ಅಮೆರಿಕದ ವಾಣಿಜ್ಯೋದ್ಯಮಗಳು ಆರ್ಥಿಕತೆಯ ಹೊಸ ಕ್ಷೇತ್ರ, ತಮ್ಮ ಉತ್ಪನ್ನಕ್ಕೆ ಮಾರುಕಟ್ಟೆ, ಕುಶಲ ಕರ್ಮಿಗಳ ದೊಡ್ಡ ತಂಡ ಮತ್ತು ಉತ್ಪಾದನೆ ಮತ್ತು ತಯಾರಿಕೆಗೆ ಜಾಗತಿಕ ತಾಣ ಹುಡುಕುತ್ತಿರುವಾಗ ಭಾರತ ಅದಕ್ಕೆ ಸೂಕ್ತ ಪಾಲುದಾರನಾಗಿದೆ. ಭಾರತದ ಬಲವಾದ ಆರ್ಥಿಕತೆ ಮತ್ತು ಶೇಕಡ 7.6ರ ವಾರ್ಷಿಕ ವೃದ್ಧಿದರ, ನಮ್ಮ ಪರಸ್ಪರ ಪ್ರಗತಿಗೆ ಹೊಸ ಅವಕಾಶ ಸೃಷ್ಟಿಸಿವೆ.