ಮಹೀಂದ ರಾಜಪಕ್ಸ, ಮಾಜಿ ಅಧ್ಯಕ್ಷ, ಶ್ರೀಲಂಕಾ
ಎರಡನೇ ಅವಧಿಗೆ ಆಯ್ಕೆಯಾಗಿರುವ ಶ್ರೀ. ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು ಮತ್ತು ಹೃತ್ಪೂರ್ವಕ ಶುಭಾಶಯಗಳು. ಭಾರತವನ್ನು ಮುನ್ನಡೆಸುವ ನಿಮ್ಮ ಪಯಣದಲ್ಲಿ ನಿಮ್ಮ ಧೀಮಂತ ನಾಯಕತ್ವದಡಿಯಲ್ಲಿ ಭಾರತದ ಜನತೆಗೆ ಶುಭವಾಗಲೆಂದು ನಾವು ಹಾರೈಸುತ್ತೇವೆ. ನಮ್ಮ ಎರಡೂ ರಾಷ್ಟ್ರಗಳೂ ಹಾಲಿ ಇರುವ ದ್ವಿಪಕ್ಷೀಯ ಬಾಂಧವ್ಯದಿಂದ ನಿರ್ಮಾಣವಾಗಿವೆ, ನಿಮ್ಮ ನಾಯಕತ್ವದಲ್ಲಿ ಪರಸ್ಪರರಿಗೆ ಪ್ರಯೋಜನಕಾರಿಯಾಗುವಂತೆ ಅದನ್ನು ಮತ್ತಷ್ಟು ಬಲಗೊಳಿಸಲು ನಾವು ಹಂಚಿಕೊಂಡು ಮತ್ತು ಒಗ್ಗೂಡಿ ಶ್ರಮಿಸೋಣ