ಎಮ್. ಎಸ್. ಸ್ವಾಮಿನಾಥನ್ , ಕೃಷಿ ವಿಜ್ಞಾನಿ
ಮೋದಿ ಸರಕಾರ ಕೃಷಿಕರ ಆಯೋಗದ ಹಲವಾರು ಸಲಹೆಗಳನ್ನು ಅನುಷ್ಠಾನಗೊಳಿಸಿದೆ. ಸುಧಾರಿತ ಬೀಜ, ಮಣ್ಣಿನ ಆರೋಗ್ಯ ಕಾರ್ಡ್ ಗಳು ಸೇರಿದಂತೆ ಕೃಷಿಕರ ಆಯೋಗದ ಸಲಹೆ ಮೇರೆಗೆ ಸುಧಾರಿತ ವಿಮೆ, ನೀರಾವರಿ ಕ್ಷೇತ್ರ ವಿಸ್ತರಣೆ ಮತ್ತು ಕೃಷಿಕರ ಯೋಗಕ್ಷೇಮಗಳ ಅನುಷ್ಠಾನ ಜವಾಬ್ದಾರಿಯನ್ನು ಕೃಷಿ ಸಚಿವಾಲಯಕ್ಕೆ ಸೇರಿಸಲಾಗಿದೆ. ಕೃಷಿ ಕೆಲಸಗಳಲ್ಲಿ 50% ರಷ್ಟು ಪಾಲ್ಗೊಳ್ಳುವಿಕೆ ಗ್ರಾಮೀಣ ಮಹಿಳೆಯರದ್ದಾಗಿದೆ. ಕೃಷಿ ವಿಶ್ವವಿದ್ಯಾನಿಲಯಗಳು ಮತ್ತು ಖಾಸಗಿ ಕ್ಷೇತ್ರಗಳ ಮೂಲಕ ಇವರ ಮಾರುಕಟ್ಟೆ ಕೌಶಲ್ಯತೆ ಹೆಚ್ಚಿಸುವ ವಿಶೇಷ ಪ್ರಯತ್ನ ಕೂಡಾ ನಡೆದಿದೆ.