ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೆಂಗಳೂರಿನಲ್ಲಿ ಸೌಂದರ್ಯ ಲಹರಿ ಪಾರಾಯಣೋತ್ಸವ ಮಹಾ ಸಮರ್ಪಣೆಯಲ್ಲಿ ಭಾಗಿಯಾದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನಲ್ಲಿ ಸೌಂದರ್ಯಲಹರಿ ಪಾರಾಯಣೋತ್ಸವ ಮಹಾಸಮರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸೌಂದರ್ಯಲಹರಿ ಆದಿ ಶಂಕರಾಚಾರ್ಯರು ರಚಿಸಿದ ಶ್ಲೋಕಗಳಾಗಿವೆ. ಇಂದಿನ ಸಮಾರಂಭದಲ್ಲಿ ಸೌಂದರ್ಯಲಹರಿಯ ಸಾಮೂಹಿಕ ಪಾರಾಯಣ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು ಈ ಸಾಮೂಹಿಕ ಪಾರಾಯಣದ ಸನ್ನಿವೇಶದಲ್ಲಿ ತಮ್ಮಲ್ಲಿ ನವ ಚೈತನ್ಯ ಮೂಡಿದ ಅನುಭವವಾಗಿದೆ ಎಂದರು.

ಕೆಲವೇ ದಿನಗಳ ಹಿಂದೆ ತಾವು ಕೇದಾರನಾಥಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದ ಪ್ರಧಾನಿ, ಆದಿ ಶಂಕರಾಚಾರ್ಯರು ತಮ್ಮ ಜೀವಿತದ ಅಲ್ಪಾವಧಿಯಲ್ಲಿ ಆ ದೂರದ ಪ್ರದೇಶದಲ್ಲಿ ಮತ್ತು ಭಾರತದ ಇತರ ಕಡೆಗಳಲ್ಲಿ ಮಾಡಿರುವ ಕಾರ್ಯದಿಂದ ವಿಸ್ಮಯಗೊಂಡಿದ್ದಾಗಿ ತಿಳಿಸಿದರು. ಆದಿ ಶಂಕರರು ವೇದ ಮತ್ತು ಉಪನಿಷತ್ತಿನ ಮೂಲಕ ದೇಶವನ್ನು ಒಗ್ಗೂಡಿಸಿದರು ಎಂದು ಹೇಳಿದರು.

ಆದಿ ಶಂಕರಾಚಾರ್ಯರ ರಚನೆಯಾದ ಸೌಂದರ್ಯಲಹರಿಯೊಂದಿಗೆ ಶ್ರೀಸಾಮಾನ್ಯರು ಕೂಡ ನಂಟು ಹೊಂದಬಹುದೆಂದರು.

ಶಂಕರಾಚಾರ್ಯರು ಸಮಾಜದ ಪಿಡುಗುಗಳನ್ನು ಹೋಗಲಾಡಿಸಿದರು ಮತ್ತು ಭವಿಷ್ಯದ ಪೀಳಿಗೆಗೆ ತಲುಪುವಂತೆ ಮಾಡಿದರು ಎಂದರು. ವಿಭಿನ್ನ ಸಿದ್ಧಾಂತಗಳು ಮತ್ತು ಚಿಂತನೆಗಳಿಂದ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಂಡರು ಎಂದರು. ಎಲ್ಲರೂ ಒಪ್ಪುವ ಮತ್ತು ಒಗ್ಗೂಡಿ ಮುಂದೆ ಸಾಗುವ-ಭಾರತದ ಪ್ರಸಕ್ತ ಸಂಸ್ಕೃತಿಯ ಸ್ವರೂಪದಲ್ಲಿ ಆದಿ ಶಂಕರಾಚಾರ್ಯರ ತಪಸ್ಸು ಇದೆ ಎಂದರು. ಈ ಸಂಸ್ಕೃತಿ ನವ ಭಾರತದ ಬುನಾದಿಯಾಗಿದೆ ಮತ್ತು ಎಲ್ಲರೊಂದಿಗೆ ಎಲ್ಲರ ವಿಕಾಸ ಮಂತ್ರವನ್ನು ಅನುಗುಣವಾಗಿದೆ ಎಂದು ಪ್ರಧಾನಿ ತಿಳಿಸಿದರು.

ಎಲ್ಲ ಜಾಗತಿಕ ಸಮಸ್ಯೆಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ಪರಿಹಾರವಿದೆ ಎಂದು ಪ್ರಧಾನಿ ಹೇಳಿದರು. ಭಾರತದಲ್ಲಿ ಪ್ರಕೃತಿಯ ಶೋಷಣೆಯನ್ನು ತಡೆಯಲು ನಿರಂತರವಾದ ಒತ್ತಡ ಇದೆ ಎಂದರು.

ಈ ಹಿಂದೆ 350 ರೂಪಾಯಿ ಆಗುತ್ತಿದ್ದ ಎಲ್.ಇ.ಡಿ. ಬಲ್ಬ್ ಗಳು ಈಗ ಉಜಾಲಾ ಯೋಜನೆಯಡಿ 40-45 ರೂಪಾಯಿಗೆ ಸಿಗುತ್ತಿವೆ ಎಂದರು. ಈವರೆಗೆ 27 ಕೋಟಿ ಬಲ್ಬ್ ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು. ಇದರಿಂದ ವಿದ್ಯುತ್ ಬಿಲ್ ನಲ್ಲಿ ಉಳಿತಾಯ ಆಗಿದೆ ಎಂದೂ ತಿಳಿಸಿದರು.

ಉಜ್ವಲ ಯೋಜನೆಯಡಿಯಲ್ಲಿ 3 ಕೋಟಿ ಎಲ್.ಪಿ.ಜಿ. ಸಂಪರ್ಕ ಕಲ್ಪಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು. ಇದು ಗ್ರಾಮೀಣ ಮಹಿಳೆಯರ ಬದುಕಲ್ಲಿ ಕೇವಲ ಧನಾತ್ಮಕ ಬದಲಾವಣೆಯನ್ನಷ್ಟೇ ತಂದಿಲ್ಲ, ಜೊತೆಗೆ ನಿರ್ಮಲ ಪರಿಸರಕ್ಕೂ ಕೊಡುಗೆ ನೀಡಿದೆ ಎಂದರು.

ಅನಕ್ಷರತೆ, ಮೌಢ್ಯ, ಅಪೌಷ್ಟಿಕತೆ, ಕಪ್ಪುಹಣ ಮತ್ತು ಭ್ರಷ್ಟಾಚಾರದಂಥ ಪಿಡುಗುಗಳಿಂದ ಭಾರತವನ್ನು ಮುಕ್ತಗೊಳಿಸುವ ಪ್ರಯತ್ನಗಳು ಈ ಹೊತ್ತಿನ ಅಗತ್ಯವಾಗಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.

***