ಸ್ಟಾರ್ಟ್ ಅಪ್ ಇಂಡಿಯಾ ಒಂದು ಉತ್ತೇಜನಕಾರಿ ಕಾರ್ಯಕ್ರಮವಾಗಿದ್ದು, ಭಾರತದ ಸ್ಟಾರ್ಟ್ ಅಪ್ ಪರಿಸರದ ಶಕ್ತಿಯನ್ನು ಮುನ್ನೆಲೆಗೆ ತರಲಿದೆ. ಇದು ಭಾರತೀಯರ ಆವಿಷ್ಕರಿಸುವ ಮತ್ತು ದೇಶದಲ್ಲಿ ನಾವು ಎದುರಿಸುತ್ತಿರುವ ವಿಶಿಷ್ಟ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವನ್ನು ಎತ್ತಿ ತೋರಿಸಿದೆ. ಆರ್ಥಿಕ ವ್ಯವಸ್ಥೆಯನ್ನು ಸಬಲಗೊಳಿಸಿ, ಬೆಳವಣಿಗೆ ಸಾಧಿಸುವ ಸರ್ಕಾರದ ನಿರ್ಧಾರವು ಮನತಟ್ಟುವಂತಿದೆ. ಈ ಕ್ಷಣದ ತುರ್ತು ಅಗತ್ಯವೆಂದರೆ ಪ್ರಧಾನಿಯವರು ರೂಪಿಸಿದ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು. ಇಂದಿನ ಕಾರ್ಯಕ್ರಮವು ಸ್ಟಾರ್ಟ್ ಅಪ್ ಉದ್ಯಮಗಳನ್ನು ಸ್ಥಾಪಿಸಲು ಕಾಯುತ್ತಿರುವ ಸಾವಿರಾರು ಜನರಿಗೆ ಧೈರ್ಯವನ್ನು ತುಂಬುತ್ತದೆ ಮತ್ತು ಮಹತ್ತರ ವ್ಯತ್ಯಾಸವನ್ನು ಉಂಟು ಮಾಡಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.