ಸಾಫ್ರಾ ಕಾಟ್ಸ್,  ಸಿಇಒ,  ಒರಾಕಲ್
ನಾನು ಪ್ರಧಾನಿ ಮೋದಿಯವರ ಭಾಷಣವನ್ನು (ಅಕ್ಟೋಬರಿನಲ್ಲಿ ಸಿಲಿಕಾನ್ ವ್ಯಾಲಿಯಲ್ಲಿ) ಮೊದಲು ಕೇಳಿದಾಗ, ಅವರ ದೂರದೃಷ್ಟಿ, ಉತ್ಸಾಹ ಮತ್ತು ಅಭಿವೃದ್ಧಿಯ ಬೃಹತ್ ಅವಕಾಶವನ್ನು ಅರ್ಥ ಮಾಡಿಕೊಂಡೆ, ಜೊತೆಗೆ ತಂತ್ರಜ್ಞಾನವು ಭಾರತವನ್ನು ಸಮೃದ್ಧಗೊಳಿಸಲಿದೆ ಹಾಗೂ ವಿಶ್ವವನ್ನು ಇನ್ನಷ್ಟು ಸಮೃದ್ಧಗೊಳಿಸಲಿದೆ. ನಾನು ಭಾರತಕ್ಕೆ ಬರಬೇಕಿದೆ, ಪ್ರಧಾನಿಯವರ ಜೊತೆ ಮಾತನಾಡಲು ಮತ್ತು ಅಲ್ಲಿಯ ಪರಿಸರದಲ್ಲಿರಲು ಬರಬೇಕಿದೆ. ನಿಮಗೆ ಇನ್ನೆಲ್ಲಿ ಇಷ್ಟು ಆಳವಾದ, ವಿಶಾಲವಾದ ದೂರದೃಷ್ಟಿಯನ್ನುಳ್ಳ ಹಾಗೂ ಇಷ್ಟು ಸುಶಿಕ್ಷಿತ ಜನರ ಸಬಲ ಬೌದ್ಧಿಕ ನೆಲೆಯನ್ನು ಕಾಣಲು ಸಾಧ್ಯವಿದೆ?