ನಾವು ಎಂದಿಗೂ ದ್ವಿಧ್ರುವೀಯ ಜಗತ್ತಿನ ಬಗ್ಗೆ ನಂಬಿಕೆ ಇಟ್ಟಿಲ್ಲ. ಇಂದು ಇಡೀ ಜಗತ್ತು ಹೆಚ್ಚು ಸ್ವತಂತ್ರವಾಗಿದೆ ಮತ್ತು ಆಂತರಿಕವಾಗಿ ಸಂಪರ್ಕ ಹೊಂದಿದೆ. ಇದಕ್ಕೆ ಮುನ್ನ, ವಿದೇಶಾಂಗ ನೀತಿ ಸರ್ಕಾರಗಳ ನಡುವೆ ಸಾಧ್ಯವಾಗುತ್ತಿತ್ತು, ಆದರೆ ಇಂದು ಇದು ಕೇವಲ ಸರ್ಕಾರಗಳ ನಡುವೆ ಮಾತ್ರವೇ ಸಾಧ್ಯವಾಗುತ್ತಿಲ್ಲ. ಸರ್ಕಾರದ ಸಂಬಂಧಗಳು ಮುಖ್ಯ ಆದರೆ, ಅದೇ ರೀತಿ ಜನರಿಂದ ಜನರ ನಡುವಿನ ಸಂಬಂಧವೂ ಅಷ್ಟೇ ಮುಖ್ಯ. ಇಂದಿನ ಮಾದರಿಯಲ್ಲಿ ಬದಲಾವಣೆ ಆಗಿದೆ – ಟೈಮ್ಸ್ ನೌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ.