ಪ್ರಧಾನಮಂತ್ರಿಗಳೇ, 21ನೇ ಶತಮಾನದಲ್ಲಿ ಭಾರತವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲು ಸಹಾಯ ಮಾಡಲು ನಿಮ್ಮ ನಾಯಕತ್ವದ ಪಾತ್ರಕ್ಕಾಗಿ ಧನ್ಯವಾದಗಳು. ಕ್ವಾಡ್ ಅನ್ನು ಪುನಶ್ಚೇತನಗೊಳಿಸಲು ನೀವು ಸಹಾಯ ಮಾಡಿದ್ದೀರಿ. ಜಿ20 ನ ನಿಮ್ಮ ನಾಯಕತ್ವವು ಹವಾಮಾನ ಹಣಕಾಸಿನ ಮೇಲೆ ಹೊಸ ದಾಪುಗಾಲುಗಳನ್ನು ಮಾಡುತ್ತಿದೆ. ಮತ್ತು ನೀವು ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಜಾಗತಿಕ ಸವಾಲುಗಳಿಗೆ ಜಾಗತಿಕ ಪರಿಹಾರಗಳ ಪ್ರತಿಪಾದಕರಾಗಿದ್ದೀರಿ.