ಬಡತನ, ಅನಕ್ಷರತೆ ಮತ್ತು ಕಾಯಿಲೆ ಮುಕ್ತವಾದ ನವ ಭಾರತದ ನಿರ್ಮಾಣಕ್ಕೆ ಕರೆ ನೀಡಿದ್ದೆ. ಮುಂದಿನ ಐದು ವರ್ಷಗಳಲ್ಲಿ ಸಂಕಲ್ಪಸಿದ್ಧಿಗೆ ಶ್ರಮಿಸುತ್ತೇವೆ. ಆಗ ಮಾತ್ರ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸು ಮಾಡಲು ಸಾಧ್ಯ. ದೇಶ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೋರಾಟ ನಡೆಸುತ್ತಿದ್ದು, ಸಂದರ್ಭದಲ್ಲಿ ಜನ್ಮ ತಳೆದ ಪತ್ರಿಕೆಯಾಗಿ, ದಿನತಂತಿಗೆ ಈ ನಿಟ್ಟನಲ್ಲಿ ಒಂದು ವಿಶೇಷ ಜವಾಬ್ದಾರಿ ಇದೆ. ಓದುಗರಿಗೆ ಮುಂದಿನ ಐದು ವರ್ಷಗಳಲ್ಲಿ ಏನು ಮಾಡ ಬೇಕು ಎಂಬ ಕುರಿತಂತೆ ನೀವು ಈ ಅವಕಾಶವನ್ನು ಬಳಸಿಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ.

ತತ್ ಕ್ಷಣದ ಐದು ವರ್ಷಗಳ ಗುರಿಯಾಚೆ, ತನ್ನ ಅಮೃತ ಮಹೋತ್ಸವ ಸಂದರ್ಭದಲ್ಲಿ, ದಿನತಂತಿ ಮುಂದಿನ 75 ವರ್ಷ ಹೇಗಿರುತ್ತದೆ ಎಂಬ ಬಗ್ಗೆ ಚಿಂತಿಸಬೇಕಾಗಿದೆ. ಪ್ರಸ್ತುತವಾಗಿ ಉಳಿಯಲು ಹೇಗೆ ಸಾಗಬೇಕು ಎಂಬ, ಅದಕ್ಕೆ ಉತ್ತಮ ಮಾರ್ಗವೇನು ಎಂದು ಚಿಂತಿಸಬೇಕಾಗಿದೆ. ಹೀಗೆ ಮಾಡುವುದರಿಂದ ವೃತ್ತಿಯ, ಸಿದ್ಧಾಂತದ ಮತ್ತು ಉದ್ದೇಶದ ಉನ್ನತ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಕೊನೆಯದಾಗಿ, ನಾನು ಮತ್ತೊಮ್ಮೆ ತಮಿಳುನಾಡಿನ ಜನತೆಯ ಸೇವೆ ಮಾಡುತ್ತಿರುವ ದಿನ ತಂತಿಯ ಪ್ರಕಾಶಕರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ನಮ್ಮ ಶ್ರೇಷ್ಠ ನಾಡಿನ ಗುರಿಯನ್ನು ರೂಪಿಸುವಲ್ಲಿ ಅವರು ರಚನಾತ್ಮಕವಾದ ಪ್ರಯತ್ನ ಮುಂದುವರಿಸುತ್ತಾರೆ ಎಂದು ಭಾವಿಸುತ್ತೇನೆ.

ಧನ್ಯವಾದಗಳು.

***