ಸಿದ್ದಾರ್ಥ್ ಜರಾಬಿ, ಸಂಪಾದಕರು, ಬಿಸಿನೆಸ್ ಟೆಲಿವಿಷನ್ ಇಂಡಿಯ
ಸುಗಮ ವ್ಯಾಪಾರ ಸಂಬಂಧಿತ ನಿರ್ಧಾರ ಮಾಡುವ ಅಭೂತಪೂರ್ವ ಕ್ರಮವನ್ನು ನಾನು ನೋಡಿದ್ದೇನೆ. ಈ ರೀತಿಯಲ್ಲಿ ಸುಧಾರಣೆ ಮೂಲಕ ಸುಗಮ ವ್ಯಾಪಾರ ಶ್ರೇಯಾಂಕದಲ್ಲಿ ಇಷ್ಟೊಂದು ವೃದ್ಧಿಗಾಗಿ ಇನ್ನ್ಯಾವುದೇ ಪ್ರಧಾನಮಂತ್ರಿಗಳು ಗಮನ ಕೇಂದ್ರೀಕರಿಸಿದ್ದನ್ನು ನಾನು ಈ ತನಕ ಕಂಡಿಲ್ಲ. ಅವರಿಗೇನಾಗಬೇಕು ಮತ್ತು ಯಾರೊಬ್ಬನ ಪರವಾಗಿ ಯಾವುದೇ ಪಕ್ಷಪಾತವಿಲ್ಲದೆ ಸಂಪೂರ್ಣವಾಗಿ ಪಾರದರ್ಶಕವಾಗಿದೆ ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ. ನಾನಿದನ್ನು ಗುಜರಾತಿನಲ್ಲಿ ಗಮನಿಸಿದ್ದೇನೆ ಮತ್ತು ದೆಹಲಿಯಲ್ಲೂ ಕೂಡಾ ಎಲ್ಲಾ ನೀತಿಗಳೂ ಪ್ರತಿಯೊಬ್ಬರಿಗೂ ಸಮಾನವಾಗಿ ಇರುತ್ತದೆಮದು ನಾನು ಆತ್ಮಸ್ಥೈರ್ಯದಿಂದ ಹೇಳಬಲ್ಲೆ.