ಜೇಮೀ ಡಿಮನ್, ಸಿಇಒ , ಜೆಪಿ ಮೋರ್ಗಾನ್ ಚೇಸ್
ನಾವು ಭಾರತವನ್ನು ಪ್ರೀತಿಸುತ್ತೇವೆ . ನಾವು 1945ರಿಂದ ಇಲ್ಲಿದ್ದೇವೆ . ಈ ಸಮ್ಮೇಳನದಲ್ಲಿ ಭಾರತದ ಬೆಳವಣಿಗೆಯ ಸಾಕ್ಷಿಯಾಗಿದೆ .ನಾವು ನೂರಾರು ಕಂಪನಿಗಳನ್ನು ಮತ್ತು ಇಲ್ಲಿ ಜಗತ್ತಿನೆಲ್ಲೆಡೆಯಿಂದ ಹೂಡಿಕೆದಾರರನ್ನು ಹೊಂದಿದ್ದೇವೆ. ನೀವು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಹೊಂದಿದ್ದೀರಿ ಎಂದು ನಾನು ಭಾರತೀಯ ಜನತೆಗೆ ಹೇಳ ಬಯಸುತ್ತೇನೆ . ಇಲ್ಲಿ ಅದ್ಭುತವಾದ ಕಂಪನಿಗಳಿವೆ ,ಉತ್ತಮ ಶಿಕ್ಷಣ , ಮತ್ತು ಎಲ್ಲಾ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಪ್ರಧಾನಿ . ಇದು ಒಂದು ಶ್ರೇಷ್ಠ ರಾಷ್ಟ್ರ