ನನ್ನ ಪ್ರಕಾರ, ಸರಕಾರ ಈ ತನಕ ಹಲವಾರು ಅಡೆತಡೆಗಳನ್ನು ನಿವಾರಣೆ ಮಾಡಿದೆ. ಇದು ನಮಗೆ ಬಹಳ ಸಂತೋಷ ತಂದ ವಿಷಯವಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತವನ್ನು ಹೊರಜಗತ್ತಿಗೆ ತೆರೆದಿಟ್ಟಿದ್ದಾರೆ ಮತ್ತು ಸರಕಾರಿ ಆಧಿಕಾರಿಗಳ ಹಸ್ತಕ್ಷೇಪ ದೂರಮಾಡಿ, ಆ ಮೂಲಕ ಆಗುತ್ತಿದ್ದ ವಿಳಂಬದಿಂದ ಮುಕ್ತಗೊಳಿಸಿದ್ದಾರೆ.