ಭಾರತದ 17ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ನಿಮ್ಮ ನಾಯಕತ್ವದಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್.ಡಿ.ಎ.) ಸಾಧಿಸಿದ ಅದ್ಭುತ ವಿಜಯಕ್ಕಾಗಿ ನಾನು, ಹೃದಯಪೂರ್ವಕವಾದ ಅಭಿನಂದನೆಗಳನ್ನು ನಿಮಗೆ (ಪ್ರಧಾನಿ ಮೋದಿ) ಸಲ್ಲಿಸುತ್ತೇನೆ. ಈ ಜನಾದೇಶ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಜನರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸದ ಪ್ರತಿಬಿಂಬವಾಗಿದೆ.