ಸಂಸತ್ತು ಇರುವುದು ಚರ್ಚೆಗಾಗಿ. ಸಂಸತ್ತಿನಲ್ಲಿ ವಿರೋಧ ವ್ಯಕ್ತಪಾಗಬೇಕು. ಒಬ್ಬರ ವಿರೋಧಕ್ಕೆ ಸಂಸತ್ತು ತನ್ನ ವಾದ ಮಂಡಿಸಬೇಕು, ಅವರು ಬೆಂಬಲಿಸಿದಾಗ ವಾದವನ್ನು ಮಂಡಿಸಬೇಕು. ಸಂಸತ್ತಿನ ಮೂಲ ಸ್ಫೂರ್ತಿಯನ್ನು ಎತ್ತಿ ಹಿಡಿಯುವುದು ಪ್ರಜಾಪ್ರಭುತ್ವವನ್ನು ಗೌರವಿಸುವ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ.  ಸಂಸತ್ತಿನ ಒಳಗೆ ಉಪಸ್ಥಿತರಿರುವ ಮತ್ತು ಹೊರಗೆ ಇರುವ ಎಲ್ಲರ ಜವಾಬ್ದಾರಿಯಾಗಿದೆ. ಇದು ಅಧಿಕಾರದಲ್ಲಿರುವ ಮತ್ತು ಅಧಿಕಾರದಲ್ಲಿ ಇಲ್ಲದೇ ಇರುವವರ ಜವಾಬ್ದಾರಿಯೂ ಆಗಿದೆ. ಈ ಅಂಶ ಸ್ಫೂರ್ತಿಯಿಂದ ಅನುಸರಿಸಬೇಕಾದ ವಿಚಾರ  – ಟೈಮ್ಸ್ ನೌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ.