ಇದು ಕನಸು ನನಸಾಗುವಂತಿದೆ... ನಾನು ಪ್ರಧಾನ ಮಂತ್ರಿಯನ್ನು ‘ಮಹಾನ್ ನಾಯಕ’ ಎಂದು ಪರಿಗಣಿಸುತ್ತೇನೆ ಮತ್ತು ಅವರನ್ನು ಭೇಟಿಯಾಗಲು ಸಂತೋಷವಾಗಿದೆ. ಕನ್ನಡ ಇಂಡಸ್ಟ್ರಿಯಲ್ಲಿ ಏನು ನಡೆಯುತ್ತಿದೆ ಮತ್ತು ನಮಗೆ ಏನು ಬೆಂಬಲ ಬೇಕು ಎಂದು ಅವರು ವಿಚಾರಿಸಿದರು. ಮುಂದೆ ನಾವು ಏನು ಮಾಡಬಹುದು ಎಂಬುದನ್ನೂ ಅವರು ನಮಗೆ ಮಾರ್ಗದರ್ಶನ ಮಾಡಿದರು. ಅವರು ನಮ್ಮ ಮಾತುಗಳನ್ನು ಕೇಳಿದರು ಮತ್ತು ಕಾಂತಾರ ಬಗ್ಗೆ ಚರ್ಚಿಸಿದರು ಮತ್ತು ಪ್ರಪಂಚದಾದ್ಯಂತ ಅದರ ಯಶಸ್ಸಿನ ಬಗ್ಗೆ ನಮಗೆ ಅಭಿನಂದಿಸಿದರು. ಅವರು ಕಾಂತಾರ ಬಗ್ಗೆ ಅನೇಕ ಬಾರಿ ಮಾತನಾಡಿದ್ದು ನನಗೆ ಅಪಾರ ಸಂತೋಷ ತಂದಿದೆ