ಡೊನಾಲ್ಡ್ ಟ್ರಂಪ್, ಅಧ್ಯಕ್ಷರು, ಅಮೆರಿಕ ಸಂಯುಕ್ತ ಸಂಸ್ಥಾನಗಳು
ಪ್ರಧಾನಿ ಮೋದಿಯವರನ್ನು ವೈಟ್ ಹೌಸ್ ಗೆ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ನಾವು ಇಲ್ಲಿ ಮತ್ತು ಭಾರತದಲ್ಲಿ ಸಾಕಷ್ಟು ಸಮಯ ಕಳೆದಿದ್ದೇವೆ. 5 ವರ್ಷಗಳ ಹಿಂದೆ ನಾವು ನಿಮ್ಮ ಸುಂದರ ದೇಶಕ್ಕೆ ಪ್ರಯಾಣಿಸಿದ್ದೆವು... ಅದು ಅದ್ಭುತವಾದ ಸಮಯವಾಗಿತ್ತು. ವಿಶ್ವದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಅಮೆರಿಕ ಮತ್ತು ಭಾರತದ ನಡುವೆ ವಿಶೇಷ ಬಾಂಧವ್ಯವಿದೆ.