ಇಸ್ರೇಲ್ ಗೆ ಸ್ವಾಗತ.... ಆಪ್ಕಾ ಸ್ವಾಗತ್ ಹೈ! ಮೇರೇ ದೋಸ್ತ್. ನಾವು ನಿಮಗಾಗಿ ಬಹುಕಾಲದಿಂದ ಕಾದಿದ್ದೇವೆ.ನಾವು ಭಾರತವನ್ನು ಪ್ರೀತಿಸುತ್ತೇವೆ.. ವಿಶ್ವ ಸಂಸ್ಥೆಯಲ್ಲಿ ಮೊದಲು ನಾವಿಬ್ಬರೂ ಭೇಟಿಯಾದಾಗ ನೀವು ಹೇಳಿದ ಮಾತು ಇನ್ನೂ ನೆನಪಿದೆ. ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧದ ಮಾತು ಬಂದಾಗ, ಅದಕ್ಕೇ ಆಕಾಶವೇ ಮಿತಿ. ಈಗ, ಶ್ರೀಯುತ ಪ್ರಧಾನಮಂತ್ರಿಯವರೇ, ಸಹಕಾರದ ವಿಷಯದಲ್ಲಿ ನಮ್ಮಿಬ್ಬರಿಗೂ ಭಾಹ್ಯಾಕಾಶವೇ ಮಿತಿ ಎಂದು ನಾನು ಅದಕ್ಕೆ ಇನ್ನೂ ಸೇರಿಸುತ್ತೇನೆ. ನೀವು ಜಾಗತಿಕ ಮಟ್ಟದ ಶ್ರೇಷ್ಠ ನಾಯಕರಾಗಿದ್ದೀರಿ. ನಾವಿಬ್ಬರೂ ಜೊತೆಯಲ್ಲಿ (ಭಾರತ – ಸ್ರೇಲ್ ಸಂಬಂಧದ ವಿಷಯಗಳಲ್ಲಿ) ಇನ್ನೂ ಅನೇಕ ಕಾರ್ಯಗಳನ್ನು, ಇನ್ನೂ ಉತ್ತಮ ರೀತಿಯಲ್ಲಿ ಮಾಡಬಹುದು.