ಮರ್ಲಿನ್ ಹ್ಯೂಸನ್ ,  ಕಾರ್ಯಾಧ್ಯಕ್ಷರು, ಅಧ್ಯಕ್ಷರು ಮತ್ತು ಸಿ.ಇ.ಒ,  ಲೊಖೀಡ್ ಮಾರ್ಟಿನ್
ಪ್ರಧಾನಿಯವರೊಂದಿಗಿನ ಭೇಟಿ ಫಲಪ್ರದಾಯಕವಾಗಿತ್ತು. ನಮ್ಮ ಎರಡು ದೇಶಗಳ ನಡುವಿನ ಸಂಬಂಧಗಳನ್ನು ಇನ್ನೂ ಶಕ್ತಿಯುತವಾಗಿಸುವ ಹಲವು ವಿಷಯಗಳ ಬಗ್ಗೆ ಮಾತುಕತೆಗೆ ಅವಕಾಶ ಸಿಕ್ಕಿದ್ದಕ್ಕಾಗಿ ಸಂತಸವಾಗುತ್ತಿದೆ. ಭಾರತ ಸರಕಾರದ ಜೊತೆ ಪಾಲುದಾರಿಕೆಯ ವ್ಯವಹಾರ ನಡೆಸಿ ದೀರ್ಘಾವಧಿಯ ಇತಿಹಾಸ ಲೊಖೀಡ್ ಮಾರ್ಟಿನ್ ಹೊಂದಿದೆ. ಭಾರತದ ಮತ್ತು ಈ ವಲಯದ ರಾಷ್ಟ್ರೀಯ ಸುರಕ್ಷತೆಯ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಪೂರೈಸುವ ಮೂಲಕ ಅಮೆರಿಕ ಮತ್ತು ಭಾರತದಲ್ಲಿ ಉತ್ತಮ ಆರ್ಥಿಕ ಪ್ರಯೋಜನ ಮತ್ತು ಉದ್ಯೋಗವಕಾಶ ಸೃಷ್ಟಿ ಸಾಧ್ಯವಿದೆ.