ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದ್ವಾರಕಾಧೀಶ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ; ದ್ವಾರಕಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ದ್ವಾರಕಾದಲ್ಲಿ ದ್ವಾರಕಾಧೀಶ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಎರಡು ದಿನಗಳ ಗುಜರಾತ್ ಭೇಟಿಯನ್ನು ಆರಂಭಿಸಿದರು.

ಓಕಾ ಮತ್ತು ಬೆಯಟ್ ದ್ವಾರಕಾ ನಡುವೆ ಸೇತುವೆ; ಮತ್ತು ಇತರ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಅಂಗವಾಗಿ ಫಲಕವನ್ನು ಪ್ರಧಾನಮಂತ್ರಿ ಅನಾವರಣ ಮಾಡಿದರು.

ದ್ವಾರಕಾದಲ್ಲಿ ತಾವು ಇಂದು ದ್ವಾರಕಾದಲ್ಲಿ ನವ ಉತ್ಸಾಹ ಮತ್ತು ಚೈತನ್ಯ ಕಂಡಿದ್ದಾಗಿ ತಿಳಿಸಿದರು. ಇಂದು ಶಂಕುಸ್ಥಾಪನೆ ನೆರವೇರಿಸಲಾದ ಸೇತುವೆಯು ನಮ್ಮ ಪುರಾತನ ಪರಂಪರೆಯನ್ನು ಮರು ಸಂಪರ್ಕಿಸುವ ಸಾಧನವಾಗಿದೆ ಎಂದರು. ಇದು ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ, ಉದ್ಯೋಗವನ್ನು ಸೃಷ್ಟಿಸಲಿದೆ ಎಂದು ಅವರು ಹೇಳಿದರು. ಪ್ರವಾಸೋದ್ಯಮವನ್ನು ಉತ್ತೇಜಿಸಲು ಅಭಿವೃದ್ಧಿಗಿಂತ ಮಿಗಿಲಾದ್ದು ಮತ್ತೊಂದಿಲ್ಲ ಎಂದರು.

ಕೆಲವು ವರ್ಷಗಳ ಹಿಂದೆ ಮೂಲಸೌಕರ್ಯದ ಕೊರತೆ ಬಿಯೆಟ್ ದ್ವಾರಕಾದ ಜನತೆಗೆ ಹೇಗೆ ಸಂಕಷ್ಟ ಮತ್ತು ಸವಾಲು ಒಡ್ಡಿತ್ತು ಎಂಬುದನ್ನು ಅವರು ಸ್ಮರಿಸಿದರು.

ಪ್ರವಾಸೋದ್ಯಮದ ವಲಯದ ಅಭಿವೃದ್ಧಿ ಚದುರಿದಂತೆ ಆಗಲು ಸಾಧ್ಯವಿಲ್ಲ ಎಂದು ಹೇಳಿದರು. ನಾವು ಗಿರ್ ಗೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಬೇಕು ಎಂದರೆ, ನಾವು ಪ್ರವಾಸಿಗರಿಗೆ ದ್ವಾರಕಾದಂಥ ಹತ್ತಿರದ ಇತರ ಸ್ಥಳಗಳಿಗೆ ಭೇಟಿ ನೀಡುವಂತೆ ಪ್ರೇರೇಪಿಸಬೇಕಾಗುತ್ತದೆ ಎಂದರು.

ಮೂಲಸೌಕರ್ಯದ ನಿರ್ಮಾಣ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸಬೇಕು ಮತ್ತು ಅಭಿವೃದ್ಧಿಯ ವಾತಾವರಣಕ್ಕೆ ಸೇರಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ನಾವು ಬಂದರುಗಳ ಅಭಿವೃದ್ಧಿ, ಮತ್ತು ಬಂದರು ನೇತೃತ್ವದ ಅಭಿವೃದ್ಧಿ; ನೀಲಿ ಆರ್ಥಿಕತೆಯು ಭಾರತದ ಆರ್ಥಿಕತೆಗೆ ನೆರವಾಗಬೇಕು ಎಂದು ನಾವು ಬಯಸುತ್ತೇವೆಎಂದು ಪ್ರಧಾನಿ ಹೇಳಿದರು.

ಭಾರತ ಸರ್ಕಾರವು ಮೀನುಗಾರರ ಸಬಲೀಕರಣಕ್ಕಾಗಿ ಕ್ರಮ ಕೈಗೊಂಡಿದೆ ಎಂದು ಪ್ರಧಾನಿ ಹೇಳಿದರು. ಕಾಂಡ್ಲಾ ಬಂದರು, ಅಭೂತಪೂರ್ವ ಪ್ರಗತಿ ಸಾಧಿಸುತ್ತಿದೆ ಕಾರಣ ಸಂಪನ್ಮೂಲಗಳನ್ನು ಬಂದರು ಅಭಿವೃದ್ಧಿಗೆ ಒದಗಿಸಲಾಗಿದೆ ಎಂದರು. ಅಲಾಂಗ್ ಗೆ ಹೊಸ ಗುತ್ತಿಗೆಯ ಬದುಕು ನೀಡಲಾಗಿದೆ ಮತ್ತು ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಕಲ್ಯಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಾಗರ ಭದ್ರತೆ ಸಾಧನಗಳನ್ನು ಸರ್ಕಾರ ಆಧುನೀಕರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ದ್ವಾರಕದ ದೇವಭೂಮಿಯಲ್ಲಿ ಇದಕ್ಕಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು.

ನಿನ್ನೆ ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಒಮ್ಮತದಿಂದ ಕೈಗೊಂಡ ತೀರ್ಮಾನಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸರ್ಕಾರದ ಬಗ್ಗೆ ನಂಬಿಕೆ ಇದ್ದಾಗ ಮತ್ತು ಉತ್ತಮ ಉದ್ದೇಶದೊಂದಿಗೆ ನೀತಿಗಳನ್ನು ರೂಪಿಸಿದಾಗ, ದೇಶದ ಹಿತದೃಷ್ಟಿಯಿಂದ ಜನತೆ ಅದಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದರು.

ಜನರ ಆಶೋತ್ತರಗಳನ್ನು ಪೂರೈಸಲು ಮತ್ತು ಬಡತನದ ವಿರುದ್ಧ ಹೋರಾಟ ನಡೆಸಲು ಸರ್ಕಾರ ಬಯಸುತ್ತದೆ ಎಂದು ಪ್ರಧಾನಿ ಹೇಳಿದರು.

ಈಗ ಭಾರತದತ್ತ ವಿಶ್ವದ ಚಿತ್ತ ನೆಟ್ಟಿದೆ ಮತ್ತು ಜನ ಇಲ್ಲಿ ಹೂಡಿಕೆ ಮಾಡಲು ಬರುತ್ತಿದ್ದಾರೆ ಎಂದರು. “ಗುಜರಾತ್ ಭಾರತದ ಅಭಿವೃದ್ಧಿಗೆ ಸಕ್ರಿಯವಾಗಿ ಕೊಡುಗೆ ನೀಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ ಮತ್ತು ಇದಕ್ಕಾಗಿ ಗುಜರಾತ್ ಸರ್ಕಾರವನ್ನು ಅಭಿನಂದಿಸುತ್ತೇನೆ” ಎಂದು ಪ್ರಧಾನಿ ಹೇಳಿದರು.

***