ಜಿಎಸ್‍ಟಿಯು ದೇಶದ ತೆರಿಗೆ ಕ್ಷೇತ್ರದಲ್ಲಿ ಬಹಳ ದೊಡ್ಡ ಸುಧಾರಣೆ. ಜಿಎಸ್‍ಟಿಯು ಸರಕುಗಳು ಮತ್ತು ಸೇವೆಗಳ ಮೇಲೆ ಇದ್ದ ವಿವಿಧ ಬಹುಹಂತಗಳ ಪರೋಕ್ಷ ತೆರಿಗೆಗಳ ಭಾರವನ್ನು ನಿವಾರಿಸಲಿದೆ. ಜೊತೆಗೆ ಕೇಂದ್ರ ಮತ್ತು ರಾಜ್ಯ ಹಂತದ ಸುಂಕಗಳು ಮತ್ತು ತೆರಿಗೆಗಳನ್ನು ಒಳಗೊಳ್ಳಲಿದ್ದು, ಆ ಮೂಲಕ ದೇಶವನ್ನು ಒಂದು ರಾಷ್ಟ್ರೀಯ ಮಾರುಕಟ್ಟೆಯನ್ನಾಗಿ ಮಾಡಲಿದೆ. ಜಿಎಸ್‍ಟಿಯು ತುಂಬಾ ಅಗತ್ಯವಾಗಿದ್ದ ಪಾರದರ್ಶಕತೆಯನ್ನು ತರುವ ಜೊತೆಗೆ ಮುಂಬರುವ ವರ್ಷಗಳಲ್ಲಿ ಹೂಡಿಕೆ ಹೆಚ್ಚಲಿದೆ. ಹೆಚ್ಚಿನ ತೆರಿಗೆ ಆದಾಯ ಮತ್ತು ಹೂಡಿಕೆಗಳ ಮೂಲಕ ಭಾರತದ ಜಿಡಿಪಿಯು ಸ್ವಲ್ಪವಾದರೂ ಶೇಕಡಾವಾರು ಹೆಚ್ಚಲಿದೆ ಎಂದು ನಾವು ಆಶಿಸುತ್ತೇವೆ.