ಕೇವಲ ನಾಲ್ಕು ವರ್ಷಗಳ ಕಿರು ಅವದಿಯಲ್ಲಿ ಭಾರತವು 142ನೇ ಸ್ಥಾನದಿಂದ 77ಕ್ಕೆ ಜಿಗಿತ ಕಂಡಿರುವುದು ಬಹಳ ಹರ್ಷದಾಯಕ ಸಂಗತಿಯಾಗಿದೆ. ನನ್ನ ಪ್ರಕಾರ ಇದು ಕೇವಲ ಪ್ರಾರಂಭವಷ್ಟೇ ಆಗಿದೆ. ನಾನು ಭಾರತವನ್ನು ಮೊದಲ 25 ಸ್ಥಾನಗಳೊಳಗೆ ಕಾಣಲು ಇಷ್ಟಪಡುತ್ತೇನೆ. ಯಾವಾಗಲೂ ಬಹು ರಾಷ್ಟ್ರಗಳಲ್ಲಿ ಹೂಡಿಕೆ ಮಾಡಲು ಬಯಸುವ ನಮ್ಮಂತಹ ವೆಸ್ಟರ್ನ್ ಡಿಜಿಟಲ್ ಕಾರ್ಪೋರೇಟ್ ಸಂಸ್ಥೆ, ಹೂಡಿಕೆಗೆ ಆಸಕ್ತಿ ತೋರಿದೆ. ಸದಾ ಹೂಡಿಕೆಯ ಗುರಿ ಹೊಂದಿರುವ ನಮಗೆ, ಇಂದಿನ ಸುಧಾರಿತ ವ್ಯವಸ್ಥೆಗಳು ಭಾರತವನ್ನುಅತ್ಯಂತ ಲಾಭದಾಯಕ ಮಾರುಕಟ್ಟೆಯಾಗಿಸಿದೆ. ನಾವಿಂದು ಅತ್ಯಾಕರ್ಷಕ ಪ್ರಧಾನಮಂತ್ರಿಯನ್ನು ಹೊಂದಿದ್ದೇವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವದ ಒಬ್ಬ ಅತ್ಯುತ್ತಮ ನಾಯಕರಾಗಿದ್ದಾರೆ.