ನಾವು ಹಲವು ವಲಯಗಳನ್ನು ಸ್ವಯಂಚಾಲಿತ ಅನುಮೋದನೆ ವ್ಯಾಪ್ತಿಗೆ ತಂದಿದ್ದೇವೆ ಮತ್ತು ರಕ್ಷಣೆ ಮತ್ತು ರೈಲ್ವೆಯಂಥ ವಲಯವನ್ನೂ ವಿದೇಶೀ ಬಂಡವಾಳಕ್ಕೆ ಮುಕ್ತಗೊಳಿಸಿದ್ದೇವೆ. ದೀರ್ಘಕಾಲದಿಂದ ಬಾಕಿ ಇದ್ದ ವಿಮಾ ಕಾನೂನು ಸುಧಾರಣೆಯನ್ನು ಯಶಸ್ವಿಯಾಗಿ ಅನುಮೋದಿಸಿದ್ದೇವೆ. ಅಮೆರಿಕದ ಕಂಪನಿಗಳು ಸೇರಿದಂತೆ ಹಲವು ವಿಮಾ ಕಂಪನಿಗಳು ವಿಮಾ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಿವೆ. ನಾವು ಸುಗಮವಾಗಿ ವಾಣಿಜ್ಯ ಮಾಡುವುದಕ್ಕೆ ಹಲವು ಕ್ರಮ ಕೈಗೊಂಡಿದ್ದೇವೆ ಮತ್ತು ಜಾಗತಿಕ ಶ್ರೇಣಿಯಲ್ಲಿ ತ್ವರಿತವಾಗಿ ಮೇಲೇರುತ್ತಿದ್ದೇವೆ.