ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾರಾಣಸಿಯಲ್ಲಿ ಪ್ರಧಾನಮಂತ್ರಿ

ವಾರಾಣಸಿಯಲ್ಲಿ ಪ್ರಧಾನಮಂತ್ರಿ

2014ರ ನವೆಂಬರ್ ನಲ್ಲಿ ಈ ಕೇಂದ್ರಕ್ಕೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕೇಂದ್ರವನ್ನು ದೇಶಕ್ಕೆ ಸಮರ್ಪಿಸುವ ಕಾರ್ಯಕ್ರಮಕ್ಕಾಗಿ ವೇದಿಕೆಗೆ ಆಗಮಿಸುವ ಮುನ್ನ ಅಲ್ಲಿ ಅಭಿವೃದ್ದಿಪಡಿಸಲಾಗಿರುವ ಸೌಲಭ್ಯಗತ್ತ ಪಕ್ಷಿನೋಟ ಬೀರಿದರು.
ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಸಂಪರ್ಕದ ಮೂಲಕ ಮಹಾಮನಾ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ತೋರಿದರು. ಈ ರೈಲು ಗುಜರಾತ್ ನ ವಡೋದರ ಮತ್ತು ಸೂರತ್ ಅನ್ನು ವಾರಾಣಸಿಯೊಂದಿಗೆ ಸಂಪರ್ಕಿಸಲಿದೆ.

ಪ್ರಧಾನಮಂತ್ರಿಯವರು ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸಮರ್ಪಣೆ ಮತ್ತು ಶಂಕುಸ್ಥಾಪನೆಯ ಅಂಗವಾಗಿ ಫಲಕಗಳ ಅನಾವರಣ ಮಾಡಿದರು. ಅವರು ಉತ್ಕರ್ಷ್ ಬ್ಯಾಂಕ್ ನ ಬ್ಯಾಂಕಿಂಗ್ ಸೇವೆಯನ್ನೂ ಉದ್ಘಾಟಿಸಿದರು, ಮತ್ತು ಬ್ಯಾಂಕ್ ನ ಪ್ರಧಾನ ಕಚೇರಿಯ ಶಂಕುಸ್ಥಾಪನೆಯ ಅಂಗವಾಗಿ ಫಲಕ ಅನಾವರಣ ಮಾಡಿದರು.

ಪ್ರಧಾನಮಂತ್ರಿಯವರು ವಾರಾಣಸಿಯ ಜನತೆಯ ಸೇವೆಗಾಗಿ ಜಲ ಆಂಬುಲೆನ್ಸ್ ಮತ್ತು ಜಲ ಶವ ವಾಹನ ಸೇವೆಯನ್ನು ವಿಡಿಯೋ ಸಂಪರ್ಕದ ಮೂಲಕ ಉದ್ಘಾಟಿಸಿದರು. ನೇಕಾರರು ಮತ್ತು ಅವರ ಮಕ್ಕಳಿಗೆ ಸೌರ ದೀಪಗಳು ಮತ್ತು ಸಾಧನಗಳ ಕಿಟ್ ಅನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಒಂದೇ ವೇದಿಕೆಯಲ್ಲಿ, ಒಂದೇ ಕಾರ್ಯಕ್ರಮದಲ್ಲಿ, 1000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಸಮರ್ಪಿಸಲಾಗಿದೆ ಅಥವಾ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.

ವ್ಯಾಪಾರ ಕೇಂದ್ರವು ದೀರ್ಘಕಾಲದಿಂದ ವಾರಾಣಸಿಯ ಅತಿ ದೊಡ್ಡ ಯೋಜನೆಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದರು. ಈ ಕೇಂದ್ರವು ಶಿಲ್ಪಿಗಳಿಗೆ ಮತ್ತು ನೇಕಾರರಿಗೆ ತಮ್ಮ ಕೌಶಲವನ್ನು ವಿಶ್ವಕ್ಕೆ ತೋರಿಸಲು ನೆರವಾಗುತ್ತದೆ ಮತ್ತು ಅವರಿಗೆ ಉಜ್ವಲ ಭವಿಷ್ಯ ಒದಗಿಸುತ್ತದೆ ಎಂದರು. ಈ ಕೇಂದ್ರಕ್ಕೆ ಎಲ್ಲ ಪ್ರವಾಸಿಗರೂ ಬರುವಂತೆ ಜನರು ಉತ್ತೇಜಿಸಬೇಕು ಎಂದೂ ಅವರು ಕರೆ ನೀಡಿದರು. ಇದರಿಂದ ಕರಕುಶಲ ವಸ್ತುಗಳಿಗೆ ಬೇಡಿಕೆ ಹೆಚ್ಚಲಿದೆ ಮತ್ತು ಇದು ವಾರಾಣಸಿಯ ಪ್ರವಾಸೋದ್ಯಮ ಸಾಮರ್ಥ್ಯವನ್ನೂ ಹೆಚ್ಚಿಸಲಿದೆ ಮತ್ತು ನಗರದ ಆರ್ಥಿಕತೆಯನ್ನೂ ಹೆಚ್ಚಿಸಲಿದೆ ಎಂದರು.

ಎಲ್ಲ ಸಮಸ್ಯೆಗಳಿಗೂ ಅಭಿವೃದ್ಧಿಯೇ ಪರಿಹಾರ ಎಂದ ಪ್ರಧಾನಮಂತ್ರಿಯವರು, ಸರ್ಕಾರ ಬಡಜನರ ಬದುಕಿನಲ್ಲಿ ಮತ್ತು ಮುಂದಿನ ಪೀಳಿಗೆಯಲ್ಲಿ ಧನಾತ್ಮಕ ಬದಲಾವಣೆ ತರಲು ಗಮನ ಹರಿಸಿದೆ ಎಂದರು. ಈ ನಿಟ್ಟಿನಲ್ಲಿ ಉತ್ಕರ್ಷ್ ಬ್ಯಾಂಕ್ ನ ಪ್ರಯತ್ನವನ್ನು ಅವರು ಶ್ಲಾಘಿಸಿದರು.

ಇಂದು ಉದ್ಘಾಟನೆಯಾದ ಜಲ ಆಂಬುಲೆನ್ಸ್ ಮತ್ತು ಜಲ ಶವ ವಾಹಿನಿಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಜಲ ಮಾರ್ಗದ ಮೂಲಕವೂ ಅಭಿವೃದ್ಧಿ ಸಾಧಿಸಬಹುದು ಎಂಬುದನ್ನು ಇದು ತೋರುತ್ತದೆ ಎಂದರು.

ಮಹಾಮನಾ ಎಕ್ಸ್ ಪ್ರೆಸ್ ವಿಚಾರವಾಗಿ ಮಾತನಾಡಿದ ಪ್ರಧಾನಮಂತ್ರಿಯವರು, ವಡೋದರ ಮತ್ತು ವಾರಾಣಸಿ ಎರಡೂ ಕ್ಷೇತ್ರಗಳಿಂದ ತಾವು 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದನ್ನು ಸ್ಮರಿಸಿ, ಈಗ ಎರಡೂ ರೈಲಿನ ಮೂಲಕ ಸಂಪರ್ಕಿತವಾಗಿವೆ ಎಂದರು.

ಇಂದು ದೇಶ ತ್ವರಿತವಾಗಿ ಪ್ರಗತಿ ಸಾಧಿಸುತ್ತಿದೆ, ದೇಶದ ಹಿತದ ದೃಷ್ಟಿಯಿಂದ ಕಠಿಣವಾದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಪೂರ್ವ ಭಾರತವು ದೇಶದ ಪಶ್ಚಿಮ ಭಾಗದ ಅಭಿವೃದ್ಧಿಗೆ ಸರಿದೂಗಬೇಕು ಎಂದರು. ಇಂದು ಚಾಲನೆಗೊಂಡ ಯೋಜನೆಗಳು ಈ ಉದ್ದೇಶದ ಈಡೇರಿಕೆಯಲ್ಲಿ ಬಹು ದೂರ ಸಾಗುತ್ತವೆ ಎಂದು ಹೇಳಿದರು.