ಸಾಫ್ರಾ ಕಾಟ್ಸ್,  ಸಿಇಒ,  ಒರಾಕಲ್
ಇತ್ತೀಚಿನ ವರ್ಷಗಳಲ್ಲಿ ಭಾರತವು ಇಡೀ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿಯಾದ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಇಲ್ಲಿ ಅತ್ಯಂತ ಪ್ರತಿಭಾವಂತರು ದುಡಿಯುತ್ತಿದ್ದು, ಇಲ್ಲಿನ ಕೆಲವು ಮಹತ್ತರ ಯೋಜನೆಗಳು ವಿಸ್ತರಣೆಗೊಳ್ಳುತ್ತಲೇ ಇವೆ..... ಭಾರತದಲ್ಲಿ ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿರುವ ರಾಜಕೀಯ ನಾಯಕತ್ವವು ಭವಿಷ್ಯದತ್ತ ದಾಪುಗಾಲಿಡಲು ಗಮನ ಹರಿಸಿವೆ. ಇಲ್ಲಿರುವ ಪರಂಪರಾಗತ ಹಳೆಯ ವ್ಯವಸ್ಥೆಯೇನೂ ಇದಕ್ಕೆ ಅಡ್ಡಗಾಲಾಗಿ ಪರಿಣಮಿಸಿಲ್ಲ. ಇಡೀ ದೇಶದಲ್ಲಿ ನಾಗರಿಕರ ಸಬಲೀಕರಣಕ್ಕೆ, ಪಾರದರ್ಶಕತೆಗೆ ಮತ್ತು ಉತ್ತರದಾಯಿತ್ವಕ್ಕೆ `ಡಿಜಿಟಲ್ ಇಂಡಿಯಾ' ಒಂದೇ ಮಾರ್ಗ. ಇಲ್ಲಿನ ನಾಯಕತ್ವವನ್ನು ವಹಿಸಿಕೊಂಡಿರುವ ತಂಡವು ಸಬಲೀಕರಣ ಮತ್ತು ಸೇವೆಗಳ ಪೂರೈಕೆಗೆ ಆದ್ಯತೆ ಕೊಟ್ಟಿದೆ. ಅದಕ್ಕೆ ಬೇಕಾದ ಸಾಧನ-ಸಲಕರಣೆಗಳನ್ನು ನಮ್ಮಂಥ ಕಂಪನಿಗಳು ತಯಾರಿಸಿಕೊಡುತ್ತವೆ. ಈಗ ಇಲ್ಲಿರುವ ಅವಕಾಶಗಳು ಅನಂತವಾಗಿವೆ.