ಆಯುಷ್ಮಾನ್ ಭಾರತ ಕುರಿತಾಗಿ ನಾನು ಬಹಳ ಉತ್ಸುಕನಾಗಿದ್ದೇನೆ. ಅತ್ಯಧಿಕ ಗಾತ್ರದಲ್ಲಿ ಆಶಾ ಕಾರ್ಯಕರ್ತರು (ನೋಂದಾಯಿತ ಸಾಮಾಜಿಕ ಆರೋಗ್ಯ ಕಾರ್ಯಕರ್ತರು), ಅಂಗನವಾಡಿ ಕಾರ್ಯಕರ್ತರು ಹಾಗೂ ಎ. ಎನ್. ಎಮ್. (ಹೆಚ್ಚುವರಿ ಮಿಡ್ವೈವ್ಸ್ ನರ್ಸ್ ಗಳು) ಮುಂತಾದ ಮುಂಚೂಣಿಯ ಆರೋಗ್ಯ ಕಾರ್ಯಕರ್ತೆಯರ ಮೂಲಕ ಆರ್ಥಿಕ ಸುರಕ್ಷತೆ ಮತ್ತು ಹಾಗೂ ಪ್ರಾಥಮಿಕ ಆರೋಗ್ಯ ವ್ಯವಸ್ಥೆಗಳೆರಡಕ್ಕೂ ಪರಿಹಾರ ನೀಡುವ ಕಾರ್ಯರೂಪಿಸುವ ಯೋಜನೆ ಇದಾಗಿದೆ. ಈ ಯೋಜನೆಯು ಪ್ರಾರಂಭಿಕ ಹಂತದಲ್ಲಿದೆ. ಕಳೆದ 100 ದಿನಗಳಲ್ಲಿ ಹಲವರನ್ನು ತಲಪುವ ಮೂಲಕ ತೀವ್ರಗತಿಯ ವಿಸ್ತಾರ ಕಂಡಿದೆ ಹಾಗೂ ಮುಂಬರುವ ದಿನಗಳಲ್ಲಿ ಬಹಳಷ್ಟು ಜನರಿಗೆ ತಲಪುವ ಉದ್ಧೇಶ ಹೊಂದಿದೆ.