ಭಾರತದಲ್ಲಿ ಈತನಕದ ಪರೋಕ್ಷ ತೆರಿಗೆಗಳಲ್ಲಿ ವಸ್ತು ಮತ್ತು ಸೇವೆ ತೆರಿಗೆ (Goods and Services Tax -GST) ಮಸೂದೆ
ಅತ್ಯಂತ ಪ್ರಾಮುಖ್ಯವಾಗಿದೆ. ಇದು ಎಲ್ಲಾ ಆರ್ಥಿಕ ವಲಯಗಳಿಗೂ ಉತ್ತೇಜನ ನೀಡಿ ದೇಶದ ಆರ್ಥಿಕ ಸ್ಥಿತಿಸುಧಾರಣೆಗೆ
ವಿಶೇಷ ಅವಕಾಶ ಕಲ್ಪಿಸಲಿದೆ. ಮಧ್ಯಂತರ ಅವಧಿಗೆ ಗ್ರಾಹಕರು ಕಡಿಮೆ ಬೆಲೆ ಕಾಣಲಿದ್ದಾರೆ, ವ್ಯಾಪಾರ ವ್ಯವಹಾರ
ಸರಳವಾಗಲಿದೆ, ತೆರಿಗೆ ತಳಹದಿಯ ವಿಸ್ತಾರ ಸರಕಾರಕ್ಕೆ ಮುಂಬರುವ ದಿನಗಳಲ್ಲಿ ತೆರಿಗೆಯನ್ನು ಸುಲಭಗೊಳಿಸಲಿದೆ