ಇತ್ತೀಚೆಗೆ , ಬಲಿಷ್ಠ ನಾಯಕತ್ವ ಮತ್ತು ಸದೃಢ ಆರ್ಥಿಕತೆಯ ಪರಿಣಾಮವಾಗಿ ಎಲ್ಲ ದೇಶಗಳೂ ಭಾರತದಲ್ಲಿ ಹೂಡಿಕೆ ಮಾಡಲು ಅವಕಾಶ ಹುಡುಕುತ್ತಿವೆ, ಇಂದು ಇಡೀ ವಿಶ್ವವೇ ಭಾರತದ ಕಡೆಗೆ ಗಮನ ಕೇಂದ್ರೀಕರಿಸಿದೆ. ಸಧ್ಯದಲ್ಲೇ ಭಾರತವು ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ…. ಈ ಮೊದಲು ಭಾರತವು ಸುಮಾರು 2.5-3.0 ಕೋಟಿ ಅನಿವಾಸಿ ಭಾರತೀಯರಿಗೆ ಹೂಡಿಕೆ ಮಾಡಲು ಹಲವಾರು ನಿರ್ಭಂದನೆಗಳನ್ನು ಹೇರುತ್ತಿತ್ತು, ಆದರೆ ಈಗ ಬಹಳಷ್ಟು ಸುಧಾರಣೆ -ಸರಳತೆಯೊಂದಿಗೆ ಅನಿವಾಸಿ ಹೂಡಿಕೆಯನ್ನೂ ದೇಶೀಯ ಹೂಡಿಕೆಯಾಗಿ ಪರಿಗಣಿಸಲಾಗುತ್ತದೆ. ಎಫ್.ಡಿ.ಐ ಯಲ್ಲಿ ಪ್ರಗತಿಯಾಗಿದೆ ಮತ್ತು ಈಗ ಎಫ್.ಡಿ.ಐ ಮತ್ತು ಎನ್.ಆರ್.ಐ. ಗಳ ಸಮ್ಮೀಲನ ಹೂಡಿಕೆಯೂ ಸಾಧ್ಯವಿದೆ. ಇದು ಸುಗಮ ವ್ಯಾಪಾರದ ಶ‍್ರೇಯಾಂಕ ದಲ್ಲಿ ಏರಿಕೆಯಾಗಲು ಪ್ರಧಾನ ಅಂಶವಾಗಿದೆ