ರಿಯಾಡ್ ಮೆಝೌರ್, ಮೊರಾಕೊದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ
ಕಾರುಗಳನ್ನು ಉತ್ಪಾದಿಸುವಲ್ಲಿ ಅತ್ಯುತ್ತಮ ಮತ್ತು ಅತ್ಯಂತ ಸ್ಪರ್ಧಾತ್ಮಕ ದೇಶ ಭಾರತ. ಆಫ್ರಿಕಾ, ಭಾರತ ಮತ್ತು ಪ್ರಪಂಚದಲ್ಲಿ ಬೆಳವಣಿಗೆಯನ್ನು ಉತ್ತೇಜಿಸಲು ಭಾರತ ಮತ್ತು ಮೊರಾಕೊ ದಕ್ಷಿಣ-ದಕ್ಷಿಣ ತ್ರಿಕೋನ ಸಹಕಾರದ ಮೂಲಕ ನಿಕಟವಾಗಿ ಕೆಲಸ ಮಾಡಬಹುದು. ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ, ನವೀನ ವಿಚಾರಗಳನ್ನು ಚರ್ಚಿಸಲು ಮತ್ತು ಪರಸ್ಪರ ಪಾಲುದಾರಿಕೆಗಳನ್ನು ರೂಪಿಸಲು ಪ್ರಮುಖ ವೇದಿಕೆಯಾಗಿದೆ.