ನನ್ನ ಕಾರ್ಯ ಮಾಡುವ ಪಟ್ಟಿ ದೊಡ್ಡದು ಮತ್ತು ಮಹತ್ವಾಕಾಂಕ್ಷೆಯದ್ದಾಗಿದೆ. ಇದರಲ್ಲಿ ಚೈತನ್ಯಶೀಲ ಕೃಷಿ ವಲಯದಿಂದ ಕೂಡಿದ ಕ್ರಿಯಾತ್ಮಕ ಗ್ರಾಮೀಣ ಆರ್ಥಿಕತೆಯೂ ಸೇರಿದೆ. ಎಲ್ಲರ ತಲೆಯ ಮೇಲೊಂದು ಸೂರು ಮತ್ತು ಎಲ್ಲ ಮನೆಗಳಿಗೂ ವಿದ್ಯುತ್, ನಮ್ಮ ಲಕ್ಷಾಂತರ ಯುವಕರನ್ನು ಕುಶಲಿಗಳನ್ನಾಗಿ ಮಾಡುವುದು, 100 ಸ್ಮಾರ್ಟ್ ನಗರ ನಿರ್ಮಾಣ, ಒಂದುಕೋಟಿ ಬ್ರಾಡ್ ಬ್ಯಾಂಡ್ ಹೊಂದುವುದು ಮತ್ತು ಗಣಕೀಕೃತ ವಿಶ್ವಕ್ಕೆ ನಮ್ಮ ಗ್ರಾಮಗಳನ್ನೂ ಸಂಪರ್ಕಿಸುವುದು, ಮತ್ತು 21ನೇ ಶತಮಾನದ ರೈಲು, ರಸ್ತೆ ಮತ್ತು ವಿಮಾನ ನಿಲ್ದಾಣ ಮೂಲಸೌಕರ್ಯ ನಿರ್ಮಾಣ. ಇವು ಕೇವಲ ಆಶೋತ್ತರಗಳಲ್ಲ, ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಬೆಳಕಿನ ಇಂಗಾಲದ ಜಾಡನ್ನು ಸೀಮಿತ ಕಾಲಮಿತಿಯೊಳಗೆ ಸಾಧಿಸುವುದು ಅಗತ್ಯವಾಗಿದೆ ಮತ್ತು ಗುರಿಯಾಗಿದೆ.