ಸುರೇಶ್ ರೈನಾ, ಕ್ರೀಡಾ ಪಟು
ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿಯವರ ಒಳನೋಟವುಳ್ಳ ನಾಯಕತ್ವದಲ್ಲಿ,ಜಿ20 ಶೃಂಗಸಭೆಯಲ್ಲಿ ಭಾರತದ ಗಮನಾರ್ಹ ಪಾತ್ರವು ಜಾಗತಿಕ ವ್ಯವಹಾರಗಳಲ್ಲಿ ನಮ್ಮ ರಾಷ್ಟ್ರದ ಮಹತ್ವದ ಪ್ರಭಾವವನ್ನು ಪುನರುಚ್ಚರಿಸಿದೆ. ನಮ್ಮ ದೇಶವು ಉಜ್ವಲ ನಾಳೆಗಾಗಿ ಜಾಗತಿಕ ಉಪಕ್ರಮಗಳನ್ನು ಮುನ್ನಡೆಸುತ್ತಿರುವುದನ್ನು ನೋಡಿ ಪ್ರತಿಯೊಬ್ಬ ಭಾರತೀಯನೂ ಅಪಾರ ಹೆಮ್ಮೆ ಪಡಬಹುದು. ಈ ಪ್ರಗತಿಯು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಪ್ರಯೋಜನವನ್ನು ನೀಡುತ್ತದೆ. ನಿಜಕ್ಕೂ, ನಮ್ಮ ರಾಷ್ಟ್ರಕ್ಕೆ ಒಂದು ಹೆಗ್ಗುರುತು ಸಂದರ್ಭ!