ಭಯೋತ್ಪಾದನೆಯ ವಿಚಾರದಲ್ಲಿ ಜಗತ್ತು ಭಾರತದ ದೃಷ್ಟಿಕೋನವನ್ನು ಎಂದೂ ನಂಬಿರಲಿಲ್ಲ. ಇದು ನಿಮ್ಮ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎಂದು ಹೇಳಿ ತಳ್ಳಿಹಾಕುತ್ತಿದ್ದರು. ಆದರೆ ಇಂದು ಭಯೋತ್ಪಾದನೆಯ ಬಗ್ಗೆ ಭಾರತ ಏನು ಹೇಳುತ್ತಿತ್ತೋ ಅದನ್ನು ಒಪ್ಪುತ್ತಿದ್ದಾರೆ. ಭಯೋತ್ಪಾದನೆಯ ಬಗ್ಗೆ ಭಾರತದ ಚರ್ಚೆ, ಭಯೋತ್ಪಾದನೆಯಿಂದ ಭಾರತ ಅನುಭವಿಸಿರುವನಷ್ಟ, ಮಾನವತೆಗೆ ಆಗಿರುವ ನಷ್ಟ, ಇದೆಲ್ಲವನ್ನೂ ವಿಶ್ವ ಈಗ ಅಂಗೀಕರಿಸುತ್ತಿದೆ. ಹೀಗಾಗಿ ನಾವು ಈ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗಬೇಗು ಎಂದು ನಾನು ನಂಬುತ್ತೇನೆ  – ಟೈಮ್ಸ್ ನೌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ.