ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಂತಹ ದೊಡ್ಡ ದೇಶವನ್ನು ಮುನ್ನಡೆಸುವುದು ಅತ್ಯಂತ ಕಷ್ಟಕರವಾದ ಕೆಲಸಗಳಲ್ಲಿ ಒಂದಾಗಿದೆ. ಆದರೆ, ಘನತೆವೆತ್ತರೇ, ನಿಮ್ಮ ನಾಯಕತ್ವ ಮತ್ತು 140 ಕೋಟಿ ಜನರಿಗೆ ನಿಸ್ವಾರ್ಥ ಸೇವೆಯ ಮೂಲಕ, ನೀವು ಭಾರತದ ಜನರಷ್ಟೇ ಅಲ್ಲ, ಭೂತಾನ ಮತ್ತು ಇಡೀ ಪ್ರಪಂಚದ ಪ್ರೀತಿ, ವಾತ್ಸಲ್ಯ ಮತ್ತು ಗೌರವವನ್ನು ಗಳಿಸಿದ್ದೀರಿ.