ಆಧುನಿಕ ಭಾರತ ಈಗ ತನ್ನ 70ನೇ ವರ್ಷದಲ್ಲಿದೆ. ನನ್ನ ಸರ್ಕಾರಕ್ಕೆ, ಸಂವಿಧಾನವೇ ನಿಜವಾದ ಪವಿತ್ರ ಗ್ರಂಥ. ಮತ್ತು ಆ ಪವಿತ್ರ ಗ್ರಂಥದಲ್ಲಿ, ನಂಬಿಕೆಯ, ವಾಕ್ ಮತ್ತು ಮತದಾನದ ಸ್ವಾತಂತ್ರ್ಯವಿದೆ, ಮತ್ತು ಎಲ್ಲ ಪ್ರಜೆಗಳಿಗೆ ಸಮಾನತೆ ಇದೆ, ಅದೇ ಹಿನ್ನೆಲೆಯಲ್ಲಿ ಮೂಲಭೂತ ಹಕ್ಕುಗಳನ್ನು ಪ್ರತಿಷ್ಠಾಪಿಸಲಾಗಿದೆ. ನನ್ನ ದೇಶವಾಸಿಗಳ ಪೈಕಿ 800 ದಶಲಕ್ಷ ಜನರು ಪ್ರತಿ ಐದು ವರ್ಷಕ್ಕೊಮ್ಮೆ ತಮ್ಮ ಮತದಾನದ ಹಕ್ಕು ಚಲಾಯಿಸುತ್ತಾರೆ. ಆದರೆ, ಎಲ್ಲ 125 ಕೋಟಿ ನಾಗರಿಕರಿಗೂ ಭೀತಿಯಿಂದ ಸ್ವಾತಂತ್ರ್ಯವಿದೆ, ಅವರು ಬಳಸುವ ಸ್ವಾತಂತ್ರ್ಯ ಅವರ ಬದುಕಿನ ಎಲ್ಲ ಕ್ಷಣವಾಗಿದೆ.