ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಚ್ಛತಾ ಶ್ರಮದಾನ ಮಾಡಿದ ಪ್ರಧಾನಿ, ಪಶುಧನ ಆರೋಗ್ಯ ಮೇಳಕ್ಕೆ ಭೇಟಿ, ವಾರಾಣಸಿಯ ಶಹನ್ಶಾಪುರದಲ್ಲಿ ಸಭಿಕರನ್ನುದ್ದೇಶಿಸಿ ಭಾಷಣ

ಸ್ವಚ್ಛತಾ ಶ್ರಮದಾನ ಮಾಡಿದ ಪ್ರಧಾನಿ, ಪಶುಧನ ಆರೋಗ್ಯ ಮೇಳಕ್ಕೆ ಭೇಟಿ,
ವಾರಾಣಸಿಯ ಶಹನ್ಶಾಪುರದಲ್ಲಿ ಸಭಿಕರನ್ನುದ್ದೇಶಿಸಿ ಭಾಷಣ

ಸ್ವಚ್ಛತಾ ಶ್ರಮದಾನ ಮಾಡಿದ ಪ್ರಧಾನಿ, ಪಶುಧನ ಆರೋಗ್ಯ ಮೇಳಕ್ಕೆ ಭೇಟಿ,
ವಾರಾಣಸಿಯ ಶಹನ್ಶಾಪುರದಲ್ಲಿ ಸಭಿಕರನ್ನುದ್ದೇಶಿಸಿ ಭಾಷಣ

ಸ್ವಚ್ಛತಾ ಶ್ರಮದಾನ ಮಾಡಿದ ಪ್ರಧಾನಿ, ಪಶುಧನ ಆರೋಗ್ಯ ಮೇಳಕ್ಕೆ ಭೇಟಿ,
ವಾರಾಣಸಿಯ ಶಹನ್ಶಾಪುರದಲ್ಲಿ ಸಭಿಕರನ್ನುದ್ದೇಶಿಸಿ ಭಾಷಣ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಾರಾಣಸಿಯ ಶಹನ್ಶಾಪುರ ಗ್ರಾಮದಲ್ಲಿ ಜೋಡಿ ಗುಂಡಿಯ ಶೌಚಾಲಯ ನಿರ್ಮಾಣಕ್ಕಾಗಿ ಶ್ರಮದಾನ ನಡೆಸಿದರು. ತಮ್ಮ ಗ್ರಾಮವನ್ನು ಬಯಲು ಶೌಚಮುಕ್ತಗೊಳಿಸಲು ಸಂಕಲ್ಪ ಮಾಡಿರುವ ಜನರೊಂದಿಗೆ ಅವರು ಸಂವಾದ ನಡೆಸಿದರು. ಶೌಚಾಲಯಕ್ಕೆ “ಇಜ್ಜತ್ ಘರ್”(ಗೌರವದ ಮನೆ) ಎಂದು ಹೆಸರಿಸುವ ಅವರ ಉಪಕ್ರಮವನ್ನು ಶ್ಲಾಘಿಸಿದರು.

ಪ್ರಧಾನಮಂತ್ರಿಯವರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಪಶುಧನ್ ಆರೋಗ್ಯ ಮೇಳಕ್ಕೂ ಭೇಟಿ ನೀಡಿದರು. ಈ ಸಮುಚ್ಚಯದಲ್ಲಿ ಕೈಗೊಳ್ಳಲಾಗಿರುವ ವಿವಿಧ ಆರೋಗ್ಯ ಮತ್ತು ವೈದ್ಯಕೀಯ ಚಟುವಟಿಕೆಗಳ ಬಗ್ಗೆ ಅವರಿಗೆ ವಿವರಿಸಲಾಯಿತು. ಇದರಲ್ಲಿ ಜಾನುವಾರುಗಳ ಶಸ್ತ್ರಚಿಕಿತ್ಸೆ, ಅಲ್ಟ್ರಾಸೋನೋಗ್ರಾಫಿ ಇತ್ಯಾದಿಯೂ ಸೇರಿದೆ.

ಬಳಿಕ ಬೃಹತ್ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಪಶುಧನ್ ಆರೋಗ್ಯ ಮೇಳವನ್ನು ಯಶಸ್ವಿಯಾಗಿ ರೂಪಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ಅಭಿನಂದಿಸಿದರು.

ಇದು ನೂತನ ಪ್ರಯತ್ನವಾಗಿದ್ದು, ರಾಜ್ಯದ ಪಶುಸಂಗೋಪನಾ ಕ್ಷೇತ್ರಕ್ಕೆ ಪ್ರಯೋಜನಕಾರಿಯಾಗಲಿದೆ ಎಂದರು. ಹಾಲು ಉತ್ಪಾದನೆಯಲ್ಲಿನ ಹೆಚ್ಚಳ ಜನರ ಆರ್ಥಿಕ ಪ್ರಗತಿಗೆ ಸಹಕಾರಿ ಎಂದೂ ಹೇಳಿದರು. ಹೈನುಗಾರಿಕೆ ಕ್ಷೇತ್ರದಲ್ಲಿ ಗಳಿಕೆಯನ್ನು ಸಮಗ್ರೀಕರಿಸಲು, ದೇದ ಇತರ ಭಾಗಗಳಲ್ಲಿರುವಂತೆ ಸಹಕಾರ ರಂಗ ನೆರವಾಗಲಿದೆ ಎಂದರು.

ಜನರ ಕ್ಷೇಮವೇ ಸರ್ಕಾರದ ಆದ್ಯತೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಸರ್ಕಾರದ ಸಂಕಲ್ಪವನ್ನು ಪುನರುಚ್ಚರಿಸಿದರು. ಮಣ್ಣಿನ ಆರೋಗ್ಯ ಕಾರ್ಡ್ ಗಳು ರೈತರಿಗೆ ಗಣನೀಯವಾಗಿ ಪ್ರಯೋಜನಕಾರಿಯಾಗಿವೆ ಎಂಬುದನ್ನು ಪ್ರಧಾನಿ ಉಲ್ಲೇಖಿಸಿದರು. ನಮ್ಮ ಸ್ವಾತಂತ್ರ್ಯ ಯೋಧರ ಕನಸು ನನಸು ಮಾಡಲು 2022ರ ಹೊತ್ತಿಗೆ ನವಭಾರತದ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಧನಾತ್ಮಕ ಕೊಡುಗೆ ನೀಡಲು ಸಂಕಲ್ಪ ಮಾಡಬೇಕು ಎಂದರು.

“ಸ್ವಚ್ಛತೆ ನಮ್ಮ ಜವಾಬ್ದಾರಿ” ಎಂಬ ಭಾವನೆಯನ್ನು ಎಲ್ಲರಲ್ಲಿಯೂ ಮೂಡಿಸುವ ಅಗತ್ಯವಿದೆ ಎಂದು ಪ್ರಧಾನಿ ತಿಳಿಸಿದರು. ಇದು ಬಡಜನರ ಆರೋಗ್ಯವನ್ನು ರಕ್ಷಿಸಲು ಮತ್ತು ಕ್ಷೇಮವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಬಹುದೂರ ಸಾಗುತ್ತದೆ ಎಂದರು. ತಮಗೆ ಸ್ವಚ್ಛತೆ ಎಂಬುದು ಪ್ರಾರ್ಥನೆಯಂತೆ ಮತ್ತು ಶುದ್ಧತೆಯು ಪಡವರ ಸೇವೆಯ ಸಾಧನ ಎಂದೂ ಪ್ರಧಾನಿ ಹೇಳಿದರು.