ಮೋದಿ ಅವರು ಸುಧಾರಣೆಗಳ ಜನಪ್ರಿಯ ನಾಯಕ. ಈ ನಿಟ್ಟಿನಲ್ಲಿ ಇವರು ಜಗತ್ತಿನ ಇತರೆಲ್ಲರನ್ನೂ ಹಿಂದಿಕ್ಕುತ್ತಾರೆ. ಇವರು ಅಧಿಕಾರ ಹಿಡಿದು 3 ವರ್ಷದೊಳಗಾಗಿ ಅನೇಕ ವಿಷಯಗಳಲ್ಲಿ ಅದ್ಬುತ ಸಾಧನೆ ಮಾಡಿದ್ದಾರೆ. ಜಿ.ಎಸ್.ಟಿ. ಜಾರಿಗೆ ತಂದರು ಮತ್ತು ನೋಟಿನ ಅಮಾನ್ಯತೆ ಕ್ರಮ ಕೂಡಾ ಬಹಳ ದೊಡ್ಡ ಸಾಧನೆಯಾಗಿದೆ. ಸುಧಾರಣೆಯ ಪ್ರಕ್ರಿಯೆಗಳಿಗೆ ಕೆಲವೊಮ್ಮೆ ತಾತ್ಕಾಲಿಕ ಅಡೆತಡೆಗಳು ಬರುವುದು ಸಹಜ. ಸ್ಪಷ್ಟವಾಗಿ ಹೇಳುವುದಾದರೆ, ದೀರ್ಘಕಾಲೀನ ಯೋಚನೆಗಳನ್ನು ಹೊತ್ತು, ಆ ನಿಟ್ಟಿನಲ್ಲಿ ಸ್ಪಷ್ಟ ಹೆಜ್ಜೆಗಳನ್ನಿರಿಸುವ ಸರಕಾರವನ್ನು ನಾವಿಂದು ಹೊಂದಿದ್ದೇವೆ.