ಡಾ. ರಶೀದ್ ಅಹ್ಮೆದ್ ಬಿನ್ ಫಹದ್ ರಾಜ್ಯ ಸಚಿವರು ಯು.ಎ.ಇ
ಶಾಂತಿ, ಸ್ನೇಹ ಸೌಹಾರ್ದತೆ ಮುಂತಾದ ವಿಷಯಗಳಲ್ಲಿ ಯು.ಎ.ಇ ಮತ್ತು ಭಾರತಗಳು ಸಮಾನ ಮೌಲ್ಯ ಹೊಂದಿವೆ. ಜೊತೆಗೆ ಶ್ರೇಷ್ಠ ಪರಂಪರೆಯ ಇತಿಹಾಸವಿದೆ. ಎರಡೂ ಸಮಾಜಗಳೂ ಅತಿ ಪುರಾತನ ಸಂಬಂಧಗಳನ್ನು ಕೂಡಾ ಹೊಂದಿವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಇತ್ತೀಚಿನ ಯು.ಎ.ಇ ಭೇಟಿ ಹೊಸ ಸಂಬಂಧಗಳ ಬಾಗಿಲು ತೆರೆದಿದೆ. ಭಾರತ ಅತ್ಯಧಿಕ ಪ್ರಗತಿ ಸೂಚ್ಯಾಂಕ ಹೊಂದಿರುವ ಕಾರಣ, ಯು.ಎ.ಇ ಪಾಲಿಗೆ ಬಂಡವಾಳ ಹೂಡಿಕೆಯ ಅತ್ಯಾಕರ್ಷಕ ತಾಣಗಳಲ್ಲಿ ಒಂದಾಗಿದೆ. ಯು.ಎ.ಇ.ಯ ಅಭಿವೃದ್ಧಿ ಸಂಕಲ್ಪ ನಿಟ್ಟಿನಲ್ಲಿ ಮೂಲಸಂಪರ್ಕ, ಇಂಧನ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ಬಹುಮುಖ್ಯವಾಗಿವೆ. ಪರಸ್ಪರ ಹೆಚ್ಚುವರಿ ಹೂಡಿಕೆಯ ಉತ್ತಮ ಅವಕಾಶಗಳನ್ನು ಮುಂಬರುವ ದಿನಗಳಲ್ಲಿ ಕಾಣಬಹುದು.