ನಮ್ಮ ರಾಷ್ಟ್ರಗಳು (ಭಾರತ ಮತ್ತು ಅಮೆರಿಕ) ವಿವಿಧ ಇತಿಹಾಸ, ಸಂಸ್ಕೃತಿ ಮತ್ತು ನಂಬಿಕೆಯಿಂದ ರೂಪತಳೆದಿರಬಹುದು, ಆದರೂ, ನಮ್ಮ ದೇಶದ ಬಗ್ಗೆ ಪ್ರಜಾಪ್ರಭುತ್ವದ ನಮ್ಮ ನಂಬಿಕೆ ಮತ್ತು ನಮ್ಮ ಜನರ ಸ್ವಾತಂತ್ರ್ಯದ ಬಗೆಗಿನ ನಂಬಿಕೆ ಸಮಾನವಾಗಿದೆ. ಎಲ್ಲ ಪ್ರಜೆಗಳೂ ಸಮಾನವಾಗಿ ಆಗಿದ್ದಾರೆ ಎಂಬ ಕಲ್ಪನೆ ಅಮೆರಿಕದ ಸಂವಿಧಾನದ ಕೇಂದ್ರ ಸ್ತಂಭವಾಗಿದೆ. ನಮ್ಮ ಪೂರ್ವಜರು ಕೂಡ ಅದೇ ನಂಬಿಕೆಯನ್ನು ಹಂಚಿಕೊಂಡಿದ್ದಾರೆ ಮತ್ತು ಭಾರತದ ಪ್ರತಿಯೊಬ್ಬ ನಾಗರಿಕನ ವೈಯಕ್ತಿಕ ಸ್ವಾತಂತ್ರ್ಯವನ್ನು ಬಯಸಿದ್ದಾರೆ.