ಸಂಜಯ್ ಮೆಹ್ರೋತ್ರಾ, ಮೈಕ್ರಾನ್‌ನ ಸಿಇಒ
ಭಾರತವನ್ನು ಸೆಮಿಕಂಡಕ್ಟರ್‌ಗಳ ಜಾಗತಿಕ ಕೇಂದ್ರವನ್ನಾಗಿ ಮಾಡುವ ದೃಷ್ಟಿಗೆ ನಾನು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳುತ್ತೇನೆ. ಗುಜರಾತ್‌ನಲ್ಲಿ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಪರೀಕ್ಷಾ ಸೌಲಭ್ಯವನ್ನು ನಿರ್ಮಿಸಲು ಮೈಕ್ರಾನ್ ಬದ್ಧವಾಗಿದೆ. ಗುಜರಾತ್‌ನಲ್ಲಿ ನಮ್ಮ ಯೋಜನೆಯು ಸುಮಾರು 5000 ನೇರ ಉದ್ಯೋಗಗಳನ್ನು ಮತ್ತು ಸಮುದಾಯದಲ್ಲಿ ಹೆಚ್ಚುವರಿ 15,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ನಾವು ಅಂದಾಜು ಮಾಡುತ್ತೇವೆ.