ಬೆಂಜಮೀನ್ ನೆತನ್ಯಾಹು ಪ್ರಧಾನಮಂತ್ರಿ , ಇಸ್ರೇಲ್
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಅವರೇ, ನಿಮ್ಮ “ ಮೇಕ್ ಇನ್ ಇಂಡಿಯ” ಉಪಕ್ರಮವು ನನ್ನ “ಮೇಕ್ವಿತ್ ಇಂಡಿಯ” ನೀತಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ.ನಮ್ಮ ನಡುವೆ ತಂತ್ರಜ್ಞಾನದ ಉತ್ತಮ ಸಹಕಾರಕ್ಕಾಗಿ ಈ ತನಕದ ಅತಿ ಹೆಚ್ಚು ಮೌಲ್ಯದ, ಅಂದರೆ 40 ದಶಲಕ್ಷ ಡಾಲರ್ ನಾವಿನ್ಯತೆ ನಿಧಿಯನ್ನು ಮೂಲಧನವಾಗಿತೊಡಗಿಸುತ್ತೇವೆ. ನಮ್ಮ ಪಾಲುದಾರಿಕೆಯನ್ನು ಜಲ, ಕೃಷಿ, ರಕ್ಷಣೆ, ಇಂಧನ ಮತ್ತು ಇತರ ಹಲವುಕ್ಷೇತ್ರಗಳಿಗೂ ವಿಸ್ತರಿಸೋಣ. ಯಶಸ್ಸಿಗೆ ನನ್ನ ಸುಲಭ ಫಾರ್ಮುಲಾವೆಂದರೆ: ಐ2ಟಿ2. ಇದರ ಅರ್ಥ “ಭಾರತೀಯಪ್ರತಿಭೆ, ಇಸ್ರೇಲ್ ತಂತ್ರಜ್ಞಾನ”. ಇದು ಇಸ್ರೇಲ್ – ಭಾರತ ನಡುವಿನ ಭವಿಷ್ಯದ ಸಂಬಂಧಗಳ ಪ್ರತೀಕವಾಗಿದೆ.