ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅನುಬಂಧ IXರ ವಿಸ್ತರಣೆ ಮತ್ತು ಪೂರಕ ಅನುಬಂಧ Xಕ್ಕೆ ಅಂಕಿತ ಹಾಕುವ ಮೂಲಕ ಭಾರತ ಮತ್ತು ಕೆನಡಾ ನಡುವಿನ ತಿಳಿವಳಿಕೆ ಒಪ್ಪಂದ ನವೀಕರಣ

ಅನುಬಂಧ IXನ್ನು 2011ರ ಏಪ್ರಿಲ್ 1ರಿಂದ 2016ರ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಲು ಮತ್ತು ಭಾರತ ಸರ್ಕಾರ ಹಾಗೂ ಶಾಸ್ತ್ರೀ ಭಾರತ- ಕೆನಡಾ ಸಂಸ್ಥೆ (ಎಸ್.ಐಸಿಐ) ನಡುವಿನ ತಿಳಿವಳಿಕೆ ಒಪ್ಪಂದವನ್ನು ಪೂರಕ ಅನುಬಂಧ Xಕ್ಕೆ ಅಂಕಿತ ಹಾಕುವ ಮೂಲಕ 1968ರ ನವೆಂಬರ್ ನಲ್ಲಿ ಅಂಕಿತ ಹಾಕಲಾದ ತಿಳಿವಳಿಕೆ ಒಪ್ಪಂದದ ನವೀಕರಣ ಮಾಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಪೂರ್ವಾನ್ವಯ ಅನುಮೋದನೆ ನೀಡಿದೆ.

ಈ ಅನುಮೋದನೆಯು ಈ ಕೆಳಗಿನ ಚಟುವಟಿಕೆ ಕೈಗೊಳ್ಳಲು ಹಾದಿ ಮಾಡಿಕೊಡಲಿದೆ.:

ಎ. ಶಾಸ್ತ್ರೀ ಸಂಶೋಧನಾ ಫೆಲೋಶಿಪ್ ಮತ್ತು ಮೊಬಿಲಿಟಿ ಕಾರ್ಯಕ್ರಮ

i. ಶಾಸ್ತ್ರೀ ಸಂಶೋಧನಾ ಫೆಲೋಷಿಪ್ ಗಳು.

– ಡಾಕ್ಟರೇಟ್ ಸಂಶೋಧನೆ

– ಡಾಕ್ಟರೇಟ್ ನಂತರದ ಸಂಶೋಧನೆ

– ಸಾಂಸ್ಥಿಕ ಸಹಯೋಗದ ಸಂಶೋಧನೆ

ii. ಶಾಸ್ತ್ರೀ ಮೊಬಿಲಿಟಿ ಕಾರ್ಯಕ್ರಮ.

B. ಫ್ಯಾಕಲ್ಟಿ –ಇನ್- ರೆಸಿಡೆನ್ಸ್ ಕಾರ್ಯಕ್ರಮ (ಹೊಸತು)

C. ವೃತ್ತಿಪರ ಶಿಕ್ಷಣಕ್ಕೆ ಬೋಧಕ ಅಬಿವೃದ್ಧಿ ಕಾರ್ಯಕ್ರಮ (ಹೊಸತು)

D.ಗ್ರಂಥಾಲಯ ಕಾರ್ಯಕ್ರಮ

ಭಾರತೀಯ ವಿದ್ವಾಂಸರಿಗೆ ಮತ್ತು ಸಂಸ್ಥೆಗಳಿಗಾಗಿ ಆನ್ ಲೈನ್ ನಿಯತಕಾಲಿಕಗಳು

E. ಸೌಲಭ್ಯ ಸಹಿತವಾದ ಮಾಹಿತಿ ಯೋಜನೆ (ಹೊಸತು)

i. ಸಂಪನ್ಮೂಲ ಕೇಂದ್ರ (ಎರಡೂ ರಾಷ್ಟ್ರಗಳ ಸಂಸ್ಥೆಗಳಿಗೆ ಸಂಪರ್ಕ ಮತ್ತು ಪ್ರವೇಶ ಒದಗಿಸಲು)

ii. ವಿಚಾರಗೋಷ್ಠಿ, ಸಮಾವೇಶ ಮತ್ತು ಸಮಾಲೋಚನೆ

iii. ಸಂಶೋಧನಾ ಸಾಧನಗಳ ಪ್ರಕಟಣೆ ಮತ್ತು ವರದಿ

ಎಸ್.ಐ.ಸಿ.ಐ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹೊಸ ಕಾರ್ಯಕ್ರಮಗಳು ಮತ್ತು ಎರಡೂ ದೇಶಗಳ ನಡುವಿನ ಸಹಕಾರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಶಿಫಾರಸು ಮಾಡುವ ಇತರ ಕೆಲವು ಕಾರ್ಯಕ್ರಮಗಳನ್ನೂ ಕೈಗೊಳ್ಳುತ್ತದೆ.

ಅಂತಾರಾಷ್ಟ್ರೀಯ ಕಾರ್ಯಕ್ರಮಗಳಿಗೆ ಅಗತ್ಯವಾದ ಶೈಕ್ಷಣಿಕ ಜಾಲಕ್ಕೆ ಜಾಗತಿಕ ಉಪಕ್ರಮ (ಜಿ.ಐ.ಎ.ಎನ್), ಪ್ರಭಾವಿತ ಸಂಶೋಧನೆ, ನಾವಿನ್ಯತೆ ಮತ್ತು ತಂತ್ರಜ್ಞಾನ (ಇಂಪ್ರಿಟ್), ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಕಾರ್ಯಕ್ರಮ ಇತ್ಯಾದಿ ಎಚ್.ಆರ್.ಡಿ. ಸಚಿವಾಲಯದ ಹಲವಾರು ಕಾರ್ಯಕ್ರಮಗಳನ್ನು ಎಸ್.ಐ.ಸಿ.ಐ. ಕೈಗೊಳ್ಳಲಿದೆ. ಈ ಸಂಸ್ಥೆಯು ಉನ್ನತ ಶಿಕ್ಷಣದ ಸಹಕಾರಕ್ಕಾಗಿ 2010ರಲ್ಲಿ ಎರಡೂ ದೇಶಗಳ ನಡುವೆ ಸಹಿ ಹಾಕಲಾದ ಮತ್ತು ಮತ್ತೆ ಐದು ವರ್ಷಗಳ ಅವಧಿಗೆ ನವೀಕರಿಸಲಾಗಿರುವ ಎಂ.ಓ.ಯು.ಯಲ್ಲಿರುವಂತೆ ಕಾರ್ಯಕ್ರಮಗಳನ್ನು ಕೈಗೊಳ್ಳಲಿದೆ.

ಎಚ್.ಆರ್.ಡಿ. ಸಚಿವಾಲಯವು 1ನೇ ಏಪ್ರಿಲ್ 2016ರಿಂದ 31 ಮಾರ್ಚ್ 2021ರವರೆಗಿನ ಸಂಪೂರ್ಣ ಐದು ವರ್ಷಗಳ ಅವಧಿಗೆ ಅನುಬಂಧ X ಕ್ಕಾಗಿ 33.176 ಕೋಟಿ ರೂಪಾಯಿಗಳ ವೆಚ್ಚಕ್ಕೆ ತನ್ನ ಅನುಮೋದನೆ ನೀಡಿದೆ.

ಹಿನ್ನೆಲೆ:

ಎಸ್.ಐಸಿಐ ಒಂದು ಎರಡು ರಾಷ್ಟ್ರಗಳ ಸಂಸ್ಥೆ, ಇದನ್ನು 1968ರಲ್ಲಿ ಆರಂಭಿಕ ಮೂರು ವರ್ಷಗಳ ಅವಧಿಗೆ ಭಾರತ ಗಣರಾಜ್ಯ ಮತ್ತು ಎಸ್.ಐ.ಸಿ.ಐ. ನಡುವೆ ನವೆಂಬರ್ 29, 1968ರಂದು ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕುವ ಮೂಲಕ ಸ್ಥಾಪಿಸಲಾಯಿತು. ಅಂದಿನಿಂದ ಸಂಪುಟದ ಒಪ್ಪಿಗೆಯೊಂದಿಗೆ, ಎಂ.ಓ.ಯು.ವನ್ನು ಕಾಲ ಕಾಲಕ್ಕೆ ಪೂರಕ ಅನುಬಂಧಗಳಿಗೆ ಅಂಕಿತ ಹಾಕುವ ಮೂಲಕ ನವೀಕರಿಸಲಾಗುತ್ತಿದೆ. ಇಂಥ ಹಿಂದಿನ ಪೂರಕ ಅನುಬಂಧವನ್ನು ಪೂರಕ ಅನುಬಂಧ IX ಎಂದು ಕರೆಯಲಾಗಿದ್ದು, ಐದು ವರ್ಷದ ಅವಧಿಗೆ ಅಂಕಿತ ಹಾಕಲಾಗಿದ್ದು, 2011ರ ಮಾರ್ಚ್ 31ರಂದು ಕೊನೆಗೊಂಡಿತ್ತು.

ಭಾರತ ಮತ್ತು ಕೆನಡಾ ನಡುವೆ ಶೈಕ್ಷಣಿಕ ಚಟುವಟಿಕೆಗಳಿಗೆ ಅವಕಾಶ ನೀಡುವ ಮೂಲಕ ಎರಡೂ ರಾಷ್ಟ್ರಗಳ ನಡುವಿನ ಹೊಂದಾಣಿಕೆಯನ್ನು ಉತ್ತೇಜಿಸಲು ಭಾರತದ ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ನಿಧನದ ಬಳಿಕ ದಿ ಶಾಸ್ತ್ರೀ ಇಂಡೋ – ಕೆನಡಿಯನ್ ಇನ್ ಸ್ಟಿಟ್ಯೂಟ್ ಸ್ಥಾಪಿಸಲಾಯಿತು. ಈ ಸಂಸ್ಥೆ ಭಾರತ ಮತ್ತು ಕೆನಡಾ ಎರಡೂ ಕಡೆ ಕಚೇರಿಯನ್ನು ನಿರ್ವಹಿಸುತ್ತದೆ. ಭಾರತ-ಕೆನಡಾ ಸಂಸ್ಥೆ ಮತ್ತು ಶೈಕ್ಷಣಿಕ ಚಟುವಟಿಕೆಗೆ ಲಾಭ ತರುವಂಥ ಶಿಷ್ಯವೇತನ ಒದಗಿಸುವುದು ಮತ್ತು ಸಹಯೋಗದ ಸಂಶೋಧನಾ ಉಪಕ್ರಮ ಕೈಗಳ್ಳುವುದು ಎಸ್.ಐ.ಸಿ.ಐನ ಪಾತ್ರವಾಗಿದೆ. ಎಸ್.ಐ.ಸಿ.ಐ. ಈ ಹಿಂದೆ ಮಾನವತೆ ಮತ್ತು ಸಾಮಾಜಿಕ ವಿಜ್ಞಾನದ ಬಗ್ಗೆ ಗಮನ ಹರಿಸುತ್ತಿತ್ತು, ಆದರೆ ಅದು 2001ರಿಂದ ತನ್ನ ಆಸಕ್ತಿಯ ಕ್ಷೇತ್ರ ವಿಸ್ತರಿಸಿಕೊಂಡಿದ್ದು, ಕಾನೂನು, ವ್ಯವಸ್ಥಾಪನೆ, ಮಾಹಿತಿ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ತಂತ್ರಜ್ಞಾನ ಮತ್ತು ಮಾನವನಿಗೆ ವಿಜ್ಞಾನದ ಸಂಪರ್ಕ ಒದಗಿಸುವ ಕ್ಷೇತ್ರಗಳ ಮೇಲೂ ಗಮನ ಹರಿಸಿದೆ.

ಎಸ್.ಐ.ಸಿ.ಐ.ನ ಸದಸ್ಯತ್ವವನ್ನೂ ಮೂಲದಿಂದ ನಾಲ್ಕು ಪಟ್ಟು ಹೆಚ್ಚಿಸಿದ್ದು 35 ಕೆನಡಾ ವಿಶ್ವವಿದ್ಯಾಲಯಗಳು ಮತ್ತು ಕೆಲವು ಐಐಎಂ, ಐಐಟಿ, ರಾಷ್ಟ್ರೀಯ ಕಾನೂನು ಶಾಲೆ, ರಾಷ್ಟ್ರೀಯ ವಸ್ತುಪ್ರದರ್ಶನ ಸಂಸ್ಥೆ, ಸಂಶೋಧನೆಯ ಸರ್ವೋಚ್ಛ ಕಾಯಗಳು ಮತ್ತು ಕೇಂದ್ರ ಹಾಗೂ ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳು ಸೇರಿದಂತೆ 54 ಭಾರತೀಯ ಸಂಸ್ಥೆಗಳು ಇದರಲ್ಲಿವೆ.

ಎಸ್.ಐ.ಸಿ.ಐ. ಕಾರ್ಯಕಾರಿ ಮಂಡಳಿಯಿಂದ ನಿರ್ವಹಿಸಲ್ಪಡುತ್ತದೆ. ಇದಕ್ಕೆ ನಿರ್ದೇಶಕ ಮಂಡಳಿ ಎಂದು ಔಪಚಾರಿಕವಾಗಿ ಕರೆಯಲಾಗುತ್ತದೆ. ಇದರಲ್ಲಿ ಭಾರತ ಮತ್ತು ಕೆನಡಾದ ಸದಸ್ಯ ಮಂಡಳಿಯ ಮತ್ತು ಭಾರತ ಹಾಗೂ ಕೆನಡಾ ಸರ್ಕಾರದ ತಲಾ ಮೂವರು ಪ್ರತಿನಿಧಿಗಳು ಇರುತ್ತಾರೆ. ಭಾರತ ಸರ್ಕರವು ಎಸ್.ಐ.ಸಿ.ಐ.ನ ದೆಹಲಿ ಕಚೇರಿಯ ನಿರ್ವಹಣಗೆ ಮತ್ತು ಕೆನಡಾದಲ್ಲಿ ಭಾರತೀಯ ಅಧ್ಯಯನ ಉತ್ತೇಜಿಸಲು ಆರ್ಥಿಕ ನೆರವು ನೀಡುತ್ತದೆ. ಅಲ್ಲದೆ ಸಂಸ್ಥೆಗೆ ಕೆನಡಾ ಸರ್ಕಾರ, ಕೆನಡಾದ ಸಂಸ್ಥೆಗಳು ಮತ್ತು ಸಂಘಟನೆಗಳ ನೆರವೂ ಸಿಗುತ್ತದೆ.

***

AKT/VBA/SH/SK