ಮೈಕ್ ಪೆನೇಸ್, ಉಪ ರಾಷ್ಟ್ರಾಧ್ಯಕ್ಷರು, ಯುನೈಟೆಡ್ ಸ್ಟೇಟ್ಸ್
ಅಮೆರಿಕದ ಮಿತ್ರ ಮತ್ತು ಸ್ನೇಹಿತನಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೆ, ಭಾರತದ ಸಂಸದೀಯ ಚುನಾವಣೆಯಲ್ಲಿ ತಮ್ಮ ಪಕ್ಷ ಸಾಧಿಸಿದ ಗೆಲುವಿಗೆ ಅಭಿನಂದನೆಗಳು. ಇದು ಪ್ರಜಾಪ್ರಭುತ್ವಕ್ಕೆ ಭಾರತೀಯರ ಬದ್ಧತೆಯ ಬಲವಾದ ಪ್ರದರ್ಶನವಾಗಿತ್ತು! ಸ್ವತಂತ್ರ, ಸುರಕ್ಷಿತ ಮತ್ತು ಹೆಚ್ಚು ಸಮೃದ್ಧಿಯ ವಲಯಕ್ಕಾಗಿ ಭಾರತದೊಂದಿಗೆ ಒಗ್ಗೂಡಿ ಕೆಲಸ ಮಾಡುವುದನ್ನು ಮುಂದುವರಿಸಲು ನಾವು ಎದುರು ನೋಡುತ್ತಿದ್ದೇವೆ.