ಎನ್.ಆರ್, ನಾರಾಯಣ ಮೂರ್ತಿ  ಸಹಸಂಸ್ಥಾಪಕರು, ಇನ್ಫೋಸಿಸ್
ಕೇಂದ್ರೀಯ ಹಂತದಲ್ಲಿ ಬ್ರಷ್ಟಾಚಾರ ಯಶಸ್ವಿಯಾಗಿ ಕಡಿಮೆಗೊಳ್ಳುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅವರ ಸಚಿವ ಸಂಪುಟ ಬಹಳ ಶ್ರಮಪಟ್ಟಿದೆ. ಕೇಂದ್ರ ಸರಕಾರದ ಹಂತದಲ್ಲಿ ಬ್ರಷ್ಟಾಚಾರದ ದೂರುಗಳನ್ನು ನಾನೀಗ ಬಹಳ ಕಡಿಮೆ ಕೇಳುತ್ತಿದ್ದೇನೆ. ಬಲಿಷ್ಠ ಆರ್ಥಿಕ ಪ್ರಗತಿ ಮನೋಭಾವದ ಸರಕಾರವನ್ನು ಪ್ರಧಾನಮಂತ್ರಿ ಅವರು ಮುನ್ನಡೆಸುತ್ತಿದ್ದಾರೆ ಎಂದು ನನಗೆ ಸ್ಪಷ್ಠವಾಗಿ ಅನಿಸುತ್ತಿದೆ. ಭಾರತವನ್ನು ಸುಧಾರಿಸುವ ಆಸಕ್ತಿ ಹೊಂದಿರುವ ಮೋದಿಯಂತಹ ವರ್ಚಸ್ಸಿನ ರಾಷ್ಟ್ರೀಯ ನಾಯಕರನ್ನು ನಾವಿಂದು ಹೊಂದಿರುವುದಕ್ಕೆ ನಾವೆಲ್ಲಾ ಹೆಮ್ಮೆ ಪಡೆಯಬೇಕು. ಕಳೆದ 5 ವರ್ಷಗಳ ಹಿನ್ನೋಟವನ್ನು ನೋಡಿದಾಗ, ದೇಶಕ್ಕೆ ಗಮನ ಕೇಂದ್ರೀಕರಿಸಿದ, ಶಿಸ್ತಿಗೆ ಶುಚಿತ್ವಕ್ಕೆ ಮತ್ತು ಆರ್ಥಿಕ ಪ್ರಗತಿಗೆ ಗಮನವಿಟ್ಟ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ನಾಯಕರನ್ನು ನಾವು ಹೊಂದಿರುವ ಬಹಳ ಒಳ್ಳೆಯ ಸಂಗತಿಯಾಗಿದೆ. ಸರಕಾರದ ಮುಂದುವರಿಕೆಯು ಬಹಳ ಒಳ್ಳೆಯ ವಿಷಯವಾಗುತ್ತದೆ.