ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ನನ್ನ ಹೆಸರನ್ನು ಉಲ್ಲೇಖಿಸಿದ್ದು ನನಗೆ ಆಶ್ಚರ್ಯವನ್ನು ಉಂಟುಮಾಡಿತು. ಭಾರತವು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ತ ರಾಷ್ಟ್ರವಾಗಿದೆ. ಇಂಥ ದೇಶದ ಚುಕ್ಕಾಣಿ ಹಿಡಿದಿರುವ ಮೋದಿಯವರು ನಮ್ಮ ದೇಶಕ್ಕೆ ಬಂದು, ನನ್ನ ಹೆಸರನ್ನು ಉಲ್ಲೇಖಿಸಿ, ನಮ್ಮ ಸಮುದಾಯದ ಅಸ್ಮಿತೆಯ ಬಗ್ಗೆ ಮಾತನಾಡಿದ್ದು ನಿಜಕ್ಕೂ ನನಗೆ ಸಂದ ಬಹುದೊಡ್ಡ ಗೌರವವಾಗಿದೆ. ನಿಜಕ್ಕೂ ಇದೊಂದು ಅದ್ಭುತ ಸಂಗತಿ! ಶ್ರೀಲಂಕಾದ ಪಾಲಿಗೆ ಭಾರತವು ಹಿರಿಯಣ್ಣನಿದ್ದಂತೆ. ನಮ್ಮ ಸಂಬಂಧ ಯಾವಾಗಲೂ ಹೀಗೆಯೇ ಇದೆ. ನಮಗೆ ಭಾರತದ ನೆರವು ಬೇಕಾಗಿದೆ; ಅದು ನಮಗೆ ಹಲವು ವಿಧಗಳಲ್ಲಿ ಸಹಾಯಹಸ್ತ ಚಾಚಬಹುದು. ಇದು ನಿಜವಾದರೆ ಅದರಿಂದ ನಮ್ಮ ದೇಶಕ್ಕೆ ತುಂಬಾ ಒಳ್ಳೆಯದಾಗಲಿದೆ..... ಮೊದಿಯವರು ಇದುವರೆಗೂ ಹತ್ತಾರು ಸಾಧನೆಗಳನ್ನು ಮಾಡಿದ್ದು, ಅವರ ಜನಪ್ರಿಯತೆಯು ಹೆಚ್ಚಾಗುತ್ತಲೇ ಇದೆ. ಚುನಾವಣೆಯ ಹೊತ್ತಿನಲ್ಲಿ ನೀವಿದನ್ನು ನೋಡಬಹುದು. ಜನರು ಮೋದಿಯವರನ್ನು ಪ್ರೀತಿಸುತ್ತಾರೆ ಎನ್ನುವುದು ನನ್ನ ಭಾವನೆ