ನಾನು ನನ್ನ ಆತ್ಮೀಯ ಗೆಳೆಯ ಭಾರತದ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಅವರ ಪಕ್ಷದ ಗೆಲುವಿಗಾಗಿ ಅವರನ್ನು ಅಭಿನಂದಿಸಲು ಹರ್ಷಿಸುತ್ತೇನೆ, ನಾವು ನಮ್ಮ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಆಳ ಹಾಗೂ ಬಲಪಡಿಸಲು ಒಗ್ಗೂಡಿ ಕಾರ್ಯ ನಿರ್ವಹಿಸಲು ಉತ್ಸುಕನಾಗಿದ್ದೇನೆ. ಯುಎಇ ಭಾರತ ಮತ್ತು ಅದರ ಸ್ನೇಹಪರ ಜನರ ಅಭಿವೃದ್ದಿ ಮತ್ತು ಸಮೃದ್ಧಿಗೆ ಶುಭ ಕೋರುತ್ತದೆ.