ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದಿನಾಂಕ 29 ಅಕ್ಟೋಬರ್ 2017ರಂದು ಉಜಿರೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಅಧಿಕ ಸಂಖ್ಯೆಯಲ್ಲಿ ಆಗಮಿಸಿರುವ ಪ್ರೀತಿಯ ಸಹೋದರೆ, ಸಹೋದರಿಯರೇ,

ಇಂದು ಇಲ್ಲಿಗೆ ಆಗಮಿಸಿ ಭಗವಾನ್ ಮಂಜುನಾಥನ ಚರಣ ಸ್ಪರ್ಷ ಮಾಡುವುದರ ಜತೆ ಜತೆಗೆ ತಮ್ಮೆಲ್ಲರ ದರ್ಶನ ಮಾಡುವ ಸೌಭಾಗ್ಯ ನನಗೆ ಲಭಿಸಿದೆ. ಕಳೆದ ವಾರ ನಾನು ಕೇದಾರನಾಥದಲ್ಲಿದ್ದೆ. ಸಾವಿರಾರು ವರ್ಷಗಳ ಹಿಂದೆ ಆದಿ ಶಂಕರಾಚಾರ್ಯರು ಆ ಸ್ಥಳದಲ್ಲಿ ರಾಷ್ಟ್ರೀಯ ಏಕತೆಗಾಗಿ ಎಂತಹ ಮಹಾನ್ ಸಾಧನೆ ಮಾಡಿರಬಹುದು. ಇಂದು ನನಗೆ ಮತ್ತೊಮ್ಮೆ ದಕ್ಷಿಣದಲ್ಲಿ ಮಂಜುನಾಥೇಶ್ವರನ ಚರಣಗಳಿಗೆ ಆಗಮಿಸುವ ಸೌಭಾಗ್ಯ ಲಭಿಸಿದೆ.

ಡಾಕ್ಟರ್ ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸುವ, ಸನ್ಮಾನಿಸುವ ಹಕ್ಕನ್ನು ನರೇಂದ್ರ ಮೋದಿ ಎನ್ನುವ ಯಾವುದೇ ವ್ಯಕ್ತಿ ಹೊಂದಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ವೀರೇಂದ್ರ ಹೆಗ್ಗಡೆಯವರ ತ್ಯಾಗ, ಅವರ ತಪಸ್ಸು, ಅವರ ಜೀವನ, 20 ವರ್ಷದ ಕಡಿಮೆ ವಯಸ್ಸಿನಲ್ಲಿ ಒಂದೇ ಜೀವನ, ಒಂದೇ ಗುರಿ ಎನ್ನುವ ತತ್ವಕ್ಕೆ ಅವರು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದವರು. ಈ ವಿಷಯವನ್ನು ಬಹಳ ತಡವಾಗಿ ಕೇಳಿದೆ, ಸ್ವಾಭಾವಿಕವಾಗಿ ಬಹಳ ತಡವಾಗಿದೆ.. ಇಂತಹ ಒಂದು ಮಹಾನ್ ಚೈತನ್ಯಕ್ಕೆ, ಸನ್ಮಾನ ಮಾಡಲು ನಾನು ಬಹಳ ಚಿಕ್ಕವನು. ಆದರೆ ದೇಶದ 125 ಕೋಟಿ ಜನತೆಯ ಪ್ರತಿನಿಧಿಯಾಗಿ, ಯಾವ ಸ್ಥಾನದಲ್ಲಿ ತಾವು ನನ್ನನ್ನು ಕೂರಿಸಿದ್ದೀರೋ, ಆ ಸ್ಥಾನದ ಹಿರಿಮೆಯಿಂದಾಗಿ, ಈ ಕಾರ್ಯವನ್ನು ಮಾಡಿದ ನಾನು ನನ್ನನ್ನು ಬಹಳ ಭಾಗ್ಯಶಾಲಿಯೆಂದು ಭಾವಿಸುತ್ತೇನೆ.

ಸಾರ್ವಜನಿಕ ಜೀವನದಲ್ಲಿ, ಆಧ್ಯಾತ್ಮಿಕ ಆಧಾರದ ಮೇಲೆ ಈಶ್ವರನನ್ನು ಸಾಕ್ಷಿಯನ್ನಾಗಿಸಿಕೊಂಡು, ಆಚಾರ, ವಿಚಾರದಲ್ಲಿ ಏಕತೆಯನ್ನಿಟ್ಟುಕೊಂಡು, ಮನಸ್ಸು, ಮಾತು ಮತ್ತು ಕಾರ್ಯದಲ್ಲಿ ಪವಿತ್ರತೆ ಹಾಗೂ ಜೀವನದಲ್ಲಿ ಯಾವ ಗುರಿಯನ್ನು ಇಟ್ಟುಕೊಂಡಿದ್ದರೋ, ಆ ಗುರಿಯನ್ನು ಸಾಧಿಸುವುದಕ್ಕಾಗಿ, ತನಗಾಗಿ ಅಲ್ಲದೇ, ಎಲ್ಲರಿಗಾಗಿ, ತನಗಾಗಿಯಲ್ಲದೇ, ಮತ್ತೊಬ್ಬರಿಗಾಗಿ, ನನಗಾಗಿ ಅಲ್ಲ ನಿನಗಾಗಿ, ಈ ರೀತಿಯ ಜೀವನವನ್ನು ಸಾಗಿಸುವುದು, ಪ್ರತಿಯೊಂದು ಹೆಜ್ಜೆಯಲ್ಲೂ ಒಂದು ಮಾನದಂಡವನ್ನಿಟ್ಟುಕೊಂಡು ಸಾಗಬೇಕಾಗುತ್ತದೆ. ಪ್ರತಿಯೊಂದು ಮಾನದಂಡದ ಮೂಲಕ, ಪ್ರತಿ ಮಾಪಕದ ಮೂಲಕ ತಮ್ಮ ಎಲ್ಲ ಮಾತುಗಳನ್ನು, ತಮ್ಮೆಲ್ಲ ಕಾರ್ಯಗಳನ್ನು ಅಳೆಯಲಾಗುತ್ತದೆ. ಆದುದರಿಂದ ತಮ್ಮ ಈ 50 ವರ್ಷಗಳ ಸಾಧನೆ, ಇದು ತನ್ನಂತಾನೆ ನಮ್ಮಂತಹ ಕೋಟಿ ಕೋಟಿ ಜನರಿಗೆ ಒಂದು ಪ್ರೇರಣೆಯಾಗಿದ್ದು, ನಾನು ತಮಗೆ ಗೌರವಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ, ತಮಗೆ ನಮನಗಳನ್ನು ಸಲ್ಲಿಸುತ್ತೇನೆ.

ಹೆಗ್ಗಡೆಯವರನ್ನು ಗೌರವಿಸುವ ಅವಕಾಶ ನನಗೆ ದೊರೆತಾಗ, ಬಹಳ ಸಹಜವಾಗಿ… ನಾನು ಅನೇಕ ಬಾರಿ ಹೆಗ್ಗಡೆಯವರನ್ನು ಭೇಟಿ ಮಾಡಿದ್ದೇನೆ, ಅವರ ಮುಗುಳ್ನಗು ಎಂದೂ ಮಾಸಿಲ್ಲ. ಯಾವುದೇ ಒತ್ತಡದ ಕಾರ್ಯದ ಹೊರೆ ಹೊತ್ತವರಂತೆ ಅವರು ಕಂಡು ಬರುವುದಿಲ್ಲ. ಸರಳ, ಸಹಜ, ನಿಸ್ಪೃಹ.. ಗೀತೆಯಲ್ಲಿ ಹೇಳಿರುವಂತೆ ನಿಷ್ಕಾಮ ಕರ್ಮಯೋಗ. ನಾನು ಸನ್ಮಾನ ಮಾಡುತ್ತಿದ್ದ ಸಂದರ್ಭದಲ್ಲಿ ಹೆಗ್ಗಡೆಯವರು ಹೇಳುತ್ತಿದ್ದರು, 50 ವರ್ಷಗಳು ಪೂರ್ಣಗೊಂಡವು, ಈ ಗೌರವ ಅದಕ್ಕಾಗಿ ಅಲ್ಲ, ಮುಂದಿನ 50 ವರ್ಷಗಳ ಕಾಲ ಕೂಡಾ ನಾನು ಇದೇ ರೀತಿ ಕಾರ್ಯ ನಿರ್ವಹಿಸಿಕೊಂಡು ಹೋಗುವಂತೆ ತಾವು ನನ್ನಿಂದ bhaಖಾತರಿ ಪಡೆದುಕೊಳ್ಳುತ್ತಿದ್ದೀರಿ. ಇಂತಹ ಗೌರವ, ಆದರ, ಪ್ರತಿಷ್ಠೆಗಳು ದೊರೆಯುವಂತಿದ್ದು, ಈಶ್ವರನ ಆಶೀರ್ವಾದವಿದ್ದರೆ, ಇದು 800 ವರ್ಷಗಳ ಮಹಾನ್ ತಪಸ್ಸು, ಪರಂಪರೆಯಿಂದ ದೊರೆತಿದ್ದು, ಇದೆಲ್ಲದರ ಹೊರತಾಗಿಯೂ ಜೀವನದ ಪ್ರತಿ ಹಂತವನ್ನು ಸೇವೆಗಾಗಿಯೇ ಮುಂದುವರಿಸಿಕೊಂಡು ಹೋಗುವುದನ್ನು ನಾವು ಹೆಗ್ಗಡೆಯವರಿಂದ ಕಲಿತುಕೊಳ್ಳಬೇಕಿದೆ. ಯೋಗದ ವಿಷಯವಿರಲಿ, ಶಿಕ್ಷಣದ ವಿಷಯವಿರಲಿ, ಆರೋಗ್ಯ ಕ್ಷೇತ್ರವಿರಲಿ, ಗ್ರಾಮೀಣ ಅಭಿವೃದ್ಧಿಯ ವಿಷಯವಿರಲಿ, ಬಡವರ ಕಲ್ಯಾಣ, ಮುಂದಿನ ಪೀಳಿಗೆಯ ಅಭಿವೃದ್ಧಿಗಾಗಿ ಹಾಕಿಕೊಂಡ ಯೋಜನೆಗಳಿರಲಿ, ಡಾ. ವೀರೇಂದ್ರ ಹೆಗ್ಗಡೆಯವರು ತಮ್ಮ ಚಿಂತನೆಗಳ ಮೂಲಕ, ತಮ್ಮ ಕುಶಲತೆಯ ಮೂಲಕ ಈ ಎಲ್ಲಾ ಕಾರ್ಯಗಳನ್ನು ಸ್ಥಳ, ಸಮಯ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಮುಂದುವರಿಕೊಂಡು ಹೋಗುತ್ತಿದ್ದಾರೆ. ಅನೇಕ ರಾಜ್ಯಗಳಲ್ಲಿ ಮತ್ತು ದೇಶದಲ್ಲಿ ಕೌಶಲ್ಯ ಅಭಿವೃದ್ಧಿಯ ವಿಷಯದಲ್ಲಿ ಎಷ್ಟು ಕಾರ್ಯಗಳು ನಡೆಯುತ್ತಿವೆಯೋ, ಆ ಕಾರ್ಯಗಳ ರೀತಿ, ನೀತಿಗಳು, ಕಾರ್ಯ ವಿಧಾನಗಳು ಹೇಗಿರಬೇಕು, ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂಬುದರ ಮಾದರಿ, ಇಲ್ಲಿ ಹೀಗಾಗಲೇ ಮಾಡಿ ತೋರಿಸಿರುವ ಡಾ. ವೀರೇಂದ್ರ ಹೆಗ್ಗಡೆಯವರಿಂದಲೇ ದೊರೆತಿದೆ ಎಂದು ಹೇಳಲು ನನಗೆ ಯಾವುದೇ ಸಂಕೋಚವೆನಿಸುವುದಿಲ್ಲ.

ಇಂದು, 21ನೇ ಶತಮಾನದಲ್ಲಿ, ವಿಶ್ವದ ದೊಡ್ಡ ದೊಡ್ಡ ದೇಶಗಳು ಕೌಶಲ್ಯ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುತ್ತಿವೆ. ಕೌಶಲ್ಯ ಅಭಿವೃದ್ಧಿಯನ್ನು ಪ್ರಮುಖ ವಿಷಯವನ್ನಾಗಿ ಆ ದೇಶಗಳು ಗುರುತಿಸಿಕೊಂಡಿವೆ. 80 kOTಕೋಟಿ ಜನಸಂಖ್ಯೆ ಅಂದರೆ ಶೇಕಡಾ 65 raರಷ್ಟು ಜನ 35ಕ್ಕೂ ಕಡಿಮೆ ವಯೋಮಾನದವರು ಇರುವ ಭಾರತದಂತಹ ದೇಶದಲ್ಲಿ, ಈ ಜನಸಂಖ್ಯೆಯ ಲಾಭದ ಬಗ್ಗೆ ನಾವು ಹೆಮ್ಮೆಯ ಮಾತನಾಡುತ್ತೇವೆ. ಆ ದೇಶದ ಕೌಶಲ್ಯ ಅಭಿವೃದ್ಧಿ ಅದು ಕೇವಲ ಹೊಟ್ಟೆಪಾಡಿಗಾಗಿ ಅಲ್ಲದೇ, ಭಾರತದ ಭವ್ಯ ಕನಸುಗಳನ್ನು ನನಸು ಮಾಡುವುದಕ್ಕಾಗಿ, ಕೌಶಲ್ಯತೆಯನ್ನು ಹೆಚ್ಚು ಮಾಡುವುದು, ಮುಂಬರುವ ದಿನಗಳಲ್ಲಿ ವಿಶ್ವಾದ್ಯಂತ ಇರುವ ಮಾನವ ಸಂಪನ್ಮೂಲದ ಅವಶ್ಯಕತೆಗಳನ್ನು ಪೂರ್ಣ ಮಾಡುವುದಕ್ಕಾಗಿ, ತಮ್ಮ ತೋಳುಗಳಲ್ಲಿ ಆ ಸಾಮರ್ಥ್ಯವನ್ನು ಪಡೆದುಕೊಳ್ಳುವುದು, ತಮ್ಮ ಕರಗಳಲ್ಲಿ ಆ ಸಾಮರ್ಥ್ಯವನ್ನು ಪಡೆದುಕೊಳ್ಳುವುದು, ಆ ಕೌಶಲ್ಯವನ್ನು ಸಾಧಿಸುವುದು, ಈ ವಿಷಯಗಳನ್ನು ಡಾ. ವೀರೇಂದ್ರ ಹೆಗ್ಗಡೆಯವರು ಬಹಳ ವರ್ಷಗಳ ಮೊದಲೇ ಗುರುತಿಸಿ ಆ ಕಾರ್ಯವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.

ನಾನು ಈ ಕಾರ್ಯಕ್ಕೆ ವೇಗ ನೀಡಲು ಬಯಸುತ್ತೇನೆ, ನಮ್ಮಲ್ಲಿನ ಪವಿತ್ರ ಕ್ಷೇತ್ರಗಳು ಹೇಗಿರಬೇಕು, ಸಂಪ್ರದಾಯಗಳು, ನಂಬಿಕೆ, ಪರಂಪರೆಗಳು, ಅವುಗಳ ಗುರಿ ಹೇಗಿರಬೇಕು, ಈ ವಿಷಯಗಳ ಬಗ್ಗೆ ಎಷ್ಟು ಅಧ್ಯಯನಗಳಾಗಬೇಕು, ಅದು ದುರದೃಷ್ಟವಶಾತ್ ಆಗುತ್ತಿಲ್ಲ. ಇಂದು ವಿಶ್ವದಲ್ಲಿ ಉತ್ತಮ ಗುಣಮಟ್ಟದ vaವ್ಯವಹಾರ ನಿರ್ವಹಣೆ (ಬ್ಯುಸಿನೆಸ್ ಮ್ಯಾನೇಜ್ ಮೆಂಟ್) ಶಾಲೆಗಳು ಹೇಗೆ ನಡೆಯುತ್ತಿವೆ ಎಂಬ ಬಗ್ಗೆ ಚರ್ಚೆಗಳಾಗುತ್ತವೆ. ಅವುಗಳ ಶ್ರೇಣೀಕರಣ ಕೂಡಾ ಆಗುತ್ತದೆ. ದೇಶದ ದೊಡ್ಡ ದೊಡ್ಡ paಪತ್ರಿಕೆಗಳೂ ಕೂಡಾ ಇವುಗಳ ಶ್ರೇಣೀಕರಣ ಮಾಡುತ್ತವೆ. ಆದರೆ ಇಂದು ಧರ್ಮಸ್ಥಳದಂತಹ ಪವಿತ್ರ ಸ್ಥಳಕ್ಕೆ ಬಂದು, ಡಾ. ವೀರೇಂದ್ರ ಹೆಗ್ಗಡೆಯವರ ಸನ್ನಿಧಾನಕ್ಕೆ ಆಗಮಿಸಿರುವ ನಾನು, ವಿಶ್ವದ ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಿಗೆ ಆಹ್ವಾನ ನೀಡುತ್ತೇನೆ, ದೇಶದ ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಿಗೆ ಆಹ್ವಾನ ನೀಡುತ್ತೇನೆ, ನಾವು ಆಸ್ಪತ್ರೆಗಳ samIkಸಮೀಕ್ಷೆ ಮಾಡುತ್ತೇವೆ, ಅವುಗಳ ಕಾರ್ಯ ವಿಧಾನಗಳ ಬಗ್ಗೆ ಅಧ್ಯಯನ ಮಾಡುತ್ತೇವೆ, ನಾವು ಇಂಜಿನಿಯರಿಂಗ ಕಾಲೇಜುಗಳ ಶ್ರೇಣೀಕರಣ ಮಾಡುತ್ತೇವೆ. ಆಗ್ಗಿಂದಾಗ್ಗೆ ಶೇಣೀಕರಣದ ಬಗ್ಗೆ ಚರ್ಚೆಗಳೂ ಕೂಡಾ ನಡೆಯುತ್ತವೆ, ಆದರೆ ಅನೇಕ ಶತಮಾನಗಳಿಂದ ನಮ್ಮ ದೇಶದಲ್ಲಿ ನಮ್ಮ ಋಷಿ ಮುನಿಗಳ ಪರಂಪರೆಗಳು ಯಾವು ರೀತಿಯಲ್ಲಿ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೋ, ಯಾವ ರೀತಿಯಲ್ಲಿ ಅವುಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆಯೋ, ಪೀಳಿಗೆಯಿಂದ ಪೀಳಿಗೆಗೆ ಹೇಗೆ ಪರಿವರ್ತನೆ ಮಾಡಲಾಗುತ್ತಿದೆಯೋ, ಅವುಗಳ ನಿರ್ಣಯ ಪ್ರಕ್ರಿಯೆ ಹೇಗೆ ಆಗುತ್ತಿದೆ, ಅವುಗಳ ವಿತ್ತೀಯ niನಿರ್ವಹಣೆ ಹೇಗೆ ಆಗುತ್ತದೆ. ಪಾರದರ್ಶಕತೆ ಮತ್ತು ಏಕೀಕರಣವನ್ನು ಅವರು ಹೇಗೆ ನಿರ್ವಹಣೆ ಮಾಡುತ್ತಿದ್ದಾರೆ, ವರ್ತಮಾನ ಕಾಲಕ್ಕೆ ಹೇಗೆ ಅವುಗಳನ್ನು ಪರಿವರ್ತನೆ ಮಾಡಿಕೊಳ್ಳಲಾಗುತ್ತಿದೆ, ಸಮಯ ಮತ್ತು ಕಾಲಕ್ಕೆ ತಕ್ಕಂತೆ, ಸಮಯದ ಅವಶ್ಯಕತೆಗಳಿಗೆ ಅನುಸಾರವಾಗಿ ಅವರು ಈ ಸಂಸ್ಥೆಗಳನ್ನು ಹೇಗೆ ಪ್ರೇರಣಾದಾಯಿಯನ್ನಾಗಿಸಿದ್ದಾರೆ, ಎಂಬುದರ ಚರ್ಚೆಯಾಗಬೇಕಿದೆ. ಹಿಂದೂಸ್ತಾನದಲ್ಲಿ ಈ ರೀತಿಯಾಗಿ ಒಂದೆರಡಲ್ಲ, ಸಾವಿರಾರು ಸಂಸ್ಠೆಗಳಿವೆ, ದೇಶದ ಕೋಟಿ ಕೋಟಿ ಜನರಿಗೆ ಪ್ರೇರಣೆ ನೀಡುವಂತ ಸಾವಿರಾರು ಆಂದೋಲನಗಳಿವೆ, ಸಾವಿರಾರು ಸಂಘ ಸಂಸ್ಥೆಗಳಿವೆ, ಸ್ವಯಂನಿಂದ ವಿಶ್ವದೆಡೆಗೆ ಜೀವಿಸುವಂತಹ ಪ್ರೇರಣೆ ನೀಡುತ್ತದೆ. ಇದರಲ್ಲಿ 800 v vaವರ್ಷಗಳ ಪರಂಪರೆಯುಳ್ಳ ಧರ್ಮಸ್ಥಳ ಒಂದು ಉದಾಹರಣೆಯಾಗಿದೆ.

ಪ್ರಪಂಚದ ವಿಶ್ವವಿದ್ಯಾಲಯಗಳು, ಭಾರತದಲ್ಲಿನ ಇಂತಹ ಹೋರಾಟಗಳ ಅಧ್ಯಯನ ನಡೆಸಿದರೆ ಅನುಕೂಲವಾಗುತ್ತದೆ. ನಮ್ಮಲ್ಲಿನ ವ್ಯವಸ್ಥೆಗಳ ಬಗ್ಗೆ ತಿಳಿದಾಗ ವಿಶ್ವಕ್ಕೆ ಅಚ್ಚರಿಯಾಗುತ್ತದೆ. ಯಾವ ರೀತಿಯ ವ್ಯವಸ್ಥೆಗಳಿದ್ದವು, ಸಮಾಜದ ಒಳಗೆ ಆಧ್ಯಾತ್ಮಿಕ ಚೇತನದ ಪರಂಪರೆಗಳನ್ನು ಹೇಗೆ ನಿಭಾಯಿಸಲಾಗುತ್ತಿತ್ತು, ನಮ್ಮೊಳಗೆ ಶತಮಾನಗಳಿಂದ ನಡೆದುಕೊಂಡು ಬಂದ ಒಳ್ಳೆಯತನವಿದ್ದು, ಆ ಒಳ್ಳೆಯತನದ ಬಗ್ಗೆ ಹೆಮ್ಮೆ ಪಡುತ್ತಾ ಅವುಗಳನ್ನು ಕಾಯ್ದುಕೊಳ್ಳಲು ಮತ್ತು ಇನ್ನೂ ಉತ್ತಮ ಪಡಿಸಿಕೊಳ್ಳುವ ದೊಡ್ಡ ಅವಕಾಶ ನಮ್ಮ ಮುಂದಿದೆ. ಕೇವಲ ನಂಬಿಕೆಗಳಿಗೆ ಸೀಮಿತಗೊಳ್ಳದೆ, ವೈಜ್ಞಾನಿಕ ರೀತಿ ನೀತಿಗಳ ಬಗೆಗೂ ಕೂಡಾ ದೇಶದ ಯುವ ಪೀಳಿಗೆಯನ್ನು ಸೆಳೆಯುವ ಅವಶ್ಯಕತೆ ಇದೆ ಎಂದು ನನಗೆ ಅನ್ನಿಸುತ್ತದೆ.

ಇಂದು ನನಗೆ ಇಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ರುಪೆ ಕಾರ್ಡ್ ನೀಡುವ ಅವಕಾಶ ಲಬಿಸಿತು. ಯಾವ ಸಂಸದರು ಕಳೆದ ನವಂಬರ್, ಡಿಸೆಂಬರ್, ಜನವರಿ, ಫೆಬ್ರವರಿಯಲ್ಲಿ ಸಂಸತ್ ನಲ್ಲಿ ಮಾತನಾಡಿದರೋ ಅದನ್ನು ತಾವು ಕೇಳಿರಬಹುದು, ಕೇಳಿರದಿದ್ದರೆ, ದಾಖಲೆಗಳಲ್ಲಿ ಓದಿ. ನಮ್ಮ ಮಹಾನ್ ನಾಯಕರು, ತಮ್ಮನ್ನು ತಾವು ದೊಡ್ಡ ವ್ಯಕ್ತಿಗಳೆಂದು ಭಾವಿಸಿಕೊಂಡವರು, ಮಾತುಗಾರಿಕೆಯಿಂದ ತಮಗೆ ತಾವೇ ಅತಿ ಮುಖ್ಯವೆಂದು ತಿಳಿದುಕೊಂಡವರು ಸದನದಲ್ಲಿ, ಭಾರತದಲ್ಲಿ ಅನಕ್ಷರತೆ ಇದೆ, ಬಡತನವಿದ್ದು ಈ Diಡಿಜಿಟಲ್ ವ್ಯವಹಾರ ಹೇಗೆ ನಡೆಯುತ್ತದೆ? ಜನ ನಗದು ರಹಿತ ವ್ಯವಹಾರ ಹೇಗೆ ನಡೆಸುತ್ತಾರೆ? ಇದು ಅಸಂಭವ, ಜನಗಳ ಬಳಿ ಮೊಬೈಲ್ ಫೋನ್ ಗಳಿಲ್ಲ ಎಂದು ನುಡಿದಿದ್ದರು. ಎಷ್ಟು ಕೆಟ್ಟದಾಗಿ ಮಾತನಾಡಬಹುದೋ, ಎಷ್ಟು ಕೆಟ್ಟದಾಗಿ ಯೋಚಿಸಬಹುದೋ ಅಷ್ಟು ಮಾತನಾಡಿದ್ದರು. ಆದರೆ ಇಂದು ಡಾ. ವೀರೇಂದ್ರ ಹೆಗ್ಗಡೆಯವರು, ಸದನದಲ್ಲಿ ಎತ್ತಲಾಗಿದ್ದ ಅಷ್ಟೂ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

haLLಹಳ್ಳಿಗಳಲ್ಲಿ ವಾಸಿಸುವ ನನ್ನ ಮಾತೆಯರು, ಸಹೋದರಿಯರು ಶಿಕ್ಷಿತರು ಹೌದೋ ಅಲ್ಲವೋ, ಓದು ಬರಹ ಕಲಿತಿದ್ದಾರೋ ಇಲ್ಲವೋ, ಇಂದು ಅವರು ಸಂಕಲ್ಪ ಮಾಡಿದ್ದಾರೆ, 12 laಲಕ್ಷ ಜನ, ಕಡಿಮೆಯಲ್ಲ… 12 lಲಕ್ಷ ಜನ ತಮ್ಮ ಸ್ವಸಹಾಯ ಗುಂಪುಗಳ ಸಂಪೂರ್ಣ ವ್ಯವಹಾರವನ್ನು ನಗದು ರಹಿತವನ್ನಾಗಿಸುವ ಸಂಕಲ್ಪ ಮಾಡಿದ್ದಾರೆ. ನಗದು ರಹಿತ ಕಾರ್ಯ ನಿರ್ವಹಿಸುತ್ತೇವೆ, ಡಿಜಿಟಲ್ ವ್ಯವಹಾರ ಮಾಡುತ್ತೇವೆ, ರುಪೆ ಕಾರ್ಡ್ ಮೂಲಕ ಮಾಡುತ್ತೇವೆ, ಭೀಮ್ ಆಪ್ ಮೂಲಕ ವ್ಯವಹಾರ ಮಾಡುತ್ತೇವೆ ಎಂಬ ಸಂಕಲ್ಪ ಮಾಡಿದ್ದಾರೆ. ಒಳಿತನ್ನು ಮಾಡುವ ಉದ್ದೇಶವಿದ್ದಲ್ಲಿ, ಪ್ರತಿರೋಧವೂ ಕೂಡಾ ಕೆಲವೊಮ್ಮೆ ಹೆಚ್ಚಿನ ವೇಗವನ್ನು ಸಾಧಿಸಲು ಅವಕಾಶವನ್ನು ಒದಗಿಸಿಕೊಡುತ್ತದೆ. ಇದನ್ನು ಇಂದು ವೀರೇಂದ್ರ ಹೆಗ್ಗಡೆಯವರು ಸಾಧಿಸಿ ತೋರಿಸಿದ್ದಾರೆ.

ಭವಿಷ್ಯ ಭಾರತದ ಜೀಜವನ್ನು ಬಿತ್ತುವ ಒಂದು ಉತ್ತಮ ಪ್ರಯತ್ನ, ಡಿಜಿಟಲ್ ಇಂಡಿಯಾ, ನಗದು ರಹಿತ ಸಮಾಜದತ್ತ ದೇಶವನ್ನು ಕೊಂಡೊಯ್ದದ್ದಕ್ಕೆ, ಯಾವ ಜನರನ್ನು ತಲುಪಲು ಸರ್ಕಾರಗಳು ಮತ್ತು ಸಂಪೂರ್ಣ ಬ್ಯಾಂಕಿಂಗ್ ವ್ಯವಸ್ಥೆಗಳು ದಶಕಗಳ ಕಾಲ ತೆಗೆದುಕೊಳ್ಳುತ್ತಿದ್ದವೋ ಅಂತಹ ಜನರನ್ನು ಸುಲಭವಾಗಿ ತಲುಪಿದ್ದಕ್ಕೆ ನಾನು ತಮಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ತಾವು ಕೆಳಹಂತದಿಂದ ಕಾರ್ಯವನ್ನು ಪಾರಂಭ ಮಾಡಿ ಇಂದು ಇದನ್ನು ಸಾಧಿಸಿ ತೋರಿಸಿದ್ದೀರಿ. ದೇಶಕ್ಕೆ ಉಪಯೋಗವಾಗುವ ಒಂದು ದೊಡ್ಡ ಹೋರಾಟವನ್ನು ಪ್ರಾರಂಭಿಸಿದ್ದಕ್ಕೆ ನಾನು ಸ್ವ ಸಹಾಯ ಗುಂಪುಗಳ ಸಹೋದರಿಯರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೆಯೇ ವೀರೇಂದ್ರ ಹೆಗ್ಗಡೆಯವರಿಗೂ ಅಭಿನಂದನೆಗಳನ್ನು ಅರ್ಪಿಸುತ್ತೇನೆ. ಇಂದು ಕಾಲ ಬದಲಾಗಿದೆ, ಇಂದು ಇರುವ ಕರೆನ್ಸಿಗಳು, ಹಣಕಾಸು, ಪ್ರತಿ ಯುಗದಲ್ಲೂ ಬದಲಾಗುತ್ತಿದೆ. ಒಂದು ಕಾಲದಲ್ಲಿ ಕಲ್ಲಿನ ನಾಣ್ಯಗಳು ಇರುತ್ತಿದ್ದವು, ಕೆಲವೊಮ್ಮೆ ಚರ್ಮದ ನಾಣ್ಯಗಳು ಚಾಲ್ತಿಯಲ್ಲಿದ್ದವು, ಮತ್ತೆ ಕೆಲವು ಸಮಯ ಚಿನ್ನ ಬೆಳ್ಳಿಗಳ ನಾಣ್ಯಗಳು ಚಾಲ್ತಿಯಲ್ಲಿದ್ದವು, ಕೆಲವೊಮ್ಮೆ ಮುತ್ತು ರತ್ನಗಳ ರೂಪದಲ್ಲಿ ಇದ್ದವು, ಮತ್ತೆ ಅವು ಕಾಗದ ರೂಪವನ್ನು ಪಡೆದವು, ಮತ್ತೆ ಕೆಲವೊಮ್ಮೆ ಪ್ಲಾಸ್ಟಿಕ್ ರೂಪ ಪಡೆದವು. ಇವು ಬದಲಾಗುತ್ತಾ ಹೋಯಿತು, ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋದವು. ಇಂದು ಡಿಜಿಟಲ್ ನಗದಿನ ಯುಗ ಪ್ರಾರಂಭವಾಗಿದ್ದು, ಭಾರತ ಇನ್ನು ತಡ ಮಾಡಬಾರದು.

ಹೆಚ್ಚಿನ ನಗದು ಸಮಾಜವನ್ನು ದುಶ್ಚಟಗಳತ್ತ ಕೊಂಡೊಯ್ಯುತ್ತದೆ ಎಂಬುದನ್ನು ನಾವು ಗಮನಿಸಿದ್ದೀರಿ. ಕುಟುಂಬದಲ್ಲೂ ಕೂಡಾ ಮಗ ದೊಡ್ಡವನಾದರೆ, ಮಗಳು ದೊಡ್ಡವಳಾದರೆ, ಅಪ್ಪ ಅಮ್ಮ ಸುಖವಾಗಿದ್ದು, ಸಂಪನ್ನರಾಗಿದ್ದಾಗ್ಯೂ, ಹಣಕಾಸಿಗೆ ಯಾವುದೇ ಕೊರತೆ ಇಲ್ಲವಾಗಿದ್ದರೂ, ಮಕ್ಕಳಿಗೆ ಒಂದು ಮಿತಿಯಲ್ಲಿ ಹಣ ನೀಡುತ್ತಾರೆ. ಹಣ ವ್ಯಯ ಮಾಡುತ್ತಾರೆ ಎಂಬುದು ಅವರ ಚಿಂತೆಯಲ್ಲ, ಆದರೆ ಮಕ್ಕಳ ಬಳಿ ಹೆಚ್ಚು ಹಣವಿದ್ದಲ್ಲಿ ಮಕ್ಕಳ ಅಭ್ಯಾಸಗಳು ಕೆಡಬಹುದು ಎಂಬುದು ಪೋಷಕರ ಚಿಂತೆ. ಆದುದರಿಂದ ಅಲ್ಪ ಸ್ವಲ್ಪ ಹಣವನ್ನು ನೀಡುತ್ತಾರೆ ಮತ್ತು ಆಗ್ಗಿಂದಾಗ್ಗೆ ಹಣವನ್ನು ಹೇಗೆ ವೆಚ್ಚ ಮಾಡಿದೆ ಎಂದು ವಿಚಾರಿಸಿಕೊಳ್ಳುತ್ತಾರೆ. ಮಕ್ಕಳ ಬಳಿ ಹೆಚ್ಚು ಹಣವಿದ್ದಲ್ಲಿ ಅವರ ಅಭ್ಯಾಸಗಳು, ಹವ್ಯಾಸಗಳು ಬದಲಾಗಿ ಅವರು ದಾರಿ ತಪ್ಪುವ ಅವಕಾಶಗಳ ಬಗ್ಗೆ ತಂದೆ ತಾಯಿ ಚಿಂತಿಸುತ್ತಾರೆ, ಸಮಾಜದಲ್ಲಿ ಸ್ವಯಂ ಹೊಣೆಗಾರಿಕೆ ಒಂದು ದೊಡ್ಡ ಕಾರ್ಯವಾಗಿದೆ. ಸ್ವಯಂ ಹೊಣೆಗಾರಿಕೆ ಎಂಬುದು ಉನ್ನತ ಮಾತಾಗಿದೆ.

ಇಂದು ಯಾವ ದಿಕ್ಕಿನಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರು ಮುನ್ನಡೆಯುತ್ತಿದ್ದಾರೋ, ಅವರು ಒಂದು ದೊಡ್ಡ ಮಹಾ ಮಾರ್ಗವನ್ನು ತೆರೆಯಲಿದ್ದಾರೆ ಎಂದು ನನಗೆ ಅನಿಸುತ್ತಿದೆ. ಇಂದು ಮತ್ತೊಂದು ಕಾರ್ಯ ನಡೆದಿದೆ. ಇಂದು ಯಾವ chಚಿಹ್ನೆಯ ಲೋಕಾರ್ಪಣೆಯಾಗಿದೆಯೋ, ಅದು ಭೂಮಿಯ ವಿಷಯವಾಗಿ, ಭೂಮಾತೆಯ ವಿಷಯವಾಗಿ ನಮ್ಮ ಋಣವನ್ನು ತೀರಿಸಲು ಪ್ರೇರಣೆ ನೀಡುತ್ತದೆ. ಈ ಮರಗಳು ನಮಗೆ ಆಮ್ಲಜನಕವನ್ನು ನೀಡುತ್ತ ಇರಲಿ ಇದು ಅದರ ಜವಾಬ್ಧಾರಿ ಎಂದು ನಾವು ಭಾವಿಸುತ್ತೇವೆ. ಈ ಮರಗಳನ್ನು ರಕ್ಷಿಸುವುದು ನಮ್ಮ ಜವಾಬ್ಧಾರಿಯಲ್ಲ, ಅವು ಇಲ್ಲಿ ಬೆಳೆದು ನಿಂತಿವೆ, ನಮಗೆ ಆಮ್ಲಜನಕವನ್ನು ನೀಡುವುದು ಅವುಗಳ ಜವಾಬ್ಧಾರಿ ಎಂದು ಭಾವಿಸುತ್ತೇವೆ. ನಮ್ಮ ಹೊಟ್ಟೆಯನ್ನು ತುಂಬಿಸುವುದು ಭೂಮಾತೆಯ ಜವಾಬ್ಧಾರಿ, ನಾವು ಆ ಹಕ್ಕನ್ನು ಪಡೆದುಕೊಂಡು ಬಂದಿದ್ದೇವೆ. ಆದರೆ ಇದು ಹಾಗಲ್ಲ, ನಮ್ಮನ್ನು ಪೊರೆಯುವುದು ಭಾರತ ಮಾತೆಯ ಜವಾಬ್ಧಾರಿಯಾಗಿದ್ದರೆ, ಅದರ ಮಕ್ಕಳಾಗಿ, ಅದರ ಸಂತಾನವಾಗಿ ನಮಗೂ ಹಲವು ಜವಾಬ್ಧಾರಿಗಳಿವೆ. ಮರಗಳಿಗೆ ನಮಗೆ ಆಮ್ಲಜನಕ ನೀಡುವ ಜವಾಬ್ಧಾರಿಯಾಗಿದ್ದರೆ, ಅವುಗಳ ಲಾಲನೆ ಪೋಷಣೆ ಮಾಡುವ ಜವಾಬ್ಧಾರಿ ನಮ್ಮದಾಗಿದೆ. Iಈ ಒಪ್ಪಂದ, ಈ ಜವಾಬ್ಧಾರಿಯಲ್ಲಿ ಏರು ಪೇರಾದರೆ, ಕೊಡುವವರು ಕೊಡುತ್ತಿರಲಿ, ತೆಗೆದುಕೊಳ್ಳುವವನು ಎಲ್ಲವನ್ನು ಅನುಭವಿಸುತ್ತಾ ಪ್ರತಿಯಾಗಿ ಏನನ್ನೂ ಮಾಡದೇ ಹೋದರೆ ಸಮಾಜದಲ್ಲಿ ಅಸಮತೋಲನ ಉಂಟಾಗುತ್ತದೆ, ವ್ಯವಸ್ಥೆಗಳಲ್ಲಿ ಅಸಮತೋಲನ ತಲೆದೂರುತ್ತದೆ, ಪ್ರಕೃತಿಯಲ್ಲಿ ಅಸಮತೋಲನ ಉಂಟಾಗುತ್ತದೆ, ಇದು ಮುಂದುವರಿದು ಜಾಗತಿಕ ತಾಪಮಾನದಂತಹ ಸಮಸ್ಯೆ ತಲೆದೂರುತ್ತದೆ.

ನೀರಿನ ಸಮಸ್ಯೆ ಸಂಪೂರ್ಣ ಮಾನವ ಸಂಕುಲಕ್ಕೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ಸಂಪೂರ್ಣ ವಿಶ್ವ ಅರಿತಿದೆ. ಒಂದು ಲೋಟ ನೀರನ್ನು ನಾವು ಕುಡಿದಾಗಲೂ, ಒಂದು ಬಕೆಟ್ ನೀರನ್ನು ನಾವು ಸ್ನಾನಕ್ಕೆ ಉಪಯೋಗಿಸಿದಾಗಲೂ ಇದು ನಮ್ಮ ಪ್ರಯತ್ನದ ಫಲ ಎಂದು ತಾವು ಭಾವಿಸಬಾರದು ಅದು ನಮ್ಮ ಅಧಿಕಾರ ಕೂಡಾ ಅಲ್ಲ. ನಮ್ಮ ಪೂರ್ವಜರು ಮುನ್ನೆಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ, ನಮಗಾಗಿ ಸ್ವಲ್ಪ ಉಳಿಸಿ ಹೋಗಿದ್ದಾರೆ. ಈ ಕಾರಣದಿಂದ ಇದು ನಮಗೆ ಲಭಿಸಿದೆ. ಇದು ನಮ್ಮ ಮುಂದಿನ ಪೀಳಿಗೆಯ ಅಧಿಕಾರವಾಗಿದೆ ಕೂಡಾ. ಇಂದು ನಾನು ನಮ್ಮ ಮುಂದಿನ ಪೀಳಿಗೆಯ ಆಹಾರವನ್ನು ತಿನ್ನುತ್ತಿದ್ದೇನೆ. ಹೇಗೆ ನಮ್ಮ ಪೂರ್ವಜರು ನಮಗಾಗಿ ಏನನ್ನು ಬಿಟ್ಟು ಹೋಗಿದ್ದಾರೋ, ಅದೇ ರೀತಿ ನನಗೂ ಕೂಡಾ ಮುಂಬರುವ ಪೀಳಿಗೆಗಾಗಿ ಬಿಟ್ಟು ಹೋಗಬೇಕೆಂಬ ಭಾವನೆ ಬರಬೇಕಿದೆ. ಈ ಭಾವನೆಯನ್ನು ಜಾಗೃತಗೊಳಿಸುವ ಪ್ರಯತ್ನ, ಪರಿಸರವನ್ನು ರಕ್ಷಿಸುವಂತಹ ಮಹಾನ್ ಹೋರಾಟ ಧರ್ಮಸ್ಥಳದಿಂದ ಪ್ರಾರಂಭವಾಗಿದೆ. ಇದು ಸಂಪೂರ್ಣ ಬ್ರಹ್ಮಾಂಡದ ಕಾರ್ಯವೆಂದು ನಾನು ಭಾವಿಸುತ್ತೇನೆ.

ನಾವು ಯಾವ ರೀತಿ ಪ್ರಕೃತಿಯೊಂದಿಗೆ ಸೇರಿಕೊಳ್ಳಬೇಕು. 2022ಕ್ಕೆ ಭಾರತ ಸ್ವಾತಂತ್ರಕ್ಕೆ 75 ವರ್ಷಗಳಾಗಲಿದೆ. ಧರ್ಮಸ್ಥಳದಲ್ಲಿ ಇಂತಹ ದೊಡ್ಡ ಆಂದೊಲನ ಪ್ರಾರಂಭವಾಗಿದೆ. ಈ ಆಂದೋಲನ ಧರ್ಮಸ್ಥಳದಲ್ಲಿ ಪ್ರಾರಂಭವಾಗಿದ್ದು, ಡಾ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಈ ಆಂದೋಲನಕ್ಕೆ ದೊರೆತಿದ್ದು, ಈ ಆಂದೋಲನ ನಿಶ್ಚಿತವಾಗಿಯೂ ಯಶಸ್ಸು ಕಾಣಲಿದೆ ಎಂಬ ವಿಶ್ವಾಸ ನನಗಿದೆ.

ಇಂದು ನಾವು ನಮ್ಮ ಬುದ್ಧಿ, ಶಕ್ತಿ ಮತ್ತು ದುರಾಸೆಯ ಕಾರಣದಿಂದ ಈ ಭೂ ಮಾತೆಯನ್ನು ಎಷ್ಟು ಹಾಳು ಮಾಡಬಹುದೋ, ಹಾಳು ಮಾಡುತ್ತಿದ್ದೇವೆ. ನಾವು ಎಂದೂ ಈ ಭೂಮಾತೆಯ ಬಗ್ಗೆ ಯೋಚಿಸಿಲ್ಲ, ಅವಳ ಆರೋಗ್ಯದ ಬಗ್ಗೆ ಕೂಡಾ ಚಿಂತಿಸಿಲ್ಲ, ಮೊದಲು ಒಂದು ಬೆಳೆಯನ್ನು ಬೆಳೆಯುತ್ತಿದ್ದೆವು, ನಂತರ ಎರಡು ಬೆಳೆ, ನಂತರ ಮೂರು ಹೀಗೆ ಮತ್ತೆ ಮತ್ತೆ ಬೆಳೆ ತೆಗೆಯಲು ಪ್ರಾರಂಭಿಸಿದೆವು. ಹೆಚ್ಚು ಬೆಳೆ ಬೆಳೆಯಲು ಔಷದಿ ಸಿಂಪಡಿಸಲು ತೊಡಗಿದೆವು. ರಾಸಾಯನಿಕ ಉಪಯೋಗಿಸಿದೆವು, ಬೇರೆ ಬೇರೆ ಗೊಬ್ಬರಗಳನ್ನು ಉಪಯೋಗಿಸತೊಡಗಿದೆವು, ಏನಾಗುವುದೋ ಆಗಲಿ ನನಗೆ ತಕ್ಷಣಕ್ಕೆ ಲಾಭ ದೊರಕುತ್ತಿರಲಿ, ಈ ಭಾವನೆಯಲ್ಲಿ ನಾವು ಕಾರ್ಯ ನಿರ್ವಹಿಸತೊಡಗಿದೆವು. ಈ ಸ್ಥಿತಿ ಮುಂದುವರಿದರೆ ನಾವು ಎಲ್ಲಿ ಹೋಗಿ ನಿಲ್ಲುವೆವು ಎಂಬುದು ನಮಗೆ ತಿಳಿದಿಲ್ಲ.

ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ನಾವೆಲ್ಲ ಒಂದು ಸಂಕಲ್ಪ ಮಾಡೋಣವೇ? ಈ ಪ್ರದೇಶದ ಎಲ್ಲ ರೈತರು ಒಂದು ಸಂಕಲ್ಪವನ್ನು ಮಾಡುತ್ತೀರಾ? 2022 ರಲ್ಲಿ ಭಾರತ ಸ್ವಾತಂತ್ರದ 75nನೇ ವರ್ಷಾಚರಣೆಯ ಸಂದರ್ಭದಲ್ಲಿ ನಾವು ಈಗ ಏನು ಯೂರಿಯಾದ ಉಪಯೋಗ ಮಾಡುತ್ತಿದ್ದೇವೆ, ಅದನ್ನು ಶೇಕಡಾ 50 ರಷ್ಟು ಕಡಿಮೆ ಮಾಡಬಹುದು. ಇಂದು ಎಷ್ಟು ಉಪಯೋಗಿಸುತ್ತಿದ್ದೇವೆ, ಅದನ್ನು ಅರ್ಧದಷ್ಟು ಕಡಿಮೆ ಮಾಡಬಹುದು. ಭೂ ದೇವಿಯ ರಕ್ಷಣೆಯಲ್ಲಿ ಇದು ಎಂತಹಾ ಸೇವೆ ಎಂಬುದನ್ನು ತಾವೇ ಗಮನಿಸಿ, ರೈತನ ಹಣ ಉಳಿಯುತ್ತದೆ, ಅವನ ಉತ್ಪಾದನಾ ವೆಚ್ಚದಲ್ಲಿ ಕಡಿತವಾಗುತ್ತದೆ, ಆದರೆ ಉತ್ಪಾದನೆಯಲ್ಲಿ ಯಾವುದೇ ಕೊರತೆ ಆಗುವುದಿಲ್ಲ. ಇವೆಲ್ಲವುಗಳ ಹೊರತಾಗಿಯೂ ಭೂ ಮಾತೆ ಆಶೀರ್ವಾದದಿಂದ ಅವನ ಹೊಲ ಗದ್ದೆ ಮತ್ತು ಕೊಟ್ಟಿಗೆಗಳಲ್ಲಿ ಅಭಿವೃದ್ಧಿಯಾಗಿ ಅವನಿಗೆ ಹೆಚ್ಚಿನ ಲಾಭ ದೊರೆಯುತ್ತದೆ.

ಇದೇ ರೀತಿ ನೀರು.. ಕರ್ನಾಟಕದಲ್ಲಿ ಅನಾವೃಷ್ಟಿಯಿಂದ ಯಾವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದರ ಅರಿವು ತಮಗಿದೆ. ನೀರಿನ ಕೊರತೆಯಿಂದ ಎಷ್ಟು ತೊಂದರೆ ಉಂಟಾಗುತ್ತದೆ. ನಾನು ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ ಕೂಡಾ ಕರ್ನಾಟಕ ರಾಜ್ಯದಲ್ಲಿ ಅಡಿಕೆ ಬೆಲೆ ಕುಸಿದಾಗ ಯಡಿಯೂರಪ್ಪನವರು ನನ್ನಲ್ಲಿಗೆ ಬಂದು ಪರಿಸ್ಥಿತಿಯನ್ನು ವಿವರಿಸುತ್ತಿದ್ದರು. ಮೋದಿಯವರೆ ತಾವು ಈ ಅಡಿಕೆಯನ್ನು ಖರೀದಿಸಿ, ನಮ್ಮ ಮಂಗಳೂರು ಪ್ರದೇಶವನ್ನು ರಕ್ಷಿಸಿ ಎಂದು ಕೇಳಿಕೊಳ್ಳಲು ಓಡೋಡಿ ಬರುತ್ತಿದ್ದರು.

naನಮ್ಮ ರೈತರು 2022ರ ವೇಳೆಗೆ ಸೂಕ್ಷ್ಮ ನೀರಾವರಿಯೆಡೆಗೆ, ಹನಿ ನೀರಾವರಿ, “ಒಂದು ಹನಿ – ಹೆಚ್ಚು ಬೆಳೆ” ಸಂಕಲ್ಪವನ್ನಿಟ್ಟುಕೊಂಡು ಮುಂದುವರೆಯಬಹುದಲ್ಲವೇ? ಹನಿ ನೀರಾವರಿ, ಒಂದು ಮುತ್ತಿನ ತರಹ ಇದರ ಉಪಯೋಗವನ್ನು ಹೇಗೆ ಪಡೆದುಕೊಳ್ಳಬಹುದು, ಒಂದು ಹನಿ ನೀರನ್ನು ಮುತ್ತಿನ ಬೆಲೆಗೆ ಹೋಲಿಸಿ ನಾವು ಹೇಗೆ ಉಪಯೋಗಿಸಿಕೊಳ್ಳಬಹುದು, ಈ ವಿಷಯಗಳನ್ನಿಟ್ಟುಕೊಂಡು ನಾವು ಮುಂದುವರೆದದ್ದೇ ಆದಲ್ಲಿ, ನಾವು ಒಂದು ದೊಡ್ಡ ಬದಲಾವಣೆಯನ್ನು ತರಲು ಸಾಧ್ಯ ಎಂದು ನಾನು ನಂಬಿದ್ದೇನೆ.

ನಾನು ಡಿಜಿಟಲ್ ಭಾರತದ ಮಾತನಾಡುವೆ ವೇಳೆ, ಭಾರತ ಸರ್ಕಾರವು ಒಂದು ಹೊಸ ಹೆಜ್ಜೆಯನ್ನಿಟ್ಟಿದೆ – ಜೆಮ್. ಇದು ಒಂದು ನೂತನ ವ್ಯವಸ್ಥೆಯಾಗಿದ್ದು ಈ ಮೂಲಕ ನಾನು ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಆಹ್ವಾನ ನೀಡುತ್ತಿದ್ದೇನೆ. ಯಾರು ಯಾವುದೇ ವಸ್ತುಗಳನ್ನು ಉತ್ಪಾದನೆ ಮಾಡುತ್ತಾರೋ, ಯಾರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡ ಬಯಸುತ್ತಾರೊ, ಅವರು ಭಾರತ ಸರ್ಕಾರದ ಈ ಜೆಮ್ ಪೋರ್ಟಲ್ ನಲ್ಲಿ ಆನ್ ಲೈನ್ ನೋಂದಣೆ ಮಾಡಿಕೊಳ್ಳಬಹುದು. ಭಾರತ ಸರ್ಕಾರಕ್ಕೆ ಯಾವು ವಸ್ತುಗಳ ಅವಶ್ಯಕತೆ ಇದೆಯೋ, ರಾಜ್ಯ ಸರ್ಕಾರಗಳಿಗೆ ಯಾವ ವಸ್ತುಗಳ ಅವಶ್ಯಕತೆ ಇದೆಯೋ, ಅವರು ಈ ಪೋರ್ಟಲ್ ನ ಉಪಯೋಗ ಪಡೆಯುತ್ತಾರೆ. ನಮಗೆ ಇಷ್ಟು ಕುರ್ಚಿಗಳ ಅವಶ್ಯಕತೆ ಇದೆ, ಇಷ್ಟು ಟೇಬಲ್ ಗಳ ಅವಶ್ಯಕತೆ ಇದೆ, ಇಷ್ಟು ಗ್ಲಾಸ್ ಗಳ ಅವಶ್ಯಕತೆ ಇದೆ, ಇಷ್ಟು ರೆಫ್ರಿಜರೇಟರ್ ಗಳು ನಮಗೆ ಬೇಕು ಎಂದು ತಮ್ಮ ಅವಶ್ಯಕತೆಗಳಿಗೆ ಅನುಸಾರವಾಗಿ ಇದರಲ್ಲಿ ನಮೂದಿಸುತ್ತಾರೆ. ಯಾರು ಜೆಮ್ ಪೋರ್ಟಲ್ ನಲ್ಲಿ ನೋಂದಣಿಯಾಗಿರುತ್ತಾರೋ, ಗ್ರಾಮೀಣ ಜನರು ಕೂಡಾ ಮುಂದೆ ಬರುತ್ತಾರೆ, ನಮ್ಮ ಬಳಿ ಇಂತಹ ವಸ್ತುಗಳಿವೆ, ನಮ್ಮ ಬಳಿ ಇಂತಹ ಐದು ವಸ್ತುಗಳಿವೆ ನಾನು ಇವುಗಳನ್ನು ಮಾರಾಟ ಮಾಡಬಯಸುತ್ತೇನೆ ಎಂದು ಮುಂದೆ ಬರುತ್ತಾರೆ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತದೆ.

ಕಳೆದ ವರ್ಷ ಅಗಸ್ಟ್ 9 raMರಂದು ನಾನು ಈ ನೂತನ ಯೋಜನೆಯನ್ನು ಜಾರಿಗೆ ತಂದಿದ್ದೆ. ನೋಡ ನೋಡುತ್ತಿದ್ದಂತೆ ದೇಶದ ಸರಿಸುಮಾರು 40 ಸಾವಿರ ಈ ರೀತಿಯ ಉತ್ಪಾದಕರು ಈ ನೂತನ ಜೆಮ್ ಪೋರ್ಟಲ್ ನಲ್ಲಿ ನೋಂದಾಯಿತರಾಗಿದ್ದಾರೆ. ದೇಶದ 15 ರಾಜ್ಯಗಳು ಈಗಾಗಲೇ ಒಡಂಬಡಿಕೆ ಮಾಡಿಕೊಂಡಿವೆ. ಸಾವಿರಾರು ಕೋಟಿ ರೂಪಾಯಿಯ ವ್ಯವಹಾರ, ಸರ್ಕಾರಗಳು ಏನನ್ನಾದರೂ ಖರೀದಿಸ ಬಯಸಿದರೆ ಈ ಜೆಮ್ ಮೂಲಕ ಮುಂದುವರಿಯುತ್ತಾರೆ. ಟೆಂಡರ್ ಗಳು ಇರುವುದಿಲ್ಲ, ಪರದೆಯ ಹಿಂದಿನ ವ್ಯವಹಾರಗಳಿಲ್ಲ, ಎಲ್ಲ ವಿಷಯಗಳು ಕಂಪ್ಯೂಟರ್ ನಲ್ಲಿ ತಮ್ಮ ಮುಂದೆ ಮೂಡುತ್ತದೆ. ಈ ಮೊದಲು 100 ರೂಪಾಯಿಗೆ ದೊರೆಯುತ್ತಿದ್ದ ವಸ್ತುಗಳು, ಈಗ 50-60 ರೂಪಾಯಿಗಳಲ್ಲಿ ಸರ್ಕಾರಕ್ಕೆ ದೊರಕುವ ಸ್ಥಿತಿ ನಿರ್ಮಾಣವಾಗಿದೆ.

ಆಯ್ಕೆಗೆ ಅವಕಾಶಗಳು ಲಭ್ಯವಿದೆ. ಈ ಮೊದಲು ದೊಡ್ಡ ದೊಡ್ದ ಉತ್ಪಾದಕರು ವಿತರಣೆ ಮಾಡುತ್ತಿದ್ದರು. ಆದರೆ ಇಂದು ಹಳ್ಳಿಯ ಸಾಮಾನ್ಯ ವ್ಯಕ್ತಿ ಕೂಡಾ ತಾನು ಉತ್ಪಾದಿಸುವ ವಸ್ತುಗಳನ್ನು ಸರ್ಕಾರಕ್ಕೆ ವಿತರಿಸಬಲ್ಲ. ಸಖಿ, ಈ ನಮ್ಮ ಮಹಿಳಾ ಸ್ವಸಹಾಯ ಗುಂಪುಗಳು ತಮ್ಮ ಉತ್ಪನ್ನಗಳನ್ನು ಈ ಮೂಲಕ ಮಾರಾಟ ಮಾಡಬಹುದು. ನಾನು ಅವರಿಗೆ ಈ ಕಾರ್ಯಕ್ಕೆ ಆಹ್ವಾನಿಸುತ್ತೇನೆ.

ದೇಶದ 15 ರಾಜ್ಯಗಳು ಭಾರತ ಸರ್ಕಾರದ ಈ ಜೆಮ್ ಯೋಜನೆಗಾಗಿ ಒಡಂಬಡಿಕೆ ಮಾಡಿಕೊಂಡಿವೆ. ಕರ್ನಾಟಕ ಸರ್ಕಾರ ಕೂಡಾ ತಡ ಮಾಡದೆ ಮುಂದೆ ಬರಬೇಕು ಎಂದು ನಾನು ಕರ್ನಾಟಕ ಸರ್ಕಾರವನ್ನು ಆಗ್ರಹಿಸುತ್ತೇನೆ. ಈ ಮೂಲಕ ಕರ್ನಾಟಕ ರಾಜ್ಯದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಉತ್ಪಾದನೆ ಮಾಡುವ ವಸ್ತುಗಳಿಗೆ ಒಂದು ದೊಡ್ಡ ಮಾರುಕಟ್ಟೆ ಲಭಿಸುತ್ತದೆ. ಸರ್ಕಾರ ಈ ವಸ್ತುಗಳಿಗೆ ಒಂದು ದೊಡ್ಡ ಖರೀದಿದಾರನಾಗುತ್ತದೆ. ಇಂತಹ ವಸ್ತುಗಳನ್ನು ಉತ್ಪಾದನೆ ಮಾಡುವ ಅತಿ ಹೆಚ್ಚು ಬಡವನಿಗೆ ಕೂಡಾ ಲಾಭವಾಗುತ್ತದೆ. ಅವನಿಗೆ ಒಂದು ಖಚಿತ ಮಾರುಕಟ್ಟೆ ದೊರೆಯುತ್ತದೆ. ಅವನಿಗೆ ಒಂದು ನಿಶ್ಚಿತ ಹಣ ದೊರೆಯುತ್ತದೆ.

ಕರ್ನಾಟಕ ಸರ್ಕಾರ ನನ್ನ ಈ ಆಮಂತ್ರಣವನ್ನು ಸ್ವೀಕರಿಸಲಿ ಎಂದು ನಾನು ಬಯಸುತ್ತೇನೆ. ಈ ಮೂಲಕ ಕರ್ನಾಟಕದ ಸಾಮಾನ್ಯ ವ್ಯಕ್ತಿಗೂ ಕೂಡಾ ಈ ಯೋಜನೆಯ ಉಪಯೋಗವಾಗಿ ಆತನಿಗೂ ಲಾಭ ದೊರಕುತ್ತದೆ.

ಆಧಾರ್.. ಇಂದು ತಾವು ನೋಡಿದ್ದೀರಿ.. ರೂಪೆ ಕಾರ್ಡ್ ಅನ್ನು ಆಧಾರ್ ನೊಂದಿಗೆ ಜೋಡಿಸಿದ್ದೇವೆ. ಮೊಬೈಲ್ ಫೋನ್ ನೊಂದಿಗೆ ಜೋಡಿಸಿದ್ದೇವೆ. ಬ್ಯಾಂಕ್ ಸೇವೆಗಳು ದೊರೆಯುತ್ತಿವೆ. ನಮ್ಮ ದೇಶದ ಬಡವರಿಗೆ ಲಾಭವಾಗಲಿ ಎಂಬ ಉದ್ದೇಶದಿಂದ ಅನೇಕ ಯೋಜನೆಗಳು ನಡೆಯುತ್ತಿವೆ. ಆದರೆ ಯಾರಿಗಾಗಿ ಈ ಯೋಜನೆಗಳನ್ನು ಮಾಡಲಾಗಿದೆಯೋ ಅವರಿಗೆ ಈ ಯೋಜನೆಯ ಲಾಭ ದೊರಕುತ್ತಿದೆಯೋ ಅಥವಾ ಬೇರೆ ಯಾರಾದರೂ ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆಯೋ ಅರಿವಾಗುತ್ತಿಲ್ಲ. ಮಧ್ಯದಲ್ಲಿ ಬೇರೆ ಎಲ್ಲಿಯಾದರೂ ಇದರ ಸೋರಿಕೆಯಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿ ಕೊಳ್ಳಬೇಕಿದೆ.

ದಿಲ್ಲಿಯಿಂದ ಒಂದು ರೂಪಾಯಿ ಹೊರಟರೆ ಅದು ಹಳ್ಳಿಯನ್ನು ತಲುಪುವ ವೇಳೆಗೆ 15 ಪೈಸೆಗಳಾಗುತ್ತವೆ ಎಂದು ನಮ್ಮ ದೇಶದ ಪ್ರಧಾನಮಂತ್ರಿಯೊಬ್ಬರು ಹಿಂದೆ ಹೇಳಿದ್ದರು. ಈ ರೂಪಾಯಿಯನ್ನು ಕಡಿಮೆ ಮಾಡುತ್ತಿರುವ ಮುಷ್ಟಿಯಾದರು ಯಾವುದು? ಒಂದು ರೂಪಾಯಿಯನ್ನು ಉಜ್ಜಿ ಉಜ್ಜಿ 15 ಪೈಸೆಗಳನ್ನಾಗಿ ಮಾಡುತ್ತಿರುವ ಮುಷ್ಟಿಯಾದರೂ ಯಾವುದು? ದಿಲ್ಲಿಯಿಂದ ಹೊರಟ ಒಂದು ರೂಪಾಯಿ ಹಳ್ಳಿಯ ವ್ಯಕ್ತಿಯ ಬಳಿಗೆ ತಲುಪಿದಾಗ ಅವನ ಬಳಿ 100 paiಪೈಸೆ ಸಂಪೂರ್ಣ ತಲುಪಬೇಕು ಒಂದು ಪೈಸೆ ಕೂಡಾ ಕಡಿಮೆ ಆಗಬಾರದು ಎಂದು ನಾವು ನಿಶ್ಚಯಿಸಿದೆವು. ಯಾವ ಬಡ ವ್ಯಕ್ತಿಗೆ ಈ ಹಣದ ಮೇಲೆ ಅಧಿಕಾರವಿದೆಯೋ ಆತನಿಗೇ ತಲುಪಬೇಕು. ಈ ಕಾರಣದಿಂದ ನಾವು ನೇರ ಲಾಭ ವರ್ಗಾವಣೆಯ ವ್ಯವಸ್ಥೆಯನ್ನು ಜಾರಿಗೆ ತಂದೆವು. ನೋಂದಣಿಯನ್ನು ಕೂಡಾ ಮಾಡಿದೆವು. ನಾನಿಂದು ಈ ಪವಿತ್ರ ಸ್ಥಳದಲ್ಲಿ ಕುಳಿತಿದ್ದೇನೆ. ಡಾ. ವೀರೇಂದ್ರ ಹೆಗ್ಗಡೆಯವರ ಪಕ್ಕದಲ್ಲಿ ಕುಳಿತಿದ್ದೇನೆ. ಇಲ್ಲಿನ ಪವಿತ್ರತೆಯ ಬಗೆಗೆ ನನಗೆ ಸಂಪೂರ್ಣ ಅರಿವಿದೆ. ಪ್ರಾಮಾಣಿಕತೆಯ ಸಂಪೂರ್ಣ ಅರಿವಿದೆ. ಈ ಕಾರ್ಯದಲ್ಲಿ ಎಲ್ಲ ರಾಜ್ಯಗಳು ನಮ್ಮ ಜತೆ ಕೈ ಜೋಡಿಸಿಲ್ಲ, ಕೆಲವು ರಾಜ್ಯಗಳು ಈ ಬಗ್ಗೆ ಕ್ರಮಗಳನ್ನು ತೆಗೆದುಕೊಂಡಿವೆ, ಭಾರತ ಸರ್ಕಾರ ಕೂಡ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇಲ್ಲಿಯ ತನಕ ಕಾನೂನು ಬಾಹಿರವಾಗಿ ಅನ್ಯ ವ್ಯಕ್ತಿಗಳ ಕೈ ಸೇರುತ್ತಿದ್ದ, ಕಳ್ಳತನವಾಗುತ್ತಿದ್ದ 57 saಸಾವಿರ ಕೋಟಿ ರೂಪಾಯಿಗಳು ಸರಿಯಾದ ವ್ಯಕ್ತಿಗಳ ಕೈ ಸೇರುತ್ತಿದೆ ಎಂದು ನಾನು ಈ ಪವಿತ್ರ ಸ್ಥಳದಿಂದ ಹೇಳುತ್ತಿದ್ದೇನೆ.

ಯಾವ ವ್ಯಕ್ತಿಗಳ ಜೇಬಿಗೆ ಪ್ರತಿ ವರ್ಷ 50-60 ಸಾವಿರ ಕೋಟಿ ರೂಪಾಯಿಗಳು ಹೋಗಿ ಸೇರುತ್ತಿತ್ತೊ, ಅದು ಈಗ ನಿಂತು ಹೋಗಿದೆ, ಆ ವ್ಯಕ್ತಿಗಳು ಮೋದಿಯನ್ನು ಇಷ್ಟ ಪಡುತ್ತಾರೆಯೇ? ಅವರು ಮೋದಿಯ ಮೇಲೆ ಕೋಪ ಮಾಡಿಕೊಳ್ಳುವರೋ ಇಲ್ಲವೋ? ಮೋದಿಯ ಕೂದಲನ್ನು ಕೀಳುತ್ತಾರೋ ಇಲ್ಲವೋ?

ಮಿತ್ರರೇ, ನಾನಿಂದು ಈ ಪವಿತ್ರ ಸ್ಥಳದಲ್ಲಿ ನಿಂತು ಹೇಳುತ್ತಿದ್ದೇನೆ, ನಾನು ಇರುತ್ತೇನೋ, ಇಲ್ಲವೋ, ಈ ದೇಶವನ್ನು ಹಾಳು ಮಾಡಲು ನಾನು ಬಿಡುವುದಿಲ್ಲ. ನಾನು ನನಗೋಸ್ಕರ ಬದುಕುವುದನ್ನು ಕಲಿತಿಲ್ಲ, ನಾವು ಬಾಲ್ಯದಿಂದಲೂ ಅನ್ಯರಿಗಾಗಿ ಬದುಕುವುದನ್ನು ಕಲಿತು ಬೆಳೆದಿದ್ದೇವೆ.

ಆದುದರಿಂದ ಸಹೋದರ, ಸಹೋದರಿಯರೇ, ಒಂದು ವಿಚಾರ ನನ್ನ ಮನದಲ್ಲಿ ಮೂಡಿದೆ, ಅದನ್ನು ನಾನು ಡಾ. ವೀರೇಂದ್ರ ಹೆಗ್ಗಡೆಯವರ ಸಮಕ್ಷಮದಲ್ಲಿ ಇಡುವ ಧೈರ್ಯ ಮಾಡುತ್ತೇನೆ. ನಾನು ಅವರ ವೈಜ್ಞಾನಿಕ ವಿಚಾರಧಾರೆಗಳನ್ನು ಹೆಚ್ಚಾಗಿ ಅರಿತಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನಾನು ಹೇಳುತ್ತಿದ್ದೇನೆ. ತಾವು ಮಾಡಿ ತೋರಿಸುತ್ತೀರೆಂಬ ನಂಬಿಕೆ ನನಗಿದೆ. ಮಂಗಳೂರು ಸುತ್ತ ಮುತ್ತ ಸಮುದ್ರ ತೀರವಿದೆ. ಸಮುದ್ರ ತೀರದಲ್ಲಿ ನನ್ನ ಮೀನುಗಾರ ಸಹೋದರ ಸಹೋದರಿಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ವರ್ಷದಲ್ಲಿ ಕೆಲವು ತಿಂಗಳುಗಳ ಕಾಲ ಮಾತ್ರ ಅವರಿಗೆ ಕಾರ್ಯ ನಿರ್ವಹಿಸಲು ಸಾಧ್ಯ. ನಂತರ ಮಳೆಗಾಲದಲ್ಲಿ ಮಳೆಯ ಕಾರಣ ಅವರಿಗೆ ರಜೆ ದೊರೆಯುತ್ತದೆ. ಒಂದು ಕಾರ್ಯವನ್ನು ನಾವು ಸಮುದ್ರ ತೀರದಲ್ಲಿ ಮಾಡಬಹುದಾಗಿದೆ. ತುಂಬಾ ಒಳ್ಳೆಯ ರೀತಿಯಲ್ಲಿ ಮಾಡಬಹುದಾಗಿದೆ. ಅದು ಕಡಲ ಕಳೆಯ (ಸೀ ವೀಡ್) ವ್ಯವಸಾಯ. ಮರದ ಸಹಾಯದಿಂದ ಒಂದು ವಸ್ತುವನ್ನು ತಯಾರಿಸಬೇಕು. ಅದರಲ್ಲಿ ಸ್ವಲ್ಪ ಕಳೆಯನ್ನು ಹಾಕಿ ಸಮುದ್ರ ತೀರದಲ್ಲಿ ನೀರಿನಲ್ಲಿ ಬಿಡಬೇಕಾಗುತ್ತದೆ. ಅದು ತೇಲುತ್ತಿರುತ್ತದೆ. 45 ದಿನಗಳಲ್ಲಿ ಬೆಳೆ ತಯಾರಾಗುತ್ತದೆ. ನೋಡಲು ಬಹಳ ಸುಂದರವಾಗಿರುತ್ತದೆ. ಬಹಳ ಸುಂದರ.. ಸಂಪೂರ್ಣ ನೀರಿನಿಂದ ತುಂಬಿರುತ್ತದೆ.

ಇಂದು ಔಷದೀಯ ಪ್ರಪಂಚಕ್ಕೆ ಇದೊಂದು ಶಕ್ತಿಶಾಲಿ ಗಿಡದ ರೂಪದಲ್ಲಿ ಕಂಡು ಬಂದಿದೆ. ಆದರೆ ನಾನು ಮತ್ತೊಂದು ಕಾರ್ಯಕ್ಕಾಗಿ ತಮಗೆ ಸಲಹೆ ನೀಡಬಯಸುತ್ತೇನೆ. ಇಲ್ಲಿ ಸಮುದ್ರ ತೀರದಲ್ಲಿ ಮಹಿಳಾ ಸ್ವ ಸಹಾಯ ಸಂಘದ ಮೂಲಕ ಈ ಸಮುದ್ರ ಕಳೆಯ ವ್ಯವಸಾಯವನ್ನು ಪ್ರಾರಂಭ ಮಾಡಿ. 45 ದಿನದಲ್ಲಿ ಬೆಳೆ ಕೈಗೆ ಬರಲು ಪ್ರಾರಂಭವಾಗುತ್ತದೆ. ವರ್ಷದ 12 ತಿಂಗಳೂ ಬೆಳೆಯನ್ನು ಬೆಳೆಯಬಹುದು. ಈ ಗಿಡಗಳನ್ನು ರೈತರು ಬೆಳೆಯನ್ನು ಬೆಳೆಯುವ ಸಮಯದಲ್ಲಿ ಇದನ್ನು ಬೆಳೆಯ ನಡುವೆ ಬೆರೆಸಬಹುದು. ಇದರಲ್ಲಿ ಬಹಳಷ್ಟು ನೀರು ತುಂಬಿರುತ್ತದೆ. ಇದರಲ್ಲಿ ಬಹಳಷ್ಟು ಪೌಷ್ಟಿಕಾಂಶಗಳಿವೆ. ಒಂದು ಬಾರಿ ತಾವು ಧರ್ಮಸ್ಥಳದ ಅಕ್ಕ ಪಕ್ಕದ ಪ್ರದೇಶಗಳಲ್ಲಿ ಈ ಪ್ರಯೋಗವನ್ನು ಮಾಡಿ ನೋಡಿ. ಇಲ್ಲಿನ ಜಮೀನುಗಳ ಫಲವತ್ತತ್ತೆಯನ್ನು ಸುಧಾರಿಸುವಲ್ಲಿ ಈ ಸಮುದ್ರ ಕಳೆ ಬಹಳಷ್ಟು ಉಪಯೋಗವಾಗುವುದು. ಇದನ್ನು ಯಾವುದೇ ವೆಚ್ಚವಿಲ್ಲದೆ ಬಹಳ ಸುಲಭವಾಗಿ ಬೆಳೆಯಬಹುದು. ಇದರಿಂದ ನಮ್ಮ ಮೀನುಗಾರ ಸಹೋದರ ಸಹೋದರಿಯರಿಗೂ ಆದಾಯ ಲಭಿಸುವುದು. ಈ ಗಿಡಗಳಲ್ಲಿ ಇರುವ ನೀರಿನ ಅಂಶ ಭೂಮಿಯನ್ನು ಫಲವತ್ತು ಮಾಡುವುದು. ಬಹಳ ಶಕ್ತಿಶಾಲಿಯನ್ನಾಗಿ ಮಾಡುವುದು. ಧರ್ಮಸ್ಥಳದಿಂದ ಈ ಕಾರ್ಯ ಪ್ರಾರಂಭವಾಗಲಿ ಎಂದು ನಾನು ಬಯಸುತ್ತೇನೆ. ಇಲ್ಲಿ ಈ ಪ್ರಯೋಗವಾದರೆ ತಮ್ಮಲ್ಲಿನ ವಿಜ್ಞಾನಿಗಳು, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಈ ಬಗ್ಗೆ ಅಧ್ಯಯನ ನಡೆಸಿ ನನಗೆ ವರದಿಯನ್ನು ಕಳಿಸಿ. ಈ ಕಾರ್ಯವನ್ನು ಮಾಡುವಂತೆ ನಾನು ಸರ್ಕಾರಕ್ಕೆ ಹೇಳುವುದಿಲ್ಲ. ನಾನು ಮೊದಲ ಬಾರಿಗೆ ಇಲ್ಲಿ ಈ ಮಾತನ್ನು ಹೇಳುತ್ತಿದ್ದೇನೆ. ಯಾಕೆಂದರೆ ಈ ಸ್ಥಳವೇ ಹಾಗಿದ್ದು, ತಾವು ಪ್ರಯೋಗ ಮಾಡಬಲ್ಲಿರೆಂದು ನನಗೆ ಅನಿಸುತ್ತಿದೆ. ಸರ್ಕಾರಕ್ಕೆ ಕೆಲವು ನೀತಿ ನಿಯಮಗಳ ಕಟ್ಟು ಪಾಡಿರುತ್ತದೆ. ತಾವುಗಳು ಬಿಚ್ಚು ಮನಸ್ಸಿನಿಂದ ಈ ಕಾರ್ಯ ಮಾಡಬಹುದು. ಇಲ್ಲಿನ ಜಮೀನುಗಳು ಯಾವು ರೀತಿ ಬದಲಾಗುತ್ತದೆ ಎಂಬುದನ್ನು ತಾವೇ ಗಮನಿಸಿ. ಉತ್ಪಾದನೆ ಬಹಳಷ್ಟು ಹೆಚ್ಚಾಗುತ್ತದೆ, ಬರದ ಕಾಲದಲ್ಲಿಯೂ ನಮ್ಮ ರೈತರು ಎಂದೂ ಸಮಸ್ಯೆಯನ್ನು ಎದುರಿಸುವುದಿಲ್ಲ. ಭೂ ಮಾತೆಯ ರಕ್ಷಣೆಗಾಗಿ ನಮ್ಮಲ್ಲಿ ಅನೇಕ ಯೋಜನೆಗಳಿದ್ದು ಅವೆಲ್ಲವುಗಳನ್ನು ಒಂದುಗೂಡಿಸಿಕೊಂಡು ಮುಂದುವರೆಯುತ್ತೇವೆ.

ನಾನು ಇಂದು ಈ ಸ್ಧಳಕ್ಕೆ ಬಂದಿದ್ದೇನೆ. ಡಾ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ನನಗೆ ಲಭಿಸಿದೆ. ಮಂಜುನಥೇಶ್ವರನ ಆಶೀರ್ವಾದ ನನಗೆ ಲಭಿಸಿದೆ, ಒಂದು ಹೊಸ ಪ್ರೇರಣೆ, ಒಂದು ಹೊಸ ಉತ್ಸಾಹ ಮೂಡಿದೆ. ಈ ಪ್ರದೇಶದ ಓದು ಬರಹ ಬಲ್ಲ ಸಾಮಾನ್ಯ ಮಾತೆಯರು, ಸಹೋದರಿಯರು, 12 ಲಕ್ಷ ಸಹೋದರಿಯರು, ಎಲ್ಲ ಮಹಿಳಾ ಸ್ವಸಹಾಯ ಸಂಘಗಳು ನಗದು ರಹಿತ ವ್ಯವಹಾರಕ್ಕಾಗಿ ಮುಂದೆ ಬರಬೇಕಿದೆ. ಜಿಲ್ಲೆಯ ಎಲ್ಲ ಸಹೋದರಿಯರಿಗೂ, ಮಹಿಳಾ ಸ್ವಸಹಾಯ ಸಂಘಗಳಿಗೂ ನಾನು ಆಹ್ವಾನ ನೀಡುತ್ತೇನೆ ಎಲ್ಲರೂ ಭೀಮ್ ಆಪ್ ನ ಉಪಯೋಗ ಪಡೆದುಕೊಳ್ಳಿ, ನಗದು ರಹಿತ ವ್ಯವಹಾರವನ್ನು ಕಲಿತುಕೊಳ್ಳಿ. ತಾವು ಗಮನಿಸಿ, ದೇಶದಲ್ಲಿ ಪ್ರಾಮಾಣಿಕತೆಯ ಯುಗ ಪ್ರಾರಂಭವಾಗಿದೆ. ಒಂದು ಕಾಲದಲ್ಲಿ ಅಪ್ರಾಣಿಕತೆಗೆ ಬಲ ದೊರಕುತ್ತಿತ್ತು. ಇಂದು ಪ್ರಾಮಾಣಿಕತೆಗೆ ಬಲ ದೊರೆಯುತ್ತಿದೆ. ನಾವು ದೀಪವನ್ನು ಬೆಳಗಿದರೆ ಕತ್ತಲು ತನ್ನಿಂತಾನೆ ದೂರವಾಗುತ್ತದೆ. ನಾನು ಪ್ರಾಮಾಣಿಕತೆಗೆ ಬಲ ನೀಡಿದರೆ, ಅಪ್ರಾಮಾಣಿಕತೆ ನಿಶ್ಚಿತವಾಗಿಯೂ ದೂರ ಸರಿಯುತ್ತದೆ. ಈ ಸಂಕಲ್ಪವನ್ನಿಟ್ಟುಕೊಂಡು ಮುಂದುವರೆಯಬೇಕಿದೆ. ತಮಗೆಲ್ಲರಿಗೂ ನನ್ನ ಶುಭಕಾಮನೆಗಳು. ಡಾ. ವೀರೇಂದ್ರ ಹೆಗ್ಗಡೆಯವರಿಗೆ ನನ್ನ ಶುಭಾಶಯಗಳು ಮತ್ತು ನನ್ನ ಪ್ರಣಾಮಗಳು. 50 varವರ್ಷಗಳ ಸುಧೀರ್ಘ ಕಾಲ ಮತ್ತು ಮುಂದೆ ಬರಲಿರುವ 50 varSವರ್ಷಗಳು ಕೂಡಾ ಅವರು ಈ ದೇಶಕ್ಕೆ ಮತ್ತು ಈ ಕ್ಷೇತ್ರಕ್ಕೆ ಇದೇ ರೀತಿ ಸೇವೆ ಸಲ್ಲಿಸುತ್ತಿರಲಿ.

ಎಲ್ಲರಿಗೂ ಧನ್ಯವಾದಗಳು.